ETV Bharat / city

ವಿಧಾನಸೌಧ ಭೇಟಿ ಬಲು ಅಪರೂಪ: ಶಕ್ತಿಸೌಧದ 'ಗೆಸ್ಟ್ ಅಪಿಯರೆನ್ಸ್' ಸಚಿವರುಗಳಾರು ಗೊತ್ತಾ? - ಬೆಂಗಳೂರು ವಿಧಾನಸೌಧ ನ್ಯೂಸ್​

ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಆರು ತಿಂಗಳು ಆಗಿದೆ. ಆದರೆ ಬಿಎಸ್​ವೈ ಸರ್ಕಾರದ ಸಂಪುಟ ಸಚಿವರಲ್ಲಿ ಬಹುತೇಕರು ಶಕ್ತಿಸೌಧದಲ್ಲಿ ಕಾಣಿಸಿಕೊಳ್ಳುವುದೇ ಬಲು ಅಪರೂಪ.

Ministries
ಗೆಸ್ಟ್ ಅಪಿಯರೆನ್ಸ್ ಸಚಿವರು
author img

By

Published : Jan 12, 2020, 11:11 PM IST

ಬೆಂಗಳೂರು: ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಆರು ತಿಂಗಳು ಆಗಿದೆ. ಆದರೆ ಬಿಎಸ್​ವೈ ಸರ್ಕಾರದ ಸಂಪುಟ ಸಚಿವರಲ್ಲಿ ಬಹುತೇಕರು ಶಕ್ತಿಸೌಧದಲ್ಲಿ ಕಾಣಿಸಿಕೊಳ್ಳುವುದೇ ಬಲು ಅಪರೂಪ.

ವಿಧಾನಸೌಧಕ್ಕೆ ಭೇಟಿ ನೀಡುತ್ತಿರುವ ಸಚಿವರು

ವಿಧಾನಸೌಧ ರಾಜ್ಯದ ಆಡಳಿತ ಶಕ್ತಿ ಕೇಂದ್ರ. ಎಲ್ಲ ಪ್ರಮುಖ ನಿರ್ಧಾರಗಳು, ಇಲಾಖೆಯ ಸಮಗ್ರ ಪರಿಶೀಲನೆ, ರೂಪಿಸಬೇಕಾದ ನೀತಿ ನಿಯಮಗಳು ಸೇರಿದಂತೆ ಮಹತ್ವದ ನಿರ್ಣಯಗಳನ್ನು ಶಕ್ತಿಸೌಧದಲ್ಲೇ ತೆಗೆದುಕೊಳ್ಳಬೇಕಾಗುತ್ತದೆ. ಆಡಳಿತ ಯಂತ್ರದ ಹಿರಿಯ ಅಧಿಕಾರಿಗಳ ವರ್ಗ ವಿಧಾನಸೌಧದಲ್ಲೇ ಕೇಂದ್ರೀಕೃತವಾಗಿದೆ. ಹೀಗಾಗಿ ಸಚಿವರುಗಳು ತಮ್ಮ ಇಲಾಖೆಗಳಿಗೆ ಸಂಬಂಧ ಪಟ್ಟ ಕಡತ ವಿಲೇವಾರಿ, ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲು ವಿಧಾನಸೌಧಕ್ಕೆ ಬರುವುದು ಅತ್ಯಗತ್ಯ ಹಾಗೂ ಅನಿವಾರ್ಯವಾಗಿದೆ.

ಹೀಗಿದ್ದರೂ ಆಡಳಿತ ಯಂತ್ರದ‌‌ ಕೇಂದ್ರ ಬಿಂದುವಾದ ವಿಧಾನಸೌಧಕ್ಕೆ ಬಿಎಸ್​ವೈ ಸಂಪುಟದ ಹಲವು ಸಚಿವರುಗಳು ಚಕ್ಕರ್ ಹಾಕುತ್ತಿದ್ದಾರೆ. ಅಧಿಕಾರ ಹಿಡಿದು ಆರು ತಿಂಗಳು ಸಮೀಪಿಸುತ್ತಿದ್ದರೂ, ಅನೇಕ ಸಚಿವರದ್ದು ಶಕ್ತಿಕೇಂದ್ರಕ್ಕೆ ವಿರಳ ಹಾಜರಾತಿ ಇದೆ.

