ETV Bharat / city

ರಾಕಿಂಗ್​ ಜೋಡಿಗೆ 5ನೇ ವರ್ಷದ ವಿವಾಹ ಸಂಭ್ರಮ.. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ರಾಧಿಕಾ - Radhika pandit photo upload at Instagram

ಕನ್ನಡ ಚಿತ್ರರಂಗದಲ್ಲಿ ಕ್ಯೂಟ್​ ಕಪಲ್​ ಅಂತಾನೆ ಕರೆಯಿಸಿಕೊಳ್ಳುವ ಜೋಡಿಯಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಇಂದು ತಮ್ಮ 5 ನೇ ವರ್ಷದ ವಿವಾಹ ದಿನವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ದಿನ ರಾಕಿಂಗ್​ ಜೋಡಿಗೆ ವೆರಿ ಸ್ಪೆಷಲ್​ ಆಗಿದೆ.

anniversary
ವಿವಾಹ ಸಂಭ್ರಮ
author img

By

Published : Dec 9, 2021, 5:30 PM IST

Updated : Dec 9, 2021, 6:29 PM IST

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕ್ಯೂಟ್​ ಕಪಲ್​ ಅಂತಾನೆ ಕರೆಯಿಸಿಕೊಳ್ಳುವ ಜೋಡಿಯಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಇಂದು ತಮ್ಮ 5 ನೇ ವರ್ಷದ ವಿವಾಹ ದಿನವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ದಿನ ರಾಕಿಂಗ್​ ಜೋಡಿಗೆ ವೆರಿ ಸ್ಪೆಷಲ್​ ಆಗಿದೆ.

ರಾಕಿಂಗ್​ ಜೋಡಿಗೆ ಇಂದು ಸ್ಪೆಷಲ್​ ಡೇ ಕಾರಣ ರಾಧಿಕಾ ಪಂಡಿತ್ ಅವರು ಯಶ್ ಜೊತೆಗಿರುವ ಫೋಟೊವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ಯಶ್ ಜೊತೆಗೆ ಬೀಚ್​ನಲ್ಲಿ ಕೈಹಿಡಿದುಕೊಂಡು ಕುಳಿತುಕೊಂಡಿರುವ ಫೋಟೋ ಇದಾಗಿದ್ದು, 5 ವರ್ಷದ ದಾಂಪತ್ಯ ಜೀವನದ ಬಗ್ಗೆ ರಾಧಿಕಾ ಪಂಡಿತ್ ಯಶ್ ವ್ಯಕ್ತಿತ್ವದ ಬಗ್ಗೆ ಕೊಂಡಾಡಿದ್ದಾರೆ.

ರಾಕಿಂಗ್​ ಜೋಡಿಗೆ 5ನೇ ವರ್ಷದ ವಿವಾಹ ಸಂಭ್ರಮ
ರಾಕಿಂಗ್​ ಜೋಡಿಗೆ 5ನೇ ವರ್ಷದ ವಿವಾಹ ಸಂಭ್ರಮ

ಇದನ್ನೂ ಓದಿ: RRR Trailer ನೋಡಿದ್ರಾ?: ಯೂಟ್ಯೂಬ್-ಥಿಯೇಟರ್​ಗಳಲ್ಲಿ ‘ಆರ್‌ಆರ್‌ಆರ್‌’ ಟ್ರೈಲರ್ ರಿಲೀಸ್

ಇನ್ನು ಕಿರುತೆರೆಯಲ್ಲಿ ಒಟ್ಟಿಗೆ ನಟಿಸುತ್ತಿದ್ದ ಯಶ್ ಮತ್ತು ರಾಧಿಕಾ ಪಂಡಿತ್ ಮೊಗ್ಗಿನ ಮನಸು ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ್ದರು. ಯಶ್ ಮತ್ತು ರಾಧಿಕಾ ಪಂಡಿತ್ 7 ವರ್ಷಗಳ ಪ್ರೀತಿಯ ಬಳಿಕ ಗೋವಾದ ಕಡಲ ತೀರದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಲವ್ ಸ್ಟೋರಿ ರಿವೀಲ್ ಮಾಡಿದ್ದರು.

ಮದುವೆಯ ವೇಳೆಯಲ್ಲಿನ ಪೋಟೋ
ಮದುವೆಯ ವೇಳೆಯಲ್ಲಿನ ಪೋಟೋ

ಬಳಿಕ 2016 ಡಿಸೆಂಬರ್ 9ರಂದು ಯಶ್ ಮತ್ತು ರಾಧಿಕಾ ಬೆಂಗಳೂರಿನ ತಾಜ್ ವೆಸ್ಟ್ ಎಂಡ್​ನಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಸುಂದರ ಜೋಡಿಗೆ ಈಗ ಐರಾ ಮತ್ತು ಯಥರ್ವ್ ಯಶ್ ಎನ್ನುವ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಯಶ್ ಮತ್ತು ರಾಧಿಕಾ ದಂಪತಿ 5ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಸ್ನೇಹಿತರು ಹಾಗೂ ಅವರ ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ.

Last Updated : Dec 9, 2021, 6:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.