ETV Bharat / city

ವೃದ್ಧ ದಂಪತಿ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು.. ಬೆಚ್ಚಿಬಿದ್ದ ದಾವಣಗೆರೆ ಜನತೆ - ದಾವಣಗೆರೆಯಲ್ಲಿ ವೃದ್ಧ ದಂಪತಿಯ ಕೊಲೆ

ನಿನ್ನೆ ತಡರಾತ್ರಿ ವೃದ್ಧ ದಂಪತಿಯ ಕೊಲೆ ನಡೆದಿದ್ದು, ದಾವಣಗೆರೆ ಬೆಚ್ಚಿಬಿದ್ದಿದೆ.

An elderly couple murdered at davanagere
ದಾವಣಗೆರೆಯಲ್ಲಿ ವೃದ್ಧ ದಂಪತಿಯ ಕೊಲೆ
author img

By

Published : Jan 25, 2022, 9:44 AM IST

ದಾವಣಗೆರೆ: ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ವೃದ್ಧ ದಂಪತಿ ಕೊಚ್ಚಿ ಕೊಲೆ ಮಾಡಿದ್ದು, ಇಡೀ ದಾವಣಗೆರೆ ಬೆಚ್ಚಿಬಿದ್ದಿದೆ. ಗುರುಸಿದ್ದಯ್ಯ (80) ಸರೋಜಮ್ಮ (75) ಕೊಲೆಯಾದ ವೃದ್ಧ ದಂಪತಿ.

ವೃದ್ಧ ದಂಪತಿ ಕೊಲೆಗೈದ ದುಷ್ಕರ್ಮಿಗಳು

ನಿನ್ನೆ ತಡರಾತ್ರಿ ಮನೆಗೆ ನುಗ್ಗಿ ‌ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ವೃದ್ಧ ಪತಿ‌ ಪತ್ನಿ ಇಬ್ಬರೇ ವಾಸ ಇರುವುದನ್ನು ಕಂಡು ಕೊಲೆ ಮಾಡಲಾಗಿದೆ. ದಾವಣಗೆರೆ ತಾಲೂಕಿನ ಎಲೆ ಬೇತೂರ ಗ್ರಾಮದಲ್ಲಿ ಘಟನೆ ಜರುಗಿದ್ದು, ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ರಸ್ತೆ ದಾಟಲು ಹೋದ ವ್ಯಕ್ತಿಗೆ ವಾಹನ ಡಿಕ್ಕಿ- ಸ್ಥಳದಲ್ಲೇ ಸಾವು!

ಮೂರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಟ್ಟಿದ್ದ ದಂಪತಿ, ಇಬ್ಬರೇ ಮನೆಯಲ್ಲಿ ವಾಸವಾಗಿದ್ದರು. ರಾತ್ರಿ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಬಾಗಿಲು ಹಾಕಿಕೊಂಡು ಕೊಲೆ ಮಾಡಿ ಬಳಿಕ ಬಾಗಿಲು ಹಾಕಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಪಕ್ಕದ ಮನೆಯವರು ಸರೋಜಮ್ಮ ಅವರನ್ನ ಭೇಟಿ ಮಾಡಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಎಸ್ಪಿ ಸಿ.ಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.