ETV Bharat / city

ದೇವರಜೀವನ ಹಳ್ಳಿ ಗಲಭೆ: ಘಟನೆಯ ಹಿಂದಿರುವ ಕಾಣದ ಕೈಗಳು ಯಾವುವು?

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ‌ಯಲ್ಲಿ ನಡೆದ ಕಿಡಿಗೇಡಿಗಳ ಅಟ್ಟಹಾಸ 'ಪೂರ್ವ ನಿಯೋಜಿತ' ಕೃತ್ಯ ಎನ್ನುವುದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಪೊಲೀಸ್​​ ಠಾಣೆ, ನೂರಾರು ದ್ವಿಚಕ್ರ ವಾಹನಗಳು, ಮನೆಗಳು ದುಷ್ಕರ್ಮಿಗಳ ರೌದ್ರನರ್ತನಕ್ಕೆ ಧಗಧಗನೇ ಹೊತ್ತಿ ಉರಿದಿವೆ. ಸದ್ಯ ಪ್ರಕರಣವನ್ನು ಮ್ಯಾಜಿಸ್ಟೀರಿಯಲ್‌ ತನಿಖೆಗೆ ಆದೇಶಿಸಲಾಗಿದೆ.

bangalore-dj-halli-k-g-halli-violence
ಡಿ.ಜೆ ಹಳ್ಳಿ ಗಲಭೆ ಪ್ರಕರಣ
author img

By

Published : Aug 13, 2020, 3:54 PM IST

ಬೆಂಗಳೂರು : ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ‌ಯಲ್ಲಿ ನಡೆದ‌ ದುರಂತ 'ಪೂರ್ವ ನಿಯೋಜಿತವಾದ ಕೃತ್ಯ' ಅನ್ನೋದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ‌. ಕಿಡಿಗೇಡಿಗಳು ಈ ಕೃತ್ಯವನ್ನು ಸಂಜೆ ಸುಮಾರು 7-8 ಗಂಟೆಯ ವೇಳೆಗೆ ನಡೆಸಿದ್ದು, ಇದು ಪೊಲೀಸರು ರಿಲಿವರ್ ತೆಗೆದುಕೊಳ್ಳುವ ಸಮಯವಾಗಿತ್ತು. ಈ ಸಂದರ್ಭದಲ್ಲಿ ರಾತ್ರಿ ಪಾಳಿ ಕೆಲಸ ನಿರ್ವಹಿಸುವ ಸಿಬ್ಬಂದಿ ಕಡಿಮೆ ಸಂಖ್ಯೆಯಲ್ಲಿರುತ್ತಾರೆ ಅನ್ನೋ ಲೆಕ್ಕಾಚಾರದಲ್ಲಿ ಆರೋಪಿಗಳು ರೌದ್ರಾವತಾರ ಪ್ರದರ್ಶಿಸಿದ್ದಾರೆ.

ಕಿಡಿಗೇಡಿಗಳ ಮೊದಲ ಟಾರ್ಗೆಟ್ ನವೀನ್​​ ಹಾಗೂ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಆಗಿತ್ತು. ಘಟನೆಗೂ ಮೊದಲು ನವೀನ್ ಮೇಲೆ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಯಲ್ಲಿ ದೂರು ನೀಡಲಾಗಿದೆ. ಆರೋಪಿಯ ಮೇಲೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳದೆ ಇರುವುದು ಕಿಡಿಗೇಡಿಗಳ ಪಿತ್ತ ನೆತ್ತಿಗೇರಲು ಕಾರಣವಾಗಿತ್ತು.

