ETV Bharat / city

ದಾವಣಗೆರೆಯಲ್ಲಿ ನಿಲ್ಲದ ಮಳೆ: ನೆಲಕಚ್ಚಿದ 700 ಎಕರೆ ಬೆಳೆ, ಕಂಗಾಲಾದ ಅನ್ನದಾತ - ದಾವಣಗೆರೆ 700 ಎಕರೆ ಬೆಳೆ ಹಾನಿ ನ್ಯೂಸ್​

ದಾವಣಗೆರೆ ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿದ್ದು, ಪರಿಣಾಮ ಸಾಲ ಮಾಡಿ ಬೆಳೆದ 700 ಕ್ಕೂ ಅಧಿಕ ಎಕರೆ ಬೆಳೆ ಸಂಪೂರ್ಣ ನೀರು ಪಾಲಾಗಿದೆ.

paddy
ಭತ್ತ
author img

By

Published : Nov 20, 2021, 7:28 AM IST

ದಾವಣಗೆರೆ: ಬೆಣ್ಣೆನಗರಿಯಲ್ಲಿ ಮಳೆ ನಿಲ್ಲದಿರುವುದು ರೈತರ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಕಳೆದ ನಾಲ್ಕು ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿರುವ ಕಾರಣ ದಾವಣಗೆರೆ ಜಿಲ್ಲೆಯಲ್ಲಿ 700 ಕ್ಕೂ ಹೆಚ್ಚು ಎಕರೆ ಭತ್ತ ಸಂಪೂರ್ಣವಾಗಿ ನೆಲಕಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ಕಂಗಾಲಾಗಿದ್ದಾರೆ.

ಜಿಲ್ಲೆಯ ಹರಿಹರ ತಾಲೂಕಿನ ಆದಾಪುರ, ನಿಟ್ಟೂರು, ದೇವರಬೆಳಕೆರೆ, ನ್ಯಾಮತಿ, ಹೊನ್ನಾಳಿ, ಚನ್ನಗಿರಿ ಮಲೇಬೆನ್ನೂರು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ಸಾಲ ಮಾಡಿ ಬೆಳೆದಿದ್ದ ಭತ್ತ, ಮೆಕ್ಕೆಜೋಳ ಬೆಳೆ ಮಳೆಯರಾಯನ ಹೊಡೆತಕ್ಕೆ ಸಿಲುಕಿ ಮಣ್ಣುಪಾಲಾಗಿದೆ.

ದಾವಣಗೆರೆಯಲ್ಲಿ ಮಳೆಗೆ ನೆಲಕಚ್ಚಿದ ಭತ್ತ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಆದಾಪುರ ಗ್ರಾಮದ ರೈತ ತಿಮ್ಮರಾಯ ತಮ್ಮ ಐದು ಎಕರೆ ಜಮೀನಿನಲ್ಲಿ ಎರಡೂವರೆ ಲಕ್ಷ ರೂ. ಖರ್ಚು ಮಾಡಿ ಭತ್ತ ಬೆಳೆದಿದ್ದರು. ಕಳೆದ ದಿನ ಸುರಿದ ಅಕಾಲಿಕ ಮಳೆಯಿಂದಾಗಿ ಸಂಪೂರ್ಣ ಬೆಳೆ ನೀರು ಪಾಲಾಗಿದ್ದು, ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಇಡೀ ಜಿಲ್ಲೆಯಲ್ಲಿ ಮೆಕ್ಕೆಜೋಳ ಹಾಗೂ ಭತ್ತ ಸೇರಿ ಒಟ್ಟು 700 ಎಕರೆ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ನಾಲ್ಕು ತಿಂಗಳ ಬಳಿಕ ಟಿಕ್​ಟಾಕ್ ಮೇಲಿನ ನಿಷೇಧ ತೆಗೆದುಹಾಕಿದ ಪಾಕ್​

ನ್ಯಾಮತಿ ತಾಲೂಕಿನ ಭಾಗದಲ್ಲಿ ಅನೇಕ ಮನೆಗಳು ನೆಲ‌ಸಮವಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಸಾಕಷ್ಟು ಹಳ್ಳಿಗಳು ರಸ್ತೆ ಸಂಪರ್ಕ ಕಳೆದುಕೊಂಡಿವೆ. ಜೊತೆಗೆ ಹೊನ್ನಾಳಿಯ ಸೊಗಟೂರಿನಲ್ಲಿ ಪಡಿತರ ಧಾನ್ಯ ನೀರುಪಾಲಾಗಿದ್ದರೆ, ಚನ್ನಗಿರಿ ತಾಲೂಕಿನ ದಿಗ್ಗೇನಹಳ್ಳಿ ಹಾಗೂ ನವನಗರದಲ್ಲಿ ಇಡೀ ಊರೇ ಜಲಾವೃತವಾಗಿವೆ. ತೋಟಗಳು ದ್ವೀಪದಂತಾಗಿವೆ. ಇನ್ನು ಚಿಕ್ಕಮಲ್ಲಿ ತಾಂಡ, ಮೂಡಗೇರಿ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಮಾವಿನ ಹಳ್ಳ ತುಂಬಿ ಭೋರ್ಗರೆಯುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Watch video: ಬೈಕ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಯುವತಿಯರಿಗೆ ಗುದ್ದಿದ ಆಟೋ

ಇನ್ನು ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದ್ದರೂ ಯಾವೋಬ್ಬ ಜನಪ್ರತಿನಿಧಿ ರೈತರ ಜಮೀನುಗಳಿಗೆ ಭೇಟಿ ನೀಡಿ, ಪರಿಹಾರ ನೀಡುವ ಆಶ್ವಾಸನೆ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ, ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.