ETV Bharat / city

ಉಪಚುನಾವಣೆ: ಮತದಾನಕ್ಕೆ ಹಿರಿಯ ನಾಗರಿಕರ ಉತ್ಸಾಹ, ಯುವಕರ ನಿರುತ್ಸಾಹ

ಇಂದು ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 7ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಆದರೆ, ಈವರೆಗೂ ಮತದಾನಕ್ಕೆ ಹಿರಿಯ ನಾಗರಿಕರೇ ಹೆಚ್ಚು ಆಗಮಿಸಿದ್ದು, ಯುವಕರು ಕಾಣಿಸಿಕೊಂಡಿದ್ದೇ ಕಡಿಮೆ. ಕೆಲವರು ಕೊರೊನಾ ಕಾರಣ ಹೇಳಿದರೆ, ಇನ್ನೂ ಕೆಲವರು ಉದ್ಯೋಗ ನೆಪವೊಡ್ಡಿದ್ದಾರೆ. ಹೀಗಾಗಿ, ಯುವಕರು ಮತ ಚಲಾಯಿಸುತ್ತಿಲ್ಲ ಎನ್ನಲಾಗಿದೆ.

By-election polled in Rajarajeshwari nagar constituency
ಮತದಾನ ಮಾಡಿ ಬರುತ್ತಿರುವ ಹಿರಿಯರು
author img

By

Published : Nov 3, 2020, 12:34 PM IST

ಬೆಂಗಳೂರು: ಯುವಕರು ಮತದಾನಕ್ಕೆ ಒಲವು ತೋರುತ್ತಿಲ್ಲ ಎಂಬುದು ಇಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಗೋಚರಿಸಿದೆ. ಚುನಾವಣಾ ಆಯೋಗ ಜಾಗೃತಿ, ಚುನಾವಣಾ ವ್ಯವಸ್ಥೆಗೆ ಯುವ ಸಮುದಾಯ ಬೆಲೆ ಕೊಡದಿರುವುದು ಕಂಡು ಬಂದಿದೆ. ಪ್ರತಿ ಚುನಾವಣೆಯಲ್ಲೂ ಇದೇ ಪರಿಸ್ಥಿತಿ.

ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಒಟ್ಟು ಇರುವ 4.7 ಲಕ್ಷ ಮತದಾರರ ಪೈಕಿ ಶೇಕಡಾ 60ರಷ್ಟು ಯುವಕರಿದ್ದಾರೆ. ಆದರೆ, ಮತದಾನ ಬೆಳಗ್ಗೆ ಆರಂಭವಾದಾಗಿನಿಂದ ಈವರೆಗೂ ಯಾರೊಬ್ಬರೂ ಸುಳಿದಿಲ್ಲ ಎಂಬುದು ಈಟಿವಿ ಭಾರತದ ಕಣ್ಣಿಗೆ ಬಿದ್ದಿದೆ. ನಿಜಕ್ಕೂ ಇದೊಂದು ಬೇಸರದ ಸಂಗತಿ.

ಕೋವಿಡ್ ಆತಂಕ ಹಿನ್ನೆಲೆ ಒಂದಿಷ್ಟು ಮಂದಿ ಮತದಾನದಿಂದ ದೂರ ಉಳಿದಿದ್ದರೆ, ಮತ್ತೆ ಕೆಲವರು ಉದ್ಯೋಗದ ನೆಪವೊಡ್ಡಿದ್ದಾರೆ. ಆದರೆ, ಯಾವುದಕ್ಕೂ ಅಂಜದೇ, ಯಾವುದೇ ನೆಪ ಹೇಳದೇ ಹಿರಿಯ ನಾಗರಿಕರು ಹೆಚ್ಚು ಉತ್ಸುಕತೆಯಿಂದ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಿರಿಯ ನಾಗರಿಕರಾದ ಎಂ.ಸಿ.ವೇಲು, ಎಂ.ರುಕ್ಮಿಣಿ ದಂಪತಿ ಮತದಾನಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ರುಕ್ಮಿಣಿ ಅವರಿಗೆ ಓಡಾಡಲು ಸಾಧ್ಯವಾಗದ ಕಾರಣ ವ್ಹೀಲ್​​ಚೇರ್​ ವ್ಯವಸ್ಥೆ ಮಾಡಿ ಮತದಾನಕ್ಕೆ ಕಳುಹಿಸಿಕೊಲಾಯಿತು.

ಮತದಾರ ಚಲಾಯಿಸಲು ಬಂದಿದ್ದ ಕೆಎಸ್ಆರ್​​​ಟಿಸಿ ನಿವೃತ್ತ ಉದ್ಯೋಗಿ ಎಂ.ಯೂಸುಫ್ ಖಾನ್ (92) ಮಾತನಾಡಿ, ಈವರೆಗೂ ಮತದಾನ ತಪ್ಪಿಸಿಕೊಂಡಿಲ್ಲ. ಮತದಾನ ಎಲ್ಲಕ್ಕಿಂತ ದೊಡ್ಡದು. ಅದರ ಮಹತ್ವ ಅರಿತು ಯುವಕರು ಮತ ಚಲಾಯಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಮತದಾನಕ್ಕೆ ನಿರುತ್ಸಾಹ ತೋರುತ್ತಿರುವ ಯುವಕರ ಕುರಿತು ಹಿರಿಯರ ಅಭಿಪ್ರಾಯ

ಐಟಿಐ ಲೇಔಟ್ ನಿವಾಸಿ ಗೋವಿಂದ ಮಾತನಾಡಿ, 12 ವರ್ಷಗಳಿಂದ ಈ ಕ್ಷೇತ್ರದಲ್ಲಿ ಮತದಾನ ಮಾಡುತ್ತಿದ್ದೇನೆ. ನನ್ನ ಪ್ರಕಾರ ಯುವಕರು ಹೆಚ್ಚಾಗಿ ಮತದಾನಕ್ಕೇ ಬರುತ್ತಿಲ್ಲ. ಕಾರಣ ಏನೆಂಬುದು ತಿಳಿಯುತ್ತಿಲ್ಲ. ಏನೇ ಇರಲಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬಂದು ಮತದಾನ ಮಾಡಬೇಕು. ಪಕ್ಷ ಹಾಗೂ ಅಭ್ಯರ್ಥಿ ಮುಖ್ಯವಲ್ಲ, ಮತದಾನ ಪ್ರಮುಖ ಎಂದು ಅಭಿಪ್ರಾಯಪಟ್ಟರು.

ಹಿರಿಯ ನಾಗರಿಕ ಎಂ.ಸಿ.ವೇಲು ಮಾತನಾಡಿ, ನಾನು ಜಾರ್ಖಂಡ್​​​ನಲ್ಲಿ ಉದ್ಯೋಗ ಮಾಡುತ್ತಿದ್ದೆ. ಬೆಂಗಳೂರಿಗೆ ಬಂದು 34 ವರ್ಷ ಆಗಿದೆ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಇಲ್ಲಿಗೆ ಬಂದಿದ್ದೇನೆ. ಮತದಾನವನ್ನು ಒಮ್ಮೆಯೂ ತಪ್ಪಿಸಿಕೊಂಡಿಲ್ಲ. ಸಂಜೆಯವರೆಗೂ ಸಾಕಷ್ಟು ಕಾಲಾವಕಾಶ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬಂದು ಮತದಾನ ಮಾಡಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.