ETV Bharat / city

ಕಾವೇರಿ ಕೂಗು ಯೋಜನೆಯಲ್ಲಿ ಸರ್ಕಾರದ ಪಾತ್ರವೇನು: ಸ್ಪಷ್ಟನೆ ನೀಡಲು ಕೊನೆ ಅವಕಾಶ ನೀಡಿದ ಹೈಕೋರ್ಟ್ - ಈಶಾ ಪೌಂಡೇಷನ್​​ ಕಾವೇರಿ ಕೂಗು ಹೈಕೋರ್ಟ್​ ಆದೇಶ

ಕಾವೇರಿ ನದಿ ಪಾತ್ರದುದ್ದಕ್ಕೂ ಗಿಡ ನೆಡುವ ಉದ್ದೇಶದಿಂದ ಸದ್ಗುರು ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಶನ್ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದನ್ನು ಆಕ್ಷೇಪಿಸಿ ವಕೀಲ ಎ.ವಿ.ಅಮರನಾಥ್ ಪಿಐಎಲ್ ಸಲ್ಲಿಸಿದ್ದರು. ನದಿ ಪಾತ್ರದುದ್ದಕ್ಕೂ 639 ಕಿ.ಮೀ.ವರೆಗೆ 253 ಕೋಟಿ ಗಿಡಗಳನ್ನು ನೆಡುವುದಾಗಿ ಪ್ರಚಾರ ಮಾಡುತ್ತಾ ಪ್ರತಿ ಗಿಡಕ್ಕೆ 42 ರೂ. ಸಂಗ್ರಹಿಸುತ್ತಿದೆ. ಈ ರೀತಿ ಒಟ್ಟು 10 ಸಾವಿರ ಕೋಟಿಗೂ ಅಧಿಕ ಹಣ ಸಂಗ್ರಹಿಸಲು ಮುಂದಾಗಿರುವುದು ಕಾನೂನು ಬಾಹಿರ ಎಂದು ಆರೋಪಿಸಿದ್ದರು.

what-is-the-role-of-the-government-in-the-cauvery-calling-project
ಕಾವೇರಿ ಕೂಗು ಯೋಜನೆ
author img

By

Published : Feb 2, 2021, 7:43 PM IST

ಬೆಂಗಳೂರು: ಕಾವೇರಿ ಕೂಗು ಯೋಜನೆಯಲ್ಲಿ ಸರ್ಕಾರದ ಪಾತ್ರವೇನು ಎಂಬುದಕ್ಕೆ ಸ್ಪಷ್ಟನೆ ನೀಡುವಂತೆ ತಾಕೀತು ಮಾಡಿರುವ ಹೈಕೋರ್ಟ್, ಈ ಸಂಬಂಧ ಪ್ರಮಾಣಪತ್ರ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕಡೆಯ ಅವಕಾಶ ನೀಡಿದೆ.

ಈ ಕುರಿತಂತೆ ಹೈಕೋರ್ಟ್ ಪರಿವರ್ತಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ಸ್ಪಷ್ಟನೆ ನೀಡಲು ಮತ್ತಷ್ಟು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾತ್ರವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ನ್ಯಾಯಾಲಯ ತಿಂಗಳುಗಳ ಹಿಂದೆಯೇ ಹೇಳಿದೆ. ಈಶಾ ಫೌಂಡೇಶನ್ ಅಥವಾ ಈಶಾ ಔಟ್