ಪೂರ್ವ ವಿಭಾಗ ಠಾಣಾ ವ್ಯಾಪ್ತಿಯ ಬಳಿ ಬಹುತೇಕ ಮುಸ್ಲಿಂ ಸಮುದಾಯದವರೇ ವಾಸವಾಗಿದ್ದಾರೆ. ಆದರೆ ಕಿಡಿಗೇಡಿಗಳು ಮೊದಲೇ ಫ್ಲಾನ್ ಮಾಡಿ ಗಲಭೆಗೆ ಕುಮ್ಮಕ್ಕು ನೀಡಿ, ಗಲಾಟೆ ಮಾಡುವವರನ್ನು ಆಯ್ಕೆ ಮಾಡಿಕೊಂಡಿಕೊಂಡು, ಹಣ ಕೊಟ್ಟು ರೆಡಿ‌ ಮಾಡಿಕೊಂಡಿದ್ದಾರೆ. ನಂತರ ಪೆಟ್ರೋಲ್ ಬಾಂಬ್, ಗ್ಯಾಸ್, ಡೀಸೆಲ್ ತಂದು ಸುರಿದು ಮನಸೋ ಇಚ್ಛೆ ಬೆಂಕಿ‌ ಹಚ್ಚಿದ್ದಾರೆ. ಈ ಘಟನೆ ನಡೆದಿರುವ ಸ್ಥಳ ಕಿರಿದಾದ ರಸ್ತೆಗಳಿಂದ ಕೂಡಿದ್ದು, ಹಿಂಸಾಚಾರ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಳಿಸಲು ದುಷ್ಕರ್ಮಿಗಳಿಗೆ ಇನ್ನಷ್ಟು ಅನುಕೂಲ ಕಲ್ಪಿಸಿತ್ತು.

ಇಲ್ಲಿಯವರೆಗೆ ಪೊಲೀಸರ ತನಿಖೆ ವೇಳೆ 6 ಮನೆ, 10 ಅಂಗಡಿ, 80ಕ್ಕೂ ಹೆಚ್ಚು ವಾಹನಗಳು, 70 ಪೊಲೀಸರಿಗೆ ಗಾಯ, ಶಾಸಕರ ಕಚೇರಿ, 30 ಸಾರ್ವಜನಿಕರಿಗೆ ಗಾಯವಾಗಿರುವುದು ಗೊತ್ತಾಗಿದೆ.

ಗಲಭೆಗೆ ಎಸ್​ಡಿಪಿಐ ಸಂಘಟನೆ ನಂಟು

ಈ ಹಿಂದೆ ಶಿವಾಜಿನಗರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ, ಮಂಗಳೂರು ಗಲಭೆ ‌ನಡೆದಾಗ ಎಸ್​ಡಿಪಿಐ ಪಾತ್ರ ಪ್ರಮುಖವಾಗಿ ಕೇಳಿ ಬಂದಿತ್ತು. ಸದ್ಯ ಈ ಘಟನೆಯ ಮಾಸ್ಟರ್ ಮೈಂಡ್ ಕೂಡ ಮುಜಾಮಿಲ್ ಪಾಷನೆಂದೇ ಪೊಲೀಸರು ಹೇಳ್ತಿದ್ದಾರೆ. ಈತ ಎಸ್​ಡಿಪಿಐನಿಂದ ಚುನಾವಣೆಗೆ ಸ್ಪರ್ಧಿಸಿ ಶಾಸಕನ ಬೆಂಬಲಿಗ ಅಭ್ಯರ್ಥಿ ಎದುರು ಪರಾಜಿತನಾಗಿದ್ದ. ಇದೀಗ ನವೀನ್ ಮೇಲೆ ಡಿ.ಜೆ.ಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದ. ಸದ್ಯ ಈ ಘಟನೆಯಲ್ಲಿ ಎಸ್​ಡಿಪಿಐ ಸಂಘಟನೆಯ ಕೈವಾಡ ಇರುವುದಕ್ಕೆ ಪೊಲೀಸರಿಗೆ ಕೆಲ ಸಾಕ್ಷ್ಯ ಗಳು ‌ಲಭ್ಯವಾಗಿದೆ.

