ದಾವಣಗೆರೆ: ಮದ್ಯದ ನಶೆಯಲ್ಲಿ ಯುವತಿಯೊಬ್ಬಳು ಬೀದಿ ರಂಪ ಮಾಡಿದ ಜನರನ್ನು ಅವಾಚ್ಯವಾಗಿ ನಿಂದಿಸಿದ ಘಟನೆ ನಡೆದಿದೆ.
ಹದಡಿ ರಸ್ತೆಯಲ್ಲಿರುವ ಬಾರ್ ಮುಂಭಾಗ ಯುವತಿವೊಬ್ಬಳು ಮದ್ಯದ ನಶೆಯಲ್ಲಿ ಗಲಾಟೆಗಿಳಿದು ಬಾರ್ಗೆ ಬರುತ್ತಿದ್ದವರಿಗೆಲ್ಲಾ ಅವಾಚ್ಯ ಶಬ್ದಗಳಿಂದ ಹಿಗ್ಗಾಮುಗ್ಗಾ ಬೈದಿದ್ದಾಳೆ. ಬಾರ್ಗೆ ಬರುತ್ತಿದ್ದ ಗ್ರಾಹಕರಿಗೆ ತೊಂದರೆ ಕೊಡುತ್ತಾ,ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ ಸುಖಾಸುಮ್ಮನೆ ಡ್ರಾಮಾ ಕ್ರಿಯೆಟ್ ಮಾಡಿದ್ದಾಳೆ.
ಯುವತಿಯ ಕಾಟಕ್ಕೆ ರೋಸಿಹೋದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಗೂ ಆಕೆ ಅವಾಜ್ ಹಾಕಿದ್ದು, ಠಾಣೆಗೆ ಕರೆದೊಯ್ದಿದ್ದಾರೆ.
ಸದ್ಯ ಯುವತಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ.