ಬೆಂಗಳೂರು : ನಗರದ ಐತಿಹಾಸಿಕ ಕರಗಕ್ಕೆ ಇದೀಗ ಮುಹೂರ್ತ ನಿಗದಿ ಪಡಿಸಲು ಸೋಮವಾರ ಕರಗ ಆಚರಣೆ ಚರ್ಚೆಗೆ ಆಯುಕ್ತ ಗೌರವ್ ಗುಪ್ತ ವಿಶೇಷ ಸಭೆ ಕರೆದಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳೀಯ ಶಾಸಕ, ಸಂಸದ ಹಾಗೂ ದೇವಸ್ಥಾನ ಆಡಳಿತ ಮಂಡಳಿಯೊಂದಿಗೆ ಈ ಸಭೆ ನಡೆಯಲಿದೆ.
ಸದ್ಯ ಕೋವಿಡ್ ನಿಯಮದಿಂದ ಯಾವುದೇ ಹಬ್ಬ ಜಾತ್ರೆ ಹಾಗೂ ಕರಗಗಳಿಗೆ ಬ್ರೇಕ್ ನೀಡಿರುವ ಸರ್ಕಾರ, ಕಳೆದ ಬಾರಿ ಲಾಕ್ಡೌನ್ ಇದ್ರೂ ಸಾಂಪ್ರದಾಯಿಕವಾಗಿ ಕರಗ ಆಚರಿಸಲಾಗಿದೆ.
ಇದೇ ತಿಂಗಳು 27ಕ್ಕೆ ನಡೆಯಲಿರುವ ಬೆಂಗಳೂರು ಕರಗವನ್ನ ಕಳೆದ ಬಾರಿಯಂತೆ ಈ ಬಾರಿಯೂ ಆಚರಣೆ ಮಾಡಬೇಕಾ? ಅಥವಾ ಕೊರೊನಾ ಆತಂಕದ ನಡುವೆ ಸರಳ ಕರಗ ಆಚರಣೆ ಒಳಿತಾ ಎಂಬುದನ್ನ ನಿರ್ಧರಿಸಲಾಗುತ್ತೆ.
ಇನ್ನು, ಕೋವಿಡ್ ನಿಯಮಗಳನ್ನು ಅನುಸರಿಸಿ ಆಚರಣೆ ಮಾಡೋದು ಹೇಗೆ? ಕೇವಲ ತಿಗಳ ಸಮುದಾಯಕ್ಕಾದ್ರೂ ಆಚರಣೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕಾ ಎಂಬ ವಿಚಾರವಾಗಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಚರ್ಚೆ ನಡೆಸಲಿದ್ದಾರೆ.
ಇದನ್ನೂ ಓದಿ..ಉಪ ಚುನಾವಣೆ ಹಿನ್ನೆಲೆ.. ಆರು ಮಂದಿ ಪೊಲೀಸ್ ಅಧೀಕ್ಷಕರ ವರ್ಗಾವಣೆ.. ರಾಜ್ಯ ಸರ್ಕಾರದಿಂದ ಆದೇಶ