ಆನೇಕಲ್(ಬೆಂ.ನಗರ) : ಲಾಕ್ಡೌನ್ ಖಾತರಿಯಾಗುತ್ತಿದ್ದ ಬೆನ್ನಲ್ಲೇ ಬೆಂಗಳೂರಿನಲ್ಲಿನ ವಲಸಿಗರು ತಮ್ಮ ಊರಿನತ್ತ ಗಂಟು ಮೂಟೆ ಕಟ್ಟಿದ್ದಾರೆ.
ಬೆಂಗಳೂರಿನಲ್ಲಿ ಎರಡನೇ ಅಲೆ ಎಬ್ಬಿಸಿರುವ ಗೊಂದಲ-ಭೀತಿಯ ನಡುವೆ ಲಾಕ್ಡೌನ್ ಸಮಾಚಾರದಿಂದ ಎಚ್ಚೆತ್ತಿರುವ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ.
ತಮಿಳುನಾಡಿನಿಂದ ಕೆಲಸ ಅರಸಿ ಬಂದಿದ್ದ ಕಾರ್ಮಿಕರು ಮತ್ತೆ ಅತ್ತಿಬೆಲೆ ಗಡಿ ಮುಖಾಂತರ ತೆರಳಿದ್ದಾರೆ. ನಿನ್ನೆ ವಾರಾಂತ್ಯ ಕರ್ಫ್ಯೂ ನಂತರ ಲಾಕ್ಡೌನ್ ಸಾಧ್ಯತೆ ಬಗ್ಗೆ ಊಹಿಸಿದ್ದ ಜನ ರಾತ್ರಿಯೇ ಗಂಟು ಮೂಟೆ ಸಿದ್ದಪಡಿಸಿಕೊಂಡು ಬೆಳಗ್ಗೆಯಿಂದಲೇ ರಾಷ್ಟ್ರೀಯ ಹೆದ್ದಾರಿ ಮೂಲಕ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.