ETV Bharat / city

ಬೆಂಗಳೂರು : ಡೆತ್ ನೋಟ್ ಬರೆದು ಚಾಕುವಿನಿಂದ‌ ಕುತ್ತಿಗೆ ಸೀಳಿಕೊಂಡು ಯುವಕ ಆತ್ಮಹತ್ಯೆ! - ಬೆಂಗಳೂರಿನಲ್ಲಿ ಯುವಕ ಆತ್ಮಹತ್ಯೆ

ಹಲವು ದಿನಗಳಿಂದ ಮೋಹನ್ ಖಿನ್ನತೆಯಿಂದ ಬಳಲುತ್ತಿದ್ದ. ಬರುವ ಸಂಬಳದಲ್ಲಿ ಜೀವನ ನಡೆಸುವುದು ಕಷ್ಟ ಎಂದು ಕೊರಗುತ್ತಿದ್ದ. ಇದೇ ಒತ್ತಡದಿಂದಲೇ ಇಂದು ಬೆಳಗ್ಗೆ ಮನೆಯಿಂದ ಹೊರ ಬಂದು ಚಾಕುವಿನಿಂದ ಕುತ್ತಿಗೆ ಸೀಳಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ‌ ಎನ್ನಲಾಗ್ತಿದೆ..

ಮೋಹನ್
ಮೋಹನ್
author img

By

Published : Dec 18, 2021, 4:34 PM IST

ಬೆಂಗಳೂರು : ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೋರ್ವ ಡೆತ್ ನೋಟ್ ಬರೆದಿಟ್ಟು ಚಾಕುವಿನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾರ್ಥ ನಗರದಲ್ಲಿ ಇಂದು(ಶನಿವಾರ) ಬೆಳಗ್ಗೆ ನಡೆದಿದೆ‌.

ಮೃತ ಮೋಹನ್​ ಸ್ನೇಹಿತ ಜಯಂತ್ ಎಂಬುವರು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವುದು..

ತುಮಕೂರಿನ ಗುಬ್ಬಿ ಮೂಲದ ಮೋಹನ್ (29) ಮೃತ ದುರ್ದೈವಿ. ಈತ ಕಳೆದ ಐದಾರು ವರ್ಷಗಳಿಂದ ಗಾರ್ಮೆಂಟ್ಸ್ ಔಟ್‌ಲೇಟ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಎರಡು ತಿಂಗಳ ಹಿಂದೆ ತಮ್ಮ ಮನೆಯ ಗೃಹ ಪ್ರವೇಶ ಮಾಡಿದ್ದ.

ಹಲವು ದಿನಗಳಿಂದ ಮೋಹನ್ ಖಿನ್ನತೆಯಿಂದ ಬಳಲುತ್ತಿದ್ದ. ಬರುವ ಸಂಬಳದಲ್ಲಿ ಜೀವನ ನಡೆಸುವುದು ಕಷ್ಟ ಎಂದು ಕೊರಗುತ್ತಿದ್ದ. ಇದೇ ಒತ್ತಡದಿಂದಲೇ ಇಂದು ಬೆಳಗ್ಗೆ ಮನೆಯಿಂದ ಹೊರ ಬಂದು ಚಾಕುವಿನಿಂದ ಕುತ್ತಿಗೆ ಸೀಳಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ‌ ಎನ್ನಲಾಗ್ತಿದೆ.

ಸಾವಿಗೂ ಮುನ್ನ 'ನನ್ನ ಸಾವಿಗೆ ನಾನೇ ಕಾರಣ' ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಡ್ರಾಪ್​ ನೆಪದಲ್ಲಿ ಬಾಲಕಿಯನ್ನ ಕರೆದೊಯ್ದು ಸಾಮೂಹಿಕ ಅತ್ಯಾಚಾರ.. ಪರಿಚಯಸ್ಥನಿಂದಲೇ ನಡೀತು ದುಷ್ಕೃತ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.