ETV Bharat / city

ಡಿಜಿಪಿ ಡಾ.ಪಿ.ರವೀಂದ್ರನಾಥ್‌ ವರ್ಗ ರದ್ದುಗೊಳಿಸಲು ಬಸವನಾಗಿದೇವ ಸ್ವಾಮೀಜಿ ಒತ್ತಾಯ - ನಕಲಿ ಜಾತಿ ಪ್ರಮಾಣ ಪತ್ರ

ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಸಮರ ಸಾರಿದ ಪ್ರಾಮಾಣಿಕ ಅಧಿಕಾರಿ ರವೀಂದ್ರನಾಥ್ ಅವರನ್ನು ಸರ್ಕಾರ ವಿನಾಕಾರಣ ಪೊಲೀಸ್ ತರಬೇತಿ ವಿಭಾಗಕ್ಕೆ ವರ್ಗಾವಣೆ ಮಾಡಿದ್ದು,‌ ಅದರಿಂದ ಅವರು ಬೇಸತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸರ್ಕಾರದ ವಿರುದ್ಧ ಛಲವಾದಿ ಪೀಠದ ಜಗದ್ಗುರು ಶ್ರೀ ಬಸವನಾಗಿದೇವ ಸ್ವಾಮೀಜಿ ದೂರಿದರು.

ಬಸವನಾಗಿದೇವ ಸ್ವಾಮೀಜಿ ಸುದ್ದಿಗೋಷ್ಠಿ
ಬಸವನಾಗಿದೇವ ಸ್ವಾಮೀಜಿ ಸುದ್ದಿಗೋಷ್ಠಿ
author img

By

Published : May 18, 2022, 2:16 PM IST

ದಾವಣಗೆರೆ: ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತ, ನಕಲಿ ಎಸ್​ಸಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಸಮರ ಸಾರಿದ್ದ ಡಿಜಿಪಿ ಡಾ. ಪಿ. ರವೀಂದ್ರನಾಥ್‌ ಅವರನ್ನು ವರ್ಗಾವಣೆ ಮಾಡಿರುವುದು ಖಂಡನೀಯ ಎಂದು ಛಲವಾದಿ ಪೀಠದ ಜಗದ್ಗುರು ಶ್ರೀ ಬಸವನಾಗಿದೇವ ಸ್ವಾಮೀಜಿ ಸರ್ಕಾರದ‌ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಸಮರ ಸಾರಿದ ಪ್ರಾಮಾಣಿಕ ಅಧಿಕಾರಿ ರವೀಂದ್ರನಾಥ್ ಅವರನ್ನು ಸರ್ಕಾರ ವಿನಾಕಾರಣ ಪೊಲೀಸ್ ತರಬೇತಿ ವಿಭಾಗಕ್ಕೆ ವರ್ಗಾವಣೆ ಮಾಡಿದ್ದು,‌ ಅದರಿಂದ ಅವರು ಬೇಸತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸರ್ಕಾರದ ವಿರುದ್ಧ ದೂರಿದರು. ರಾಜ್ಯ ಸರ್ಕಾರ ಕೂಡಲೇ ಅವರ ರಾಜೀನಾಮೆ ಅಂಗೀಕರಿಸದೆ, ಮರಳಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಲಾಯಕ್ಕೆ ಮರು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಬಸವನಾಗಿದೇವ ಸ್ವಾಮೀಜಿ ಸುದ್ದಿಗೋಷ್ಠಿ

ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಸಮರ ಸಾರಿದ್ದೇ ಕಂಟಕವಾಯಿತು : ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ಹುದ್ದೆ ಪಡೆದು ಆಯಾ ಇಲಾಖೆಗಳಲ್ಲಿ ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿದ್ದ 1,097 ಜನರ ವಿರುದ್ಧ ರವೀಂದ್ರನಾಥ್ ಎಫ್​ಐಆರ್ ದಾಖಲಿಸಿದ್ದಾರೆ. ಅದರಲ್ಲಿ 89 ಜನ ನೌಕರರನ್ನು ಸೇವೆಯಿಂದ ವಜಾಗೊಳಿಸಿದ್ದಾರೆ ಹಾಗೂ 165 ಪ್ರಕರಣಗಳಲ್ಲಿ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇಂತಹ ದಕ್ಷ ಅಧಿಕಾರಿಯನ್ನ ವರ್ಗಾಯಿಸುವುದು ಸರಿಯಲ್ಲ. ದಲಿತರ ರಕ್ಷಣೆ ಮಾಡುತ್ತಿರುವ, ಸಂವಿಧಾನ ರಕ್ಷಿಸುತ್ತಿರುವ ಪ್ರಾಮಾಣಿಕ ಅಧಿಕಾರಿ ರವೀಂದ್ರನಾಥ್ ಅವರನ್ನು ಮತ್ತೆ ಸಿಆರ್‌ಇ ಕೋಶಕ್ಕೆ ಮರು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಸವದಿ, ಕತ್ತಿ, ಜಾರಕಿಹೊಳಿ ಬ್ರದರ್ಸ್ ಭಿನ್ನರಾಗ: ನಿರಾಣಿ, ಶಹಾಪುರಗೆ ಹೆಚ್ಚಿದ ಆತಂಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.