ಯಾವ ಸಚಿವರದ್ದು ವಿರಳ ಹಾಜರಾತಿ?

ವಿಧಾನಸೌಧ ಹಾಗು ವಿಕಾಸಸೌಧ, ಸರ್ಕಾರದ ಸಂಪುಟ ಸಚಿವರಿಗೆ ಪ್ರಮುಖ ಆಡಳಿತ ಯಂತ್ರದ ಕಾರ್ಯಸ್ಥಾನವಾಗಿದೆ. ಆದರೆ, ಹಲವು ಸಚಿವರು ಶಕ್ತಿಕೇಂದ್ರದಲ್ಲಿ ಕೇವಲ ಗೆಸ್ಟ್ ಅಪಿಯರೆನ್ಸ್​ಗೆ ಸೀಮಿತರಾಗಿದ್ದಾರೆ. ವಿಧಾನಸೌಧದ ಅಪರೂಪದ ಅತಿಥಿ ಸಚಿವರಲ್ಲಿ ಮೊದಲಿಗರು ಆರೋಗ್ಯ ಸಚಿವ ಶ್ರೀರಾಮುಲು. ಶ್ರೀರಾಮುಲು ಅಧಿಕಾರ ವಹಿಸಿಕೊಂಡ ಬಳಿಕ ಬೆರಳೆಣಿಕೆಯಷ್ಟು ದಿನ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಧಾನಸೌಧ ಮೂರನೇ ಮಹಡಿಯಲ್ಲಿರುವ ಅವರ ಕಚೇರಿಯಲ್ಲಿ ಕಾಣಿಸಿಕೊಂಡಿರುವುದು ಅತ್ಯಂತ ವಿರಳ.

ಇನ್ನು ಡಿಸಿಎಂ ಅಶ್ವತ್ಥ್ ನಾರಾಯಣ್ ಕೂಡ ವಿಕಾಸಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಬಹಳ ಕಡಿಮೆ ಕಾಣಿಸಿಕೊಳ್ಳುತ್ತಾರೆ. ತಮ್ಮ ಕಾರ್ಯಚಟುವಟಿಕೆಗಳನ್ನು ಶಕ್ತಿಕೇಂದ್ರದ ಹೊರಗಡೆನೇ ಹೆಚ್ಚಾಗಿ ನಿರ್ವಹಿಸುತ್ತಾರೆ.

ಉಳಿದಂತೆ ಮಹಿಳಾ ಹಾಗು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಕೂಡ ವಿಕಾಸಸೌಧಕ್ಕೆ ಬರುವುದು ಅಪರೂಪ. ಎಲ್ಲೋ ಆಗೊಮ್ಮೆ ಈಗೊಮ್ಮೆ ಕ್ಷಣಕಾಲ ಬಂದು ಅಧಿಕಾರಿಗಳ‌ ಜತೆ ಸಭೆ ನಡೆಸಿ, ನಿರ್ಗಮಿಸುತ್ತಾರೆ.

ಇತ್ತ ಸಚಿವರಾದ ವಿ.ಸೋಮಣ್ಣ, ಡಿಸಿಎಂ ಲಕ್ಷ್ಮಣ್ ಸವದಿ, ಸಿ.ಸಿ.ಪಾಟೀಲ್ ಮತ್ತು ಕಾನೂನು ಸಚಿವ ಮಾಧುಸ್ವಾಮಿ ಶಕ್ತಿಕೇಂದ್ರದಲ್ಲಿ ಬಹಳ ವಿರಳವಾಗಿ ಕಾಣಿಸಿಕೊಳ್ಳುತ್ತಾರೆ. ಬಂದರೂ ಸ್ವಲ್ಪ ಹೊತ್ತು ಇದ್ದು ಹಾಗೇ ನಿರ್ಗಮಿಸುತ್ತಾರೆ‌.

