ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪ ಮತ್ತು ನಟಿ ಅಭಿನಯ ಅವರು ಹಿರಿಯ ನಟ ಶಿವರಾಂ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಹಿರಿಯ ನಟನನ್ನು ಸ್ಮರಿಸಿ, ಭಾವುಕರಾದರು.
'ಇತ್ತೀಚೆಗೆ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡ್ವಿ. ಇದೀಗ ಶಿವರಾಮಣ್ಣ. ಅತಿರೇಕವಿಲ್ಲದ ಹಾಸ್ಯ ನಟನೆಗೆ ಅವರು ಪ್ರಸಿದ್ಧರು. ಶಿವರಾಂ ಶೈಲಿ ಎಂದೇ ಕರೆಯಬಹುದ ವಿಶಿಷ್ಟ ಅಭಿನಯ ಕಲೆ ಅವರಲ್ಲಿತ್ತು. ಅವರಿಗೆ ಪುಸ್ತಕ ಪ್ರೀತಿ ಬಹಳಾನೇ ಇತ್ತು. ಕನ್ನಡ ಚಿತ್ರರಂಗದ ದೊಡ್ಡ ಸ್ನೇಹಜೀವಿಯಾಗಿದ್ದರು' ಎಂದು ಬರಗೂರು ರಾಮಚಂದ್ರಪ್ಪ ಭಾವುಕರಾದರು.
ಇದನ್ನೂ ಓದಿ: ನಟ ಶಿವರಾಮ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮುತಾಲಿಕ್
ನಟಿ ಅಭಿನಯ ಮಾತನಾಡಿ, 'ಈ ವರ್ಷ ಶಾಕಿಂಗ್ ಮೇಲೆ ಶಾಕಿಂಗ್ ನ್ಯೂಸ್ ಕೊಡುತ್ತಿದೆ. ಇನ್ನೂ ಅಪ್ಪು ಅಗಲಿಕೆಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರ ನಡುವೆಯೇ ಶಿವರಾಮಣ್ಣ ನಿಧನರಾಗಿದ್ದಾರೆ. ಶಿವರಾಮಣ್ಣನಿಗೆ ಯಾವ ಖಾಯಿಲೆಯೂ ಇರಲಿಲ್ಲ, ಶಿವರಾಮಣ್ಣ ಸತ್ತೇ ಇಲ್ಲ, ಎದ್ದೇಳಿ ಶಿವರಾಮಣ್ಣ ಎನ್ನಬೇಕೆನಿಸುತ್ತದೆ' ಎಂದು ಕಣ್ಣೀರಾದರು.