ETV Bharat / city

ಬಿಇಎಂಎಲ್ ಖಾಸಗೀಕರಣಕ್ಕೆ ವ್ಯಾಪಕ ವಿರೋಧ: ಬೀದಿಗಳಿದು ಪ್ರತಿಭಟನೆ ಮಾಡಿದ ಕಾರ್ಮಿಕರು

author img

By

Published : Oct 23, 2019, 8:58 AM IST

ಬಿಇಎಂಎಲ್ ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ನಡೆಯನ್ನ ವಿರೋಧಿಸಿ,ನ್ಯೂ ತಿಪ್ಪಸಂದ್ರದಲ್ಲಿರುವ ಭಾರತ್​ ಅರ್ಥ್​ ಮೂವರ್ಸ್​ ಲಿಮಿಟೆಡ್​ (ಬಿಇಎಂಎಲ್) ಕಾರ್ಖಾನೆ ಎದುರು ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಬಿಇಎಂಎಲ್ ಖಾಸಗೀಕರಣ ವಿರೋಧಿಸಿ ಕಾರ್ಮಿಕರ ಪ್ರತಿಭಟನೆ

ಬೆಂಗಳೂರು: ಬಿಇಎಂಎಲ್ ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ನಡೆಯನ್ನ ವಿರೋಧಿಸಿ, ನ್ಯೂ ತಿಪ್ಪಸಂದ್ರದಲ್ಲಿರುವ ಭಾರತ್​ ಅರ್ಥ್​ ಮೂವರ್ಸ್​ ಲಿಮಿಟೆಡ್​ (ಬಿಇಎಂಎಲ್) ಕಾರ್ಖಾನೆ ಎದುರು ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಬಿಇಎಂಎಲ್ ಖಾಸಗೀಕರಣ ವಿರೋಧಿಸಿ ಕಾರ್ಮಿಕರ ಪ್ರತಿಭಟನೆ

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಇಎಂಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸ ರೆಡ್ಡಿ, ಮೆಟ್ರೋ ಬೋಗಿಗಳನ್ನು ತಯಾರಿಸುವ ಕೇಂದ್ರ ಸರ್ಕಾರದ ಏಕೈಕ ಸಾರ್ವಜನಿಕ ಉದ್ಯಮ ಇದಾಗಿದ್ದು, ಇದನ್ನ ಕೇಂದ್ರ ಸರ್ಕಾರ ಖಾಸಗಿಯವರಿಗೆ ಮಾರಾಟ ‌ಮಾಡಲು ಹೊರಟಿರುವುದು ಸರಿಯಲ್ಲ. ಈಗಾಗಲೇ ಬಿಇಎಂಎಲ್ ಕಂಪನಿ ಖಾಸಗಿಕರಣಕ್ಕೆ ಕ್ಯಾಬಿನೆಟ್​ನಲ್ಲಿ ಅನುಮತಿ ಕೂಡ ಸಿಕ್ಕಿದೆ. ಬಿಇಎಂಎಲ್ ಬೆಂಗಳೂರು ಕಂಪನಿಯಲ್ಲಿ 1800 ನೌಕರರಿದ್ದಾರೆ. ರಾಜ್ಯದಲ್ಲಿರುವ ಒಟ್ಟು ಬಿಇಎಂಎಲ್ ಕಂಪನಿಗಳಿಂದ ಆರು ಸಾವಿರ ನೌಕರರಿದ್ದು, ಅವರ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದರು.