ಯಾವ ಸಚಿವರದ್ದು ನಿರಂತರ ಹಾಜರಾತಿ:

ಕಂದಾಯ ಸಚಿವ ಆರ್.ಅಶೋಕ್ ವಿಧಾನಸೌಧಕ್ಕೆ ನಿರಂತರ ಭೇಟಿ ನೀಡಿ, ತಮ್ಮ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ವಾರಕ್ಕೆ ಮೂರು ನಾಲ್ಕು ದಿನ ವಿಧಾನಸೌಧಕ್ಕೆ ಬಂದು ಸಾರ್ವಜನಿಕರನ್ನು ಭೇಟಿ ಆಗುತ್ತಾರೆ. ಬಿಎಸ್​ವೈ ಸಂಪುಟ ಸಚಿವರಲ್ಲಿ ಆರ್.ಅಶೋಕ್ ವಿಧಾನಸೌಧದಲ್ಲಿ ಸದಾ‌ ಕಾಣಿಸಿಕೊಳ್ಳುತ್ತಿರುವ ಸಚಿವರಾಗಿದ್ದಾರೆ.

ಇನ್ನುಳಿದಂತೆ ಡಿಸಿಎಂ ಗೋವಿಂದ ಕಾರಜೋಳ ವಾರಕ್ಕೆ ಎರಡು ಮೂರು ದಿನವಾದರೂ ವಿಧಾನಸೌಧಕ್ಕೆ ಬಂದು ಸಭೆಗಳನ್ನು ನಡೆಸುತ್ತಾರೆ. ಉಳಿದಂತೆ ಸಚಿವರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಿ.ಟಿ ರವಿ, ಸುರೇಶ್ ಕುಮಾರ್, ಕೋಟಾ ಶ್ರೀನಿವಾಸ ಪೂಜಾರಿ ವಾರದಲ್ಲಿ ಕನಿಷ್ಠ ಒಂದು ಅಥವಾ ಎರಡು ದಿನವಾದರೂ ಭೇಟಿ ನೀಡುತ್ತಾರೆ.

Intro:Body:KN_BNG_02_VIDHANSAUDA_MINISTERSVISIT_SCRIPT_7201951

ವಿಧಾನಸೌಧ ಭೇಟಿ ಬಲು ಅಪರೂಪ: ಶಕ್ತಿಸೌಧದ 'ಗೆಸ್ಟ್ ಅಪಿಯರೆನ್ಸ್' ಸಚಿವರುಗಳಾರು ಗೊತ್ತಾ!?

ಬೆಂಗಳೂರು: ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಆರು ತಿಂಗಳು ಆಗಿದೆ. ಆದರೆ ಬಿಎಸ್ ವೈ ಸರ್ಕಾರದ ಸಂಪುಟ ಸಚಿವರಲ್ಲಿ ಬಹುತೇಕರು ಶಕ್ತಿಸೌಧದಲ್ಲಿ ಕಾಣಿಸಿಕೊಳ್ಳುವುದೇ ಬಲು ಅಪರೂಪ.

