ETV Bharat / city

ದಿನಕ್ಕೆ ಆರು ಬಾರಿ ಸ್ನಾನ ಮಾಡುವ ಪತ್ನಿ: ಅತಿರೇಕದ ಸ್ವಚ್ಛತೆ ಸಹಿಸದೆ ಠಾಣೆ ಮೆಟ್ಟಿಲೇರಿದ ಪತಿ - ಪತ್ನಿ ಸ್ವಚ್ಛತೆ ಸಹಿಸದೆ ಡೈವೋರ್ಸ್ ನೀಡಲು ಮುಂದಾದ ಪತಿ

ಲಾಕ್‍ಡೌನ್ ಸಂದರ್ಭದಲ್ಲಿ ದಿನಕ್ಕೆ ಆರು ಬಾರಿ ಸ್ನಾನ ಮಾಡುವುದು, ಸ್ನಾನಕ್ಕೆ ಬಳಸಿದ ಸೋಪನ್ನು ಮತ್ತೊಂದು ಸೋಪಿನಿಂದ ಸ್ವಚ್ಛಗೊಳಿಸುವ ಮಟ್ಟಕ್ಕೆ ವರ್ತಿಸುತ್ತಿದ್ದಾಳೆ ಎಂದು ಪತಿ ದೂರಿದ್ದಾರೆ..

bath
ಸ್ನಾನ
author img

By

Published : Dec 4, 2021, 9:59 AM IST

Updated : Dec 4, 2021, 11:09 AM IST

ಬೆಂಗಳೂರು : ದಿನಕ್ಕೆ ಆರು ಬಾರಿ ಸ್ನಾನ, ಬಳಸಿದ ಸೋಪನ್ನು ಮತ್ತೊಂದು ಸೋಪಿನಿಂದ ಸ್ವಚ್ಛಗೊಳಿಸುವ ಪತ್ನಿಯ ಅತಿರೇಕದ ವರ್ತನೆಯಿಂದ ಬೇಸತ್ತ ಪತಿ ವಿವಾಹ ವಿಚ್ಛೇದನಕ್ಕೆ ಮುಂದಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಒಸಿಡಿ ಖಾಯಿಲೆಯಿಂದ ಬಳಲುತ್ತಿರುವ 35 ವರ್ಷದ ಮಹಿಳೆ ಲ್ಯಾಪ್‍ಟಾಪ್, ಸೆಲ್‍ಫೋನ್‍ಗಳನ್ನು ಡಿಟರ್ಜೆಂಟ್ ಹಾಕಿ ಸ್ವಚ್ಛಗೊಳಿಸುವ ಅತಿರೇಕದ ವರ್ತನೆಯಿಂದ ಬೇಸತ್ತ ಪತಿ, ಪೊಲೀಸರ ಮೊರೆ ಕೂಡ ಹೋಗಿದ್ದಾರೆ. ಆರ್.ಟಿ.ನಗರ ಪೊಲೀಸರು ಈ ಪ್ರಕರಣ ಕುರಿತು ತನಿಖೆ ನಡೆಸುವಂತೆ ವನಿತಾ ಸಹಾಯವಾಣಿಗೆ ಶಿಫಾರಸು ಮಾಡಿದ್ದಾರೆ.

ಓದಿ: ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ.. ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಗ್ಯಾಸ್​ ಟ್ಯಾಂಕರ್​, ನಾಲ್ವರು ಸಾವು!

ಆರ್.ಟಿ ನಗರದ ಸುಮತಿ ಮತ್ತು ರೋಹಿತ್‌( ಹೆಸರು ಬದಲಿಸಲಾಗಿದೆ) ಎಂಬುವರು 2009ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಟೆಕ್ಕಿ ರೋಹಿತ್ ವಿವಾಹದ ಬಳಿಕ ಪತ್ನಿ ಸುಮತಿ ಜೊತೆ ಲಂಡನ್‍ಗೆ ಹೋಗಿದ್ದರು. ಎಂಬಿಎ ಪದವೀಧರೆಯಾಗಿರುವ ಸುಮತಿ, ಲಂಡನ್‍ನಲ್ಲಿ ಮನೆಯನ್ನು ತುಂಬಾ ಸ್ವಚ್ಛವಾಗಿ ಇರಿಸಿಕೊಳ್ಳುತ್ತಿದ್ದರು.

ಮೊದಲ ಮಗು ಹುಟ್ಟಿದ 2 ವರ್ಷದ ಬಳಿಕ ಸುಮತಿಗೆ ಸ್ವಚ್ಛತೆ ಗೀಳು ಮತ್ತಷ್ಟು ಹೆಚ್ಚಾಗಿತ್ತು. ಪತಿ ಕೆಲಸ ಮುಗಿಸಿ ಮನೆಗೆ ಬಂದಾಗ ಶೂ, ಬಟ್ಟೆ, ಸೆಲ್‍ಫೋನ್ ಸ್ವಚ್ಛ ಮಾಡುವಂತೆ ಪದೇಪದೆ ಹೇಳುತ್ತಿದ್ದಳು. ಕಿರಿಕಿರಿಗೆ ಒಳಗಾದ ಪತಿ ಈಕೆಯ ಅತಿರೇಕದ ವರ್ತನೆಯಿಂದ ಬೇಸತ್ತು ಹೋಗಿದ್ದರು.

