ದಾವಣಗೆರೆ : ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ದ ಮತ್ತೆ ಆರೋಪಗಳು ಬುಗಿಲೆದ್ದಿವೆ. ವಾಲ್ಮೀಕಿ ಸ್ವಾಮೀಜಿ ಪೀಠ ತ್ಯಾಗದ ವಿಚಾರ ಮುಗಿಯುತ್ತಿದ್ದಂತೆ, ಅದರಲ್ಲೂ ಶ್ರೀಗಳು ನಾಯಕ ಸಮುದಾಯದವರೇ ಅಲ್ಲ ಎನ್ನುವ ಗಂಭೀರ ಆರೋಪ ಮಾಡಲಾಗುತ್ತಿದೆ. ಇದಲ್ಲದೆ ವಾಲ್ಮೀಕಿ ಜಾತ್ರೆಗೆ ಎಸ್ಟಿ ಸಮುದಾಯ ಅಭಿವೃದ್ಧಿಗೆ ಇರಿಸಿರುವ ಹಣವನ್ನು ಬಳಕೆ ಮಾಡ್ಬೇಡಿ ಎಂಬ ಕೂಗು ಕೇಳಿ ಬರುತ್ತಿದೆ.
ಈ ಕುರಿತು ಕರ್ನಾಟಕ ರಾಜ್ಯ ಬುಡಕಟ್ಟು ಹಿತರಕ್ಷಣಾ ಸಂಘದ ಅಧ್ಯಕ್ಷ ಸುಭಾಷ್ ಗಂಭೀರ ಆರೋಪ ಮಾಡಿದ್ದು, ವಾಲ್ಮೀಕಿ ಮಠದ ಪ್ರಸನ್ನನಂದಪುರಿ ಸ್ವಾಮೀಜಿ ಬೆಸ್ತ ಸಮುದಾಯದವರು. ದಾಖಲೆಗಳನ್ನ ತಿದ್ದುಪಡಿ ಮಾಡಿ ಮಠದ ಸ್ವಾಮೀಜಿಯಾಗಿದ್ದಾರೆ.
ಪ್ರಸನ್ನಾನಂದಪುರಿ ಸ್ವಾಮೀಜಿಗಳು ಬೆಸ್ತ ಸಮುದಾಯಕ್ಕೆ ಸೇರಿದ್ದಾರೆ ಎಂಬುವುದಕ್ಕೆ ದಾಖಲೆ ಸಮೇತ ಸಾಬೀತು ಮಾಡುತ್ತೇವೆ. ಅಲ್ಲದೆ ಸ್ವಾಮೀಜಿ ವಿರುದ್ದ ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೆ, ಸ್ವಾಮೀಜಿಗಳು ಮಠದ ಆಸ್ತಿಯನ್ನ ತಮ್ಮ ಸ್ವಂತದವರ ಹೆಸರಿಗೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಎಸ್ಟಿ ಸಮುದಾಯಕ್ಕೆ ಮೀಸಲಿದ್ದ ಕೋಟ್ಯಂತರ ರೂ. ಹಣವನ್ನು ವಾಲ್ಮೀಕಿ ಜಾತ್ರೆಗೆ ಬಳಕೆ ಮಾಡಿಕೊಂಡು ಪೋಲು ಮಾಡುತ್ತಿದ್ದಾರೆ.
ನಮ್ಮ ಸಮುದಾಯದ ಅಲ್ಲದೆ ಇರೋ ಇವರು ಸ್ವಾಮೀಜಿಯಾಗಿ ಮುಂದುವರೆಯೋದು ಬೇಡ. ಕೂಡಲೇ ಪೀಠತ್ಯಾಗ ಮಾಡುವಂತೆ ರಾಜ್ಯ ಬುಡಕಟ್ಟು ಹಿತರಕ್ಷಣಾ ಸಂಘದ ಅಧ್ಯಕ್ಷ ಸುಭಾಷ್ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.
ನಾಯಕ ಸಮುದಾಯದವರಲ್ಲ ಎಂಬ ಗಂಭೀರ ಆರೋಪಕ್ಕೆ ಪ್ರಸನ್ನಾನಂದ ಪುರಿ ಶ್ರೀಯವರು ಉತ್ತರಿಸಬೇಕಾಗಿದೆ. ಇಲ್ಲವಾದರೇ ಇನ್ನು ಆರೋಪಗಳು ಎದುರಾಗಬಹುದಾದ ಸಂಭವ ಹೆಚ್ಚಿರುತ್ತದೆ.