ETV Bharat / city

ಬೇಗ ನಮ್ಮನ್ನು ರಾಜ್ಯಕ್ಕೆ ಕರೆತರುವ ಪ್ರಯತ್ನ ಮಾಡಿ: ಖಾರ್ಕೀವ್‌ನಲ್ಲಿರುವ ಅಥಣಿ, ದಾವಣಗೆರೆ ವಿದ್ಯಾರ್ಥಿಗಳ ಮನವಿ - ಉಕ್ರೇನ್‌ ಮೇಲೆ ರಷ್ಯಾ ದಾಳಿ

ಉಕ್ರೇನ್‌ನ ಖಾರ್ಕೀವ್ ನಗರದಲ್ಲಿ ಸಿಲಿಕಿರುವ ಅಥಣಿ ಮೂಲದ ವಿದ್ಯಾರ್ಥಿಗಳು ಬೇಗ ತಮ್ಮನ್ನು ರಕ್ಷಿಸುವ ಪ್ರಯತ್ನ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿರುವ ವಿಡಿಯೋ ಶೇರ್‌ ಮಾಡಿದ್ದಾರೆ.

Athani based students appeals to evacuate to india from Ukraine
ಆದಷ್ಟು ಬೇಗ ನಮ್ಮನ್ನು ದೇಶಕ್ಕೆ ವಾಪಸ್‌ ಕರೆತರುವ ಪ್ರಯತ್ನ ಮಾಡಿ: ಉಕ್ರೇನ್‌ನಲ್ಲಿರುವ ಅಥಣಿ ವಿದ್ಯಾರ್ಥಿಗಳ ಮನವಿ
author img

By

Published : Feb 28, 2022, 3:44 PM IST

Updated : Feb 28, 2022, 4:42 PM IST

ಅಥಣಿ/ದಾವಣಗೆರೆ: ಉಕ್ರೇನ್ ಹಾಗೂ ರಷ್ಯಾ ದೇಶಗಳ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಸದ್ಯ ಕರುನಾಡಿನ ವಿದ್ಯಾರ್ಥಿಗಳು ಉಕ್ರೇನ್​ನ ಖಾರ್ಕೀವ್‌ನಲ್ಲಿ ಪರದಾಡುವಂತ್ತಿದ್ದು, ತಮ್ಮನ್ನು ಬೇಗ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ.

ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದ ರಕ್ಷಿತ್ ಗಣಿ, ಖಾರ್ಕೀವ್ ಯೂನಿವರ್ಸಿಟಿಯಲ್ಲಿ ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿಯ ಪ್ರವೀಣ್ ಬಾದಾಮಿ‌ ಹಾಗೂ ಗಗನ್ ದೀಪ್ ಎಂಬ ಇಬ್ಬರು ವಿದ್ಯಾರ್ಥಿಗಳು 'ಈಟಿವಿ ಭಾರತ' ಮುಖಾಂತರ ಕೇಂದ್ರ ಸರ್ಕಾರಕ್ಕೆ ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ.

ಬೇಗ ನಮ್ಮನ್ನು ರಾಜ್ಯಕ್ಕೆ ಕರೆತರುವ ಪ್ರಯತ್ನ ಮಾಡಿ: ಖಾರ್ಕೀವ್‌ನಲ್ಲಿರುವ ಅಥಣಿ, ದಾವಣಗೆರೆ ವಿದ್ಯಾರ್ಥಿಗಳ ಮನವಿ

ಸದ್ಯ ಖಾರ್ಕೀವ್‌ ನಗರದಲ್ಲಿ 230 ವಿದ್ಯಾರ್ಥಿಗಳಿದ್ದು, ನಮ್ಮ ಆರೋಗ್ಯ ದಿನೇ ದಿನೇ ಹದಗೆಡುತ್ತಿದೆ. ಆಹಾರ- ನೀರು ಸರಿಯಾಗಿ ಸಿಗುತ್ತಿಲ್ಲ, ಬ್ಯಾಂಕ್ ಬಂದಾಗಿದೆ. ನಮ್ಮ ಹತ್ತಿರ ಇರುವ ಆಹಾರ ಪದಾರ್ಥಗಳು ಖಾಲಿಯಾಗಿವೆ. ದಯವಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮನ್ನು ರಕ್ಷಣೆ ಮಾಡಿ ಅಂತಾ ಮನವಿ ಮಾಡಿದ್ದಾರೆ.

ಇಲ್ಲಿ ಯಾವುದೇ ಅಧಿಕಾರಿಗಳು ನಮ್ಮನ್ನು ಸಂಪರ್ಕ ಮಾಡಿಲ್ಲಾ. ಆದಷ್ಟು ಬೇಗನೆ ನಮ್ಮನ್ನು ದೇಶಕ್ಕೆ ಕರೆತರುವ ಪ್ರಯತ್ನ ಮಾಡಲಿ ಎಂದು ಯುದ್ಧ ನಡೆಯುವ ಸ್ಥಳದಿಂದಲೇ ವಿಡಿಯೋ ಮೂಲಕ ತಮ್ಮ ಅಳಲನ್ನು ವಿದ್ಯಾರ್ಥಿಗಳು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ಸಿಲುಕಿದ ಕಾಫಿನಾಡಿನ ವಿದ್ಯಾರ್ಥಿಗಳು: ತಾಯ್ನಾಡಿಗೆ ಕರೆಸಿಕೊಳ್ಳುವಂತೆ ಮನವಿ

Last Updated : Feb 28, 2022, 4:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.