ಗಲಭೆ ನಡೆಯುವ ಸಣ್ಣ ಸುಳಿವು ಕೂಡಾ ಪೊಲೀಸರಿಗೆ ಸಿಕ್ಕಿಲ್ಲ

ಪೂರ್ವಯೋಜಿತ ಕೃತ್ಯದಿಂದಾಗಿ ಕಿಡಿಗೇಡಿಗಳು ಶಿವಾಜಿನಗರ, ಆರ್.ಟಿ.ನಗರ, ಪುಲಕೇಶಿ ನಗರ ‌ಕಡೆಯಿಂದ ಬಂದಿದ್ದಾರೆ. ದಾಳಿ‌ ಮಾಡುವವರೆಗೂ ಪೊಲೀಸರಿಗೆ ಮಾಹಿತಿನೇ ಇರಲಿಲ್ಲ. ದಾಳಿ ‌ನಡೆದಾಗ ಠಾಣೆಯಲ್ಲಿ ಸಿಬ್ಬಂದಿಯ ಸಂಖ್ಯೆ ಕೂಡ ತೀರಾ ಕಡಿಮೆ ಇದ್ದಿದ್ದರಿಂದ ಪೊಲೀಸರು ಕೈಕಟ್ಟಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆ ದೊಡ್ಡ ಸ್ವರೂಪ ಪಡೆದುಕೊಳ್ಳುತ್ತಿದ್ದ ಹಾಗೆಯೇ ಸ್ಥಳಕ್ಕೆ ಇತರೆ ಪೊಲೀಸರು ಬರಲಾಗದ ರೀತಿ ಬೆಂಕಿ ಕೆನ್ನಾಲಿಗೆ ಕಂಡು ಬರುತ್ತಿತ್ತು ಎಂದಿದ್ದಾರೆ ತನಿಖಾಧಿಕಾರಿಗಳು.

ಪ್ರಮುಖ ಆರೋಪಿಗಳು ಕಸ್ಟಡಿಗೆ: ಇನ್ನುಳಿದವರಿಗೆ ನ್ಯಾಯಂಗ ಬಂಧನ

ಸದ್ಯ ಸುಮಾರು‌ 150ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದು, 9 ಎಫ್​ಐಆರ್​‌ಗಳಲ್ಲಿ ‌ನಮೂದು ಮಾಡಿರುವ ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಯಲಿದೆ. ಹಾಗೆಯೇ ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ ಎನ್ನಲಾದ ನವೀನ್ ಎಂಬಾತನನ್ನು 5 ದಿನಗಳ ಕಾಲ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈತನ ಹೇಳಿಕೆ, ಘಟನೆ, ಮೊಬೈಲ್ ಕಳ್ಳತನ, ಇವತ್ತಿನ ಫೇಸ್ಬುಕ್ ಪೋಸ್ಟ್ ಎಲ್ಲಾ ದ್ವಂದ್ವವಾಗಿರುವ ಕಾರಣ ಸದ್ಯ ತನಿಖೆ ಚುರುಕುಗೊಂಡಿದೆ. ಹಿರಿಯಾಧಿಕಾರಿಗಳು ಆತನನ್ನು ಗೌಪ್ಯ ಸ್ಥಳದಲ್ಲಿರಿಸಿ ತನಿಖೆ ನಡೆಸುತ್ತಿದ್ದಾರೆ.

ಗಲಭೆಪೀಡಿತ ಪ್ರದೇಶದಲ್ಲಿ ಗ್ರೌಂಡ್ ಲೆವೆಲ್ ತನಿಖೆ

ಸಿಸಿಬಿ ಹಿರಿಯಾಧಿಕಾರಿಗಳು, ಬೆಂಗಳೂರು ಪೂರ್ವ ವಿಭಾಗದ ಪೊಲೀಸ್‌ ಅಧಿಕಾರಿಗಳು, ಈ ಹಿಂದೆ ಪೂರ್ವ ವಿಭಾಗದಲ್ಲಿ ಕೆಲಸ‌ ಮಾಡಿದ ಅಧಿಕಾರಿಗಳನ್ನು ಬಳಸಿಕೊಂಡು ಇಂಚಿಚೂ ತನಿಖೆ ನಡೆಯುತ್ತಿದೆ. ಸದ್ಯ ಆರೋಪಿಗಳ ಹಿನ್ನೆಲೆ, ಬೆಂಕಿಗಾಹುತಿಯಾದ ವಾಹನ, ವಸ್ತು, ರಸ್ತೆ ಬದಿಯ ಸಿಸಿಟಿವಿ, ಅಖಂಡ ಶ್ರೀನಿವಾಸ ಮೂರ್ತಿ, ನವೀನ್ ಹೇಳಿಕೆ ಪಡೆದು ದುಷ್ಕರ್ಮಿಗಳು ಬಳಸಿದ ಮರದ ತುಂಡು, ಕಬ್ಬಿಣದ ರಾಡ್, ಮದ್ಯದ ಬಾಟಲಿ, ಅಲ್ಯೂಮಿನಿಯಮ್ ರಾಡ್, ಪ್ರತಿಯೊಂದನ್ನೂ ಪರಿಶೀಲನೆ ಮಾಡಿದ್ದಾರೆ. ಹಾಗೆಯೇ ಇದಕ್ಕೆ ಎಫ್​​ಎಸ್​ಎಲ್​​ ಟೀಂ ಸಾಥ್ ನೀಡಿದ್ದಾರೆ.

ಪೊಲೀಸರಲ್ಲಿ ಆವರಿಸಿದ ಆತಂಕ

ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಗೆ ಬೆಂಕಿ ಹಚ್ಚಿದ್ದು, ಇದರಲ್ಲಿ ಡಿ.ಜೆ.ಹಳ್ಳಿ ಠಾಣೆಗೆ ಹೆಚ್ಚು ಹಾನಿಯಾಗಿದೆ. ಹೀಗಾಗಿ ಘಟನೆ ನಡೆದ ಸಂದರ್ಭದಲ್ಲಿದ್ದ ಪೊಲೀಸರು ಪ್ರಾಣದ ಹಂಗು ತೊರೆದು ಕಿಡಿಗೇಡಿಗಳ ಜೊತೆ ಹೋರಾಟ ಮಾಡಿದ್ದರು. ಪ್ರಾಣ ಉಳಿಸಿಕೊಂಡ ಬಳಿಕ ಪೊಲೀಸರು ಇಂದು ತಮ್ಮ ನೋವು ಹೊರಹಾಕಿದ್ದಾರೆ. ಖಾಕಿ ಅಂದ್ರೆ ಸಮಾಜ ಕಾಯೋರು ಅಂತಾರೆ. ಆದರೆ ನಾವು ಕೆಲಸ ನಿರ್ವಹಣೆ ಮಾಡುವ ಠಾಣೆ ಸುಟ್ಟು ಹೋಗಿದೆ. ಮತ್ತೆ ಈ ಸುಂದರ ಠಾಣೆಯ ಸೌಂದರ್ಯ ವಾಪಸ್ಸು ಬರುತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಯಾಕಂದ್ರೆ ಕೆ.ಜಿ‌.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ನೂತನವಾಗಿ ಉದ್ಘಾಟನೆ ಮಾಡಿದ ಠಾಣೆಗಳಾಗಿದ್ದವು.

ಆರೋಪಿಗಳ ಪೋಷಕರ ಅಳಲೇನು ಗೊತ್ತೇ?

ಘಟನೆ ನಡೆದಾಗ ಸೆರೆಯಾದ ದೃಶ್ಯಾವಳಿಗಳ ಆಧಾರದ ‌ಮೇರೆಗೆ ಪೊಲೀಸರು 150 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಕೆಲ‌ ಕುಟುಂಬಸ್ಥರು ತಮ್ಮ ಮನೆಯವರನ್ನು ವಶಕ್ಕೆ ಪಡೆದಿರುವ ವಿಚಾರ ತಿಳಿದು ಇಂದು ಠಾಣೆಗೆ ಆಗಮಿಸಿ ತಮ್ಮವರು ತಪ್ಪು ಮಾಡಿಲ್ಲವೆಂದು ಗೋಗರೆದಿದ್ದಾರೆ. ಪೊಲೀಸರು ಮೊದಲೇ ಕೋಪದಲ್ಲಿದ್ದು, ಇವರ ಮಾತು ಕೇಳದ ಪರಿಸ್ಥಿತಿಯಲ್ಲಿದ್ದಾರೆ. ಹೊರಗೆ ಹೋಗಿ ಇಲ್ಲಾಂದ್ರೆ ನಿಮ್ಮನ್ನೂ ಕೂಡ ಒಳಗೆ ಹಾಕಬೇಕಾಗುತ್ತೆ. ತನಿಖೆ ನಡೀತಿದೆ ಎಂದು ಗದರಿಸಿ ವಾಪಸ್ಸು ಕಳುಹಿಸಿದ್ದಾರೆ.

ಬೆಂಗಳೂರು ಪೂರ್ವ ವಿಭಾಗ ವ್ಯಾಪ್ತಿ ಬೂದಿ ಮುಚ್ಚಿದ ಕೆಂಡದ ಹಾಗಿದೆ. ಖಾಕಿ ಹಾಗೂ ವಿಶೇಷ ತಂಡ ಈ ಪ್ರದೇಶಗಳಲ್ಲಿ ಯಾರೂ ಕೂಡಾ ಬಾಲ ಬಿಚ್ಚದ ಹಾಗೆ ಮುನ್ನೆಚ್ಚರಿಕೆ ವಹಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.