ವಿಧಾನಸೌಧ ರಾಜ್ಯದ ಆಡಳಿತ ಶಕ್ತಿ ಕೇಂದ್ರ. ಎಲ್ಲ ಪ್ರಮುಖ ನಿರ್ಧಾರಗಳು, ಇಲಾಖೆಯ ಸಮಗ್ರ ಪರಿಶೀಲನೆ, ರೂಪಿಸಬೇಕಾದ ನೀತಿ ನಿಯಮಗಳು ಸೇರಿದಂತೆ ಮಹತ್ವದ ನಿರ್ಣಯಗಳನ್ನು ಶಕ್ತಿಸೌಧದಲ್ಲೇ ತೆಗೆದುಕೊಳ್ಳಬೇಕಾಗುತ್ತದೆ. ಆಡಳಿತ ಯಂತ್ರದ ಹಿರಿಯ ಅಧಿಕಾರಿಗಳ ವರ್ಗ ವಿಧಾನಸೌಧದಲ್ಲೇ ಕೇಂದ್ರೀಕೃತವಾಗಿದೆ. ಹೀಗಾಗಿ ಸಚಿವರುಗಳು ತಮ್ಮ ಇಲಾಖೆಗಳಿಗೆ ಸಂಬಂಧ ಪಟ್ಟ ಕಡತ ವಿಲೇವಾರಿ, ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲು ವಿಧಾನಸೌಧಕ್ಕೆ ಬರುವುದು ಅತ್ಯಗತ್ಯ ಹಾಗೂ ಅನಿವಾರ್ಯವಾಗಿದೆ.

ಹೀಗಿದ್ದರೂ ಆಡಳಿತ ಯಂತ್ರದ‌‌ ಕೇಂದ್ರ ಬಿಂದುವಾದ ವಿಧಾನಸೌಧಕ್ಕೆ ಬಿಎಸ್ ವೈ ಸಂಪುಟದ ಹಲವು ಸಚಿವರುಗಳು ಚಕ್ಕರ್ ಹಾಕುತ್ತಿದ್ದಾರೆ. ಅಧಿಕಾರ ಹಿಡಿದು ಆರು ತಿಂಗಳು ಸಮೀಪಿಸುತ್ತಿದ್ದರೂ, ಅನೇಕ ಸಚಿವರದ್ದು ಶಕ್ತಿಕೇಂದ್ರಕ್ಕೆ ವಿರಳ ಹಾಜರಾತಿ ಇದೆ.

ಯಾವ ಸಚಿವರದ್ದು ವಿರಳ ಹಾಜರಾತಿ:

ವಿಧಾನಸೌಧ ಹಾಗು ವಿಕಾಸಸೌಧ ಸರ್ಕಾರದ ಸಂಪುಟ ಸಚಿವರಿಗೆ ಪ್ರಮುಖ ಆಡಳಿತ ಯಂತ್ರದ ಕಾರ್ಯಸ್ಥಾನವಾಗಿದೆ. ಆದರೆ, ಹಲವು ಸಚಿವರು ಶಕ್ತಿಕೇಂದ್ರದಲ್ಲಿ ಕೇವಲ ಗೆಸ್ಟ್ ಅಪಿಯರೆನ್ಸ್ ಗೆ ಸೀಮಿತರಾಗಿದ್ದಾರೆ.

ವಿಧಾನಸೌಧದ ಅಪರೂಪದ ಅತಿಥಿ ಸಚಿವರಲ್ಲಿ ಮೊದಲಿಗರು ಆರೋಗ್ಯ ಸಚಿವ ಶ್ರೀರಾಮುಲು. ಶ್ರೀರಾಮುಲು ಅಧಿಕಾರ ವಹಿಸಿಕೊಂಡ ಬಳಿಕ ಬೆರಳೆಣಿಕೆಯಷ್ಟು ದಿನ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಧಾನಸೌಧ ಮೂರನೇ ಮಹಡಿಯಲ್ಲಿರುವ ಅವರ ಕಚೇರಿಯಲ್ಲಿ ಕಾಣಿಸಿಕೊಂಡಿರುವುದು ಅತ್ಯಂತ ವಿರಳ.