ಮೈನಿಂಗ್ ಕನ್ಸ್​ಟ್ರಕ್ಷನ್,ಏರೋಸ್ಪೇಸ್,ಮೆಟ್ರೋ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಿದ್ದೇವೆ. ಬೆಂಗಳೂರು,ಕೆಜಿಎಫ್ ಹಾಗೂ ಮೈಸೂರಿನಲ್ಲಿರುವ ಬೆಮಲ್ ಕಂಪನಿಗಳಿಂದ 3500 ಕೋಟಿ ವಾರ್ಷಿಕ ಟರ್ನೋವರ್ ಹೊಂದಿರೋ ಬಿಇಎಂಎಲ್,ಲಾಭದಲ್ಲಿದ್ರೂ ಕಂಪನಿ ಮಾರಾಟ ಮಾಡ್ತಿರೋ ಕೇಂದ್ರದ ನೀತಿ ಸರಿಯಿಲ್ಲ. ಹೀಗಾಗಿ ಶನಿವಾರ ಟೌನ್​ಹಾಲ್ ಬಳಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು,ನವೆಂಬರ್​ 15ರವರೆಗೆ ಟೌನ್​ಹಾಲ್​ನಿಂದ ಪ್ರೀಡಂ ಪಾರ್ಕ್​ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಮುಂದುವರೆಯಲಿದೆ ಎಂದರು.

Intro:ಬೆಂಗಳೂರು.

ಕೇಂದ್ರ ಸರ್ಕಾರದ ವಿರುದ್ಧ ರೋಡಿಗಿಳಿದ ಕಾರ್ಮಿಕರು

ಬಿಇಎಂಎಲ್ ಖಾಸಗೀಕರಣ ವಿರೋಧಿಸಿ ನ್ಯೂ ತಿಪ್ಪಸಂದ್ರದಲ್ಲಿರುವ ಬಿಇಎಂಎಲ್ ಕಾರ್ಖಾನೆ ಎದುರು ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಮೆಟ್ರೋ ಬೋಗಿಗಳನ್ನು ತಯಾರಿಸುವ ಕೇಂದ್ರ ಸರ್ಕಾರದ ಏಕೈಕ ಸಾರ್ವಜನಿಕ ಉದ್ಯಮ ಇದಾಗಿದ್ದು, ಕೇಂದ್ರ ಸರ್ಕಾರದ ಖಾಸಗಿಯವರಿಗೆ ಮಾರಾಟ ‌ಮಾಡಲು ಹೊರಟಿರುವುದು ಸರಿಯಲ್ಲ. ಈಗಾಗಲೇ ಬಿಇಎಂಎಲ್ ಕಂಪನಿ ಖಾಸಗಿಕರಣಕ್ಕೆ ಕ್ಯಾಬಿನೆಟ್ ನಲ್ಲಿ ಅನುಮತಿ ಕೂಡ ಸಿಕ್ಕಿದೆ. ಇದನ್ನು ವಿರೋಧಿಸಿ ಇವತ್ತು ಕಾರ್ಮಿಕರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

Body:ಬಿಇಎಂಎಲ್ ಬೆಂಗಳೂರು ಕಂಪನಿಯಲ್ಲಿ 1800 ನೌಕರರಿದ್ದಾರೆ, ರಾಜ್ಯದಲ್ಲಿರುವ ಒಟ್ಟು ಬಿಇಎಂಎಲ್ ಕಂಪನಿಗಳಿಂದ ಆರು ಸಾವಿರ ಕಾರ್ಮಿಕರಿದ್ದಾರೆ, ಸದ್ಯ 46 ರಷ್ಟು ಖಾಸಗಿ ಷೇರು ಹೊಂದಿರೋ ಬಿಇಎಂಎಲ್, ಮೋದಿ ಸರ್ಕಾರ 26 ಶೇಕಡಾ ಷೇರು ಮಾರಾಟಕ್ಕೆ ಸರ್ಕಾರ ತೀರ್ಮಾನಿಸಲಾಗಿತ್ತು.ನಂತರ ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನಲೆ ತನ್ನ ನಿರ್ಧಾರದಿಂದ ಹಿಂದೆಸರಿದಿತ್ತು.ಆದರೆ ಈಗ ಮತ್ತೆ ನೂರಕ್ಕೆ ನೂರರಷ್ಟು ಷೇರುಗಳನ್ನ ಖಾಸಗಿಯವ್ರಿಗೆ ಮಾರಾಟ ಮಾಡಲು ಕೇಂದ್ರ ಮುಂದಾಗಿದೆ ಇದು ನಿಜಕ್ಕೂ ಖಂಡನೀಯ.

