ನೆಲಮಂಗಲ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಪತಿ ಮತ್ತು ಮಾವ ಇಬ್ಬರು ಸೇರಿ ಗೃಹಿಣಿಯನ್ನು ಕೊಲೆಮಾಡಿರುವ ಅಮಾನವೀಯ ಘಟನೆ ನಡೆದಿದೆ.
ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ಗೃಹಿಣಿ ರೇಖಾಳನ್ನು (30) ಗಂಡ ಮತ್ತು ಆಕೆಯ ಮಾವ ಸೇರಿ ಹತ್ಯೆ ಮಾಡಿದ್ದಾರೆ. ಪತಿ ಗಿರೀಶ್ ಮತ್ತು ಆಕೆಯ ಮಾವ ನಾರಾಯಣಪ್ಪನನ್ನು ದಾಬಸ್ ಪೇಟೆ ಪೊಲೀಸರು ಬಂಧಿಸಿದ್ದು, ವಿಚಾರಣೆ ಕೈಗೊಂಡಿದ್ದಾರೆ.
ಮೃತ ಮಹಿಳೆ ತುಮಕೂರಿನ ದಿಬ್ಬೂರು ಮೂಲದವರಾಗಿದ್ದು, 2 ವರ್ಷದ ಹಿಂದೆ ದಾಬಸ್ ಪೇಟೆಯ ಗಿರೀಶ್ ಜೊತೆ ಮದುವೆಯಾಗಿದ್ದರು. ಮದುವೆಯಾದ ಕೆಲವು ತಿಂಗಳ ಬಳಿಕ ಗಿರೀಶ್ ಮತ್ತು ನಾರಾಯಣಪ್ಪ ರೇಖಾಗೆ ಹಣದ ವಿಚಾರವಾಗಿ ಕಿರುಕುಳ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕ್ರಿಕೆಟ್ ಬಾಲ್ ವಿಚಾರವಾಗಿ ಗಲಾಟೆ: ನಡು ರಸ್ತೆ ಮೇಲೆ ಬಡಿದಾಡಿಕೊಂಡ ಗ್ರಾಮಸ್ಥರು
ಕೊಲೆಯಾಗುವ ಮುನ್ನ ರೇಖಾ ನಮಗೆ ಕರೆ ಮಾಡಿ ನಮ್ಮ ಮನೆಗೆ ಬೇಗ ಬನ್ನಿ ಎಂದಿದ್ದಳು ಅಂತಾ ಪೋಷಕರು ಹೇಳಿದ್ದಾರೆ. ಅದರಂತೆ ರೇಖಾ ಮನೆಗೆ ಬಂದು ನೋಡಿದಾಗ ಮಗಳು ಸಾವನ್ನಪ್ಪಿರುವುದು ಗೊತ್ತಾಗಿದೆ. ಕೂಡಲೇ ಪೋಷಕರು ದಾಬಸ್ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.