ETV Bharat / city

ದಾವಣಗೆರೆ : ಕ್ಯಾಷ್​ಬ್ಯಾಕ್​ ಆಸೆಗೆ ಬಿದ್ದು 2.29 ಲಕ್ಷ ರೂ. ಹಣ ಕಳೆದುಕೊಂಡ ವಿದ್ಯಾರ್ಥಿನಿ.. ದೂರು ದಾಖಲು - ಹಣದಾಸೆಗೆ ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿನಿ

ಉತ್ಪನ್ನಗಳನ್ನು ಖರೀದಿಸಿದರೆ ಕ್ಯಾಷ್​ಬ್ಯಾಕ್​ ನೀಡಲಾಗುವುದು ಎಂದು ಹೇಳಿದಾಗ, ಸಹನಾ 100 ರೂ. ಫೋನ್ ಪೇ ಮೂಲಕ ಕಳುಹಿಸಿದ್ದಾಳೆ. ಈ ವೇಳೆ 350 ರೂ. ಕ್ಯಾಷ್​ಬ್ಯಾಕ್​ ಬಂದಿದೆ. ಹೆಚ್ಚಿನ ಹಣದ ಆಸೆಗಾಗಿ 5 ಸಾವಿರದಿಂದ 20 ಸಾವಿರ ರೂ.ವರೆಗೂ ಒಟ್ಟು 16 ಬಾರಿ ಪೇಟಿಎಂ ಮೂಲಕ ಹಣ ಕಳುಹಿಸಿದ್ದಾಳೆ..

fraud at davanagere
ದೂರು ದಾಖಲು
author img

By

Published : Dec 15, 2021, 5:49 PM IST

ದಾವಣಗೆರೆ : ಕ್ಯಾಷ್​ಬ್ಯಾಕ್ ಆಸೆಗೆ ಬಿದ್ದು ವಿದ್ಯಾರ್ಥಿನಿಯೊಬ್ಬಳು 2.29 ಲಕ್ಷ ಹಣ ಕಳೆದುಕೊಂಡ ಘಟನೆ ದಾವಣಗೆರೆಯ ಆವರಗೆರೆ ಬಳಿಯ ಬಾಡ್​ಕ್ರಾಸ್ ಬಳಿ ಜರುಗಿದೆ.

ಪೊಲೀಸ್ ಲೇಔಟ್ ನಿವಾಸಿಯಾಗಿರುವ ವಿದ್ಯಾರ್ಥಿನಿ ಸಹನಾ ಎಂಬುವರು ಹಣ ಕಳೆದುಕೊಂಡವರು. ಅಪರಿಚಿತ ವ್ಯಕ್ತಿಯೊಬ್ಬ ಶಾಪಿ ಫೈ ಕಂಪನಿಯ ಪ್ರೊಡಕ್ಸ್ ಖರೀದಿಸಿದರೆ ಕಮಿಷನ್(ಹಣ) ನೀಡುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ.

ವಿದ್ಯಾರ್ಥಿನಿ ಸಹನಾ ಮೊಬೈಲ್​ಗೆ ಅಪರಿಚಿತ ವ್ಯಕ್ತಿಯೊಬ್ಬ ವಿವಿಧ ಉತ್ಪನ್ನಗಳ ಚಿತ್ರಗಳನ್ನು ಕಳುಹಿಸಿ, ನೀವು ಮನೆಯಲ್ಲೇ ಆನ್​ಲೈನ್​ ಮೂಲಕ ಅರೆಕಾಲಿಕರಾಗಿ ಕೆಲಸ ಮಾಡಬಹುದು. 8 ಸಾವಿರ ರೂ. ಸಂಬಳ ನೀಡಲಾಗುವುದು ಎಂದು ಸಂದೇಶ ಕಳುಹಿಸಿದ್ದಾನೆ. ಇದನ್ನು ನಂಬಿದ ಸಹನಾ ಲಿಂಕ್​ ಒಪನ್ ಮಾಡಿದ್ದಾರೆ.

ಇದನ್ನೂ ಓದಿ: ರಜೆ ಮುಗಿಸಿ ಕರ್ತವ್ಯಕ್ಕಾಗಿ ಪಂಜಾಬ್‌ಗೆ ಹೊರಟಿದ್ದ ತೆಲಂಗಾಣದ ಯೋಧ ನಾಪತ್ತೆ!

ಬಳಿಕ ಉತ್ಪನ್ನಗಳನ್ನು ಖರೀದಿಸಿದರೆ ಕ್ಯಾಷ್​ಬ್ಯಾಕ್​ ನೀಡಲಾಗುವುದು ಎಂದು ಹೇಳಿದಾಗ, ಸಹನಾ 100 ರೂ. ಫೋನ್ ಪೇ ಮೂಲಕ ಕಳುಹಿಸಿದ್ದಾಳೆ. ಈ ವೇಳೆ 350 ರೂ. ಕ್ಯಾಷ್​ಬ್ಯಾಕ್​ ಬಂದಿದೆ. ಹೆಚ್ಚಿನ ಹಣದ ಆಸೆಗಾಗಿ 5 ಸಾವಿರದಿಂದ 20 ಸಾವಿರ ರೂ.ವರೆಗೂ ಒಟ್ಟು 16 ಬಾರಿ ಪೇಟಿಎಂ ಮೂಲಕ ಹಣ ಕಳುಹಿಸಿದ್ದಾಳೆ.

ಈ ವೇಳೆ ಯಾವುದೇ ಕ್ಯಾಷ್​ಬ್ಯಾಕ್​ ಬಾರದೇ ಇದ್ದುದನ್ನು ಪ್ರಶ್ನಿಸಿದಾಗ ಟಾಸ್ಕ್​ ಪೂರ್ಣಗೊಳ್ಳದೇ ಹಣ ಬರುವುದಿಲ್ಲ ಎಂದು ಅಪರಿಚಿತ ತಿಳಿಸಿದ್ದಾನೆ. ಆಗ ತಾನು ಮೋಸ ಹೋಗಿರುವುದು ಸಹನಾಗೆ ಅರಿವಾಗಿದೆ. ಎಚ್ಚೆತ್ತುಕೊಂಡ ವಿದ್ಯಾರ್ಥಿನಿ ಸಿಇಎನ್​ ಠಾಣೆಗೆ ವಂಚನೆ ದೂರು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.