ಕೌಟುಂಬಿಕ ಸಮಾಲೋಚನೆ : ಲಂಡನ್‍ನಿಂದ ಬೆಂಗಳೂರಿಗೆ ವಾಪಸ್ ಆದ ದಂಪತಿ ಕೌಟುಂಬಿಕ ಸಮಾಲೋಚನೆಗೆ ಒಳಗಾಗುತ್ತಾರೆ. ಈ ವೇಳೆ ಈ ಸ್ವಚ್ಛತೆಯ ಗೀಳು ಕೊಂಚ ಕಡಿಮೆಯಾಗುತ್ತದೆ. ಈ ನಡುವೆ ದಂಪತಿಗೆ 2ನೇ ಮಗು ಜನಿಸಿದೆ. ಕೋವಿಡ್ ಸಂದರ್ಭದಲ್ಲಿ ಸುಮತಿಗೆ ಸ್ವಚ್ಛತೆಯ ಗೀಳು ಮತ್ತೆ ಹೆಚ್ಚಾಗಿದೆ.

ಮನೆಯಲ್ಲಿ ಪದೇಪದೆ ಸ್ಯಾನಿಟೈಸರ್ ಬಳಸುವುದು, ಪೀಠೋಪಕರಣಗಳು, ಚಮಚ, ಪ್ಲೋರ್, ಮ್ಯಾಟ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಮತ್ತೆ ಮತ್ತೆ ಸ್ವಚ್ಛ ಮಾಡಲು ಪ್ರಾರಂಭಿಸಿದ್ದಳು.

ಇದನ್ನೂ ಓದಿ: ಪತ್ನಿಯೊಂದಿಗೆ ಜಗಳ : 11 ತಿಂಗಳ ಮಗುವಿಗೆ ವಿದ್ಯುತ್​ ಶಾಕ್ ನೀಡಿ ಕೊಂದ ಪಾಪಿ ತಂದೆ

ಆರು ಬಾರಿ ಸ್ನಾನ : ಲಾಕ್‍ಡೌನ್ ಸಂದರ್ಭದಲ್ಲಿ ದಿನಕ್ಕೆ ಆರು ಬಾರಿ ಸ್ನಾನ ಮಾಡುವುದು, ಸ್ನಾನಕ್ಕೆ ಬಳಸಿದ ಸೋಪನ್ನು ಮತ್ತೊಂದು ಸೋಪಿನಿಂದ ಸ್ವಚ್ಛಗೊಳಿಸುವ ಮಟ್ಟಕ್ಕೆ ವರ್ತಿಸುತ್ತಿದ್ದಾಳೆ ಎಂದು ಪತಿ ದೂರಿದ್ದಾರೆ.

ತಾಯಿ ಮೃತರಾದ ಬಳಿಕ ಮತ್ತಷ್ಟು ಸ್ವಚ್ಛತೆಯ ಗೀಳು : ಈ ನಡುವೆ ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಸುಮತಿ ಅವರ ತಾಯಿ ಮೃತಪಟ್ಟಿದ್ದಾರೆ. ಈ ಘಟನೆ ಬಳಿಕ ಸುಮತಿಗೆ ಸ್ವಚ್ಛತೆ ಗೀಳು ಮತ್ತಷ್ಟು ಹೆಚ್ಚಾಗಿದೆ.

ಲಾಕ್‍ಡೌನ್ ಸಂದರ್ಭದಲ್ಲಿ ಪತಿ ವರ್ಕ್ ಫ್ರಂ ಹೋಮ್ ಕೆಲಸ ಮಡುವಾಗ ಆತನ ಲ್ಯಾಪ್‍ಟಾಪ್, ಸೆಲ್‍ಫೋನ್‍ಗಳನ್ನು ಡಿಟರ್ಜೆಂಟ್ ಹಾಕಿ ಸ್ವಚ್ಛಗೊಳಿಸುತ್ತಿದ್ದಳು. ಮಕ್ಕಳು ಶಾಲೆಗೆ ಹೋಗಿ ಬಂದರೆ ಅವರ ಬ್ಯಾಗ್, ಯೂನಿಫಾರ್ಮ್, ಶೂಗಳನ್ನು ಪ್ರತಿ ದಿನ ಸ್ವಚ್ಛ ಮಾಡುತ್ತಿದ್ದಳು. ಈಕೆಯ ಸ್ವಚ್ಛತೆಯ ಅತಿರೇಕದ ವರ್ತನೆಗೆ ಬೇಸತ್ತ ಪತಿ ರೋಹಿತ್, ಇದೀಗ ಆಕೆಯಿಂದ ವಿಚ್ಛೇದನ ಕೋರಿದ್ದಾರೆ.

Last Updated : Dec 4, 2021, 11:09 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.