ಇನ್ನು ಡಿಸಿಎಂ ಅಶ್ವತ್ಥ್ ನಾರಾಯಣ್ ಕೂಡ ವಿಕಾಸಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಬಹಳ ಕಡಿಮೆ ಕಾಣಿಸಿಕೊಳ್ಳುತ್ತಾರೆ. ತಮ್ಮ‌ ಕಾರ್ಯಚಟುವಟಿಕೆಗಳನ್ನು ಶಕ್ತಿಕೇಂದ್ರದ ಹೊರಗಡೆನೇ ಹೆಚ್ಚಾಗಿ ನಿರ್ವಹಿಸುತ್ತಾರೆ.

ಉಳಿದಂತೆ ಮಹಿಳಾ ಹಾಗು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಕೂಡ ವಿಕಾಸಸೌಧಕ್ಕೆ ಬರುವುದು ಅಪರೂಪ. ಎಲ್ಲೋ ಆಗೊಮ್ಮೆ ಈಗೊಮ್ಮೆ ಕ್ಷಣಕಾಲ ಬಂದು ಅಧಿಕಾರಿಗಳ‌ ಜತೆ ಸಭೆ ನಡೆಸಿ, ನಿರ್ಗಮಿಸುತ್ತಾರೆ.

ಇತ್ತ ಸಚಿವರಾದ ವಿ.ಸೋಮಣ್ಣ, ಡಿಸಿಎಂ ಲಕ್ಷ್ಮಣ್ ಸವದಿ, ಸಿ.ಸಿ.ಪಾಟೀಲ್ ಮತ್ತು ಕಾನೂನು ಸಚಿವ ಮಾಧುಸ್ವಾಮಿ ಶಕ್ತಿಕೇಂದ್ರದಲ್ಲಿ ಬಹಳ ವಿರಳವಾಗಿ ಕಾಣಿಸಿಕೊಳ್ಳುತ್ತಾರೆ. ಬಂದರೂ ಸ್ವಲ್ಪ ಹೊತ್ತು ಇದ್ದು ಹಾಗೇ ಬಂದು ಹಾಗೇ ನಿರ್ಗಮಿಸುತ್ತಾರೆ‌.

ಯಾವ ಸಚಿವರದ್ದು ನಿರಂತರ ಹಾಜರಾತಿ:

ಕಂದಾಯ ಸಚಿವ ಆರ್.ಅಶೋಕ್ ವಿಧಾನಸೌಧಕ್ಕೆ ನಿರಂತರ ಭೇಟಿ ನೀಡಿ, ತಮ್ಮ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ವಾರಕ್ಕೆ ಮೂರು ನಾಲ್ಕು ದಿನ ವಿಧಾನಸೌಧಕ್ಕೆ ಬಂದು ಸಾರ್ವಜನಿಕರನ್ನು ಭೇಟಿ ಆಗುತ್ತಾರೆ. ಬಿಎಸ್ ವೈ ಸಂಪುಟ ಸಚಿವರಲ್ಲಿ ಆರ್.ಅಶೋಕ್ ವಿಧಾನಸೌಧದಲ್ಲಿ ಸದಾ‌ ಕಾಣಿಸಿಕೊಳ್ಳುತ್ತಿರುವ ಸಚಿವರಾಗಿದ್ದಾರೆ.

ಇನ್ನುಳಿದಂತೆ ಡಿಸಿಎಂ ಗೋವಿಂದ ಕಾರಜೋಳ ವಾರಕ್ಕೆ ಎರಡು ಮೂರು ದಿನವಾದರೂ ವಿಧಾನಸೌಧಕ್ಕೆ ಬಂದು ಸಭೆಗಳನ್ನು ನಡೆಸುತ್ತಾರೆ.

ಉಳಿದಂತೆ ಸಚಿವರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಿ.ಟಿ.ರವಿ, ಸುರೇಶ್ ಕುಮಾರ್, ಕೋಟಾ ಶ್ರೀನಿವಾಸ ಪೂಜಾರಿ ವಾರದಲ್ಲಿ ಕನಿಷ್ಠ ಒಂದು ಅಥವ ಎರಡು ದಿನವಾದರು ಭೇಟಿ ನೀಡುತ್ತಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.