Conclusion:ಬೆಂಗಳೂರು, ಕೆಜಿಎಫ್ ಹಾಗೂ ಮೈಸೂರಿನಲ್ಲಿರುವ ಬೆಮಲ್ ಕಂಪನಿಗಳಿದ್ದು 3500 ಕೋಟಿ ವಾರ್ಷಿಕ ಟರ್ನೋವರ್ ಹೊಂದಿರೋ ಬಿಇಎಂಎಲ್, ಲಾಭದಲ್ಲಿದ್ರೂ ಕಂಪನಿ ಮಾರಾಟ ಮಾಡ್ತಿರೋ ಕೇಂದ್ರದ ನೀತಿ ಸರಿಯಿಲ್ಲ.1964ರಲ್ಲಿ ಹೆಚ್ಎಎಲ್ನಿಂದ ಬೇರ್ಪಟ್ಟು ನಾವು ಮೈನಿಂಗ್ ಕನ್ಸಟ್ರಕ್ಷನ್, ಏರೋಸ್ಪೇಸ್, ಮೆಟ್ರೋ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಿದ್ದೇವೆ. ಇದುವರೆಗೂ 256.1 ಕೋಟಿ ಸರ್ಕಾರಕ್ಕೆ ನೀಡುತ್ತಿದ್ದೇವೆ, ತೆರಿಗೆ ಎಲ್ಲಾ ಸಮಯಕ್ಕೆ ಕಟ್ಟುತ್ತಾ ಬರುತ್ತಿದ್ದೇವೆ, ಇಲ್ಲಿ ಎಲ್ಲಾ ಪರಿಣಿತರು, ಬೆಂಗಳೂರು ಡೆಲ್ಲಿ ಕಲ್ಕತ್ತ ಮೆಟ್ರೋ ಮಾಡುತ್ತಿದ್ದೇವೆ, ದೇಶಕ್ಕೆ ಕೊಡುಗೆ ನೀಡುತ್ತಿದ್ದೇವೆ, ಸೈನಿಕರಿಗೆ ಯಂತ್ರೋಪಕರಣ ಮಾಡಿಕೊಟ್ಟಿದ್ದೇವೆ, ಮೆಟ್ರೋ ಬೋಗಿಗೆ 8 ಕೋಟಿಗೆ ಮಾಡುತ್ತಿದ್ದೇವೆ, ಸರ್ಕಾರಕ್ಕೆ ಸಾಕಷ್ಟು ಹಣ ಉಳಿಸಿಕೊಟ್ಟಿದ್ದೇವೆ, ಬೆಮೆಲ್ ಪ್ರವೈಟ್ ಮಾಡಿದರೆ ಇನ್ನಷ್ಟು ದುರುಪಯೋಗ ಆಗುತ್ತೆ,
ಕೆಜಿಎಫ್, ಮೈಸೂರು, ಪಾಲಕಾಡ್ ಬೆಂಗಳೂರು ಎಲ್ಲಾ ಕಡೆ ಮೀಟಿಂಗ್ ಮಾಡಿ, ಹ್ಯೂಮೆನ್ ಚೈನ್, ಬೈಕ್ ರ್ಯಾಲಿ, ತಮಟೆ ಚಳುವಳಿ, ಕ್ಯಾಂಡಲ್ ಲೈಟ್ ಪ್ರತಿಭಟನೆ ಈಗಾಗಲೇ ಮಾಡಿದ್ದೇವೆ, ಆದರೂ ಕೇಂದ್ರ ಸರ್ಕಾರ ಗಮನ ಹರಿಸಿಲ್ಲ, ಈ ಶನಿವಾರ ಟೌನ್ಹಾಲ್ ಬಳಿ ಬೃಹತ್ ಪ್ರತಿಭಟನೆ, ನ.15 ರವರೆಗೆ ಟೌನ್ ಹಾಲ್ ನಿಂದ ಪ್ರೀಡಂ ಪಾರ್ಕ್ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಲಿದ್ದೇವೆ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.