ETV Bharat / city

ದಿಂಗಾಲೇಶ್ವರ ಸ್ವಾಮೀಜಿ ಈ ರೀತಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರಲ್ಲ: ಬಿಎಸ್​ವೈ - ದಿಂಗಾಲೇಶ್ವರ ಶ್ರೀಗಳ​​ ಕಮಿಷನ್ ‌ಆರೋಪ

ಸರ್ಕಾರದ ವಿರುದ್ಧ ದಿಂಗಾಲೇಶ್ವರ ಶ್ರೀಗಳ​​ ಕಮೀಷನ್ ‌ಆರೋಪಕ್ಕೆ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ..

B S Yediyurappa reacts on Dingaleshwara shree Commission statement
ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ
author img

By

Published : Apr 19, 2022, 12:31 PM IST

Updated : Apr 19, 2022, 12:45 PM IST

ದಾವಣಗೆರೆ : ಸ್ವಾಮೀಜಿ ಆದವರು ಈ ರೀತಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವಂತಥದ್ದಲ್ಲ ಎಂದು ಶಿರಹಟ್ಟಿಯ ಶ್ರೀ ಫಕ್ಕಿರೇಶ್ವರ ಸ್ವಾಮಿ ಮಠದ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಮಠಗಳಿಗೆ ಅನುದಾನ‌ ನೀಡುವಾಗ ಶೇ.30ರಷ್ಟು ಕಮೀಷನ್ ಪಡೆಯಲಾಗುತ್ತಿದೆ ಎಂದು ಆರೋಪಿದ್ದಾರೆ.‌ ಓರ್ವ ಸ್ವಾಮೀಜಿ ಆಗಿ ಈ ರೀತಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವ ವಿಚಾರವಲ್ಲ ಎಂದರು.

ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡುವ ಯತ್ನ ನಡೆಯುತ್ತಿವೆ. ಮೊದಲು ರಾಜ್ಯದಲ್ಲಿ ಕೋಮು ಸಾಮರಸ್ಯ ಇತ್ತು. ಈಗಲೂ‌‌ ಕೂಡ ರಾಜ್ಯದಲ್ಲಿ ಸಾಮರಸ್ಯ ಇದೆ. ಆದ್ರೆ, ಕೆಲವರು ಉದ್ದೇಶ ಪೂರ್ವಕವಾಗಿ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಹುಬ್ಬಳಿ ಗಲಭೆ ನಡೆದ ಕೆಲ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶಿರಹಟ್ಟಿಯ ಶ್ರೀ ಫಕ್ಕಿರೇಶ್ವರ ಸ್ವಾಮಿ ಮಠದ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿರುವುದು..

ಬಳಿಕ ಗಲಭೆಗೆ ಕಾರಣಕರ್ತನಾದ ಸಮಾಜವೊಂದರ ಮುಖಂಡ ಅಲ್ತಾಫ್ ಹಳ್ಳೂರ್ ಎಂಬುವನನ್ನು ಕೂಡ ಬಂಧಿಸಿದ್ದಾರೆ. ಕೆಲವರು ಪೊಲೀಸ್ ಠಾಣೆಗೆ ಹೋಗಿ ಗಲಭೆ ಮಾಡಿ ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಸಿಬ್ಬಂದಿ ಗಾಯಗೊಂಡಿದ್ದಾರೆ. ಇಂಥವರ ಬಗ್ಗೆ ಪರ ವಹಿಸಿ ಕಾಂಗ್ರೆಸ್ ಮುಖಂಡರು ಅಮಾಯಕರನ್ನು ಬಂಧಿಸಿಬಾರದು ಎಂದು ಹೇಳುತ್ತಿದ್ದಾರೆ.

ಬಂಧಿಸಿದವರನ್ನು ಅಮಾಯಕರೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರೇ ಯಾರು ಅಮಾಯಕರು? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರು ಬೇಕಿದ್ದರೆ ಹುಬ್ಬಳ್ಳಿಗೆ ಹೋಗಿ ವಾಸ್ತವ ಸ್ಥಿತಿ ನೋಡಿಕೊಂಡು ಬರಲಿ ಎಂದರು.‌

ಇದನ್ನೂ ಓದಿ: ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡಬೇಡಿ: ಕಮಿಷನ್ ‌ಆರೋಪಕ್ಕೆ ವಜ್ರದೇಹಿ ಸ್ವಾಮೀಜಿ ತಿರುಗೇಟು

ಗೃಹ ಸಚಿವ ಆರಗ ಜ್ಞಾನೇಂದ್ರ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ‌. ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಕಾರಣ ಆದವರನ್ನು ಬಂಧಿಸಲಾಗಿದೆ. ಯಾರೋ ಒಬ್ಬರು ಹೇಳಿಕೆ ನೀಡುತ್ತಾರೆ ಅಂದ್ರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ ಟಾಂಗ್ ಕೊಟ್ಟರು.‌

ಮಿಷನ್ 150 ಟಾರ್ಗೆಟ್ ಇಟ್ಟುಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇವೆ. ಈಗಾಗಲೇ ವಿಜಯನಗರದಲ್ಲಿ ನಡೆದ ಬಿಜೆಪಿ ಕಾರ್ಯ ಕಾರಣಿಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಚುನಾವಣೆಗೂ ಒಂದು ವರ್ಷ ಮೊದಲೇ ಪಕ್ಷದ ಸಂಘಟನೆಗೆ ಮುಂದಾಗಿದ್ದೇವೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಿಜೆಪಿಯಲ್ಲಿ ಹೊಸ ರೀತಿಯ ಉತ್ಸಾಹ ಬಂದಿದೆ.

ದೇಶದಲ್ಲಿ ಕಾಂಗ್ರೆಸ್ ನಿರ್ಣಾಮವಾಗಿದೆ. ರಾಜ್ಯದಲ್ಲಿ ಸ್ವಲ್ಪ ಉಸಿರಾಡುತ್ತಿದೆ. ಇಲ್ಲಿಯೂ ಸಹ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸುವ ಕೆಲಸವನ್ನು ಬಿಜೆಪಿ ‌ಮಾಡುತ್ತಿದೆ ಎಂದರು.

Last Updated : Apr 19, 2022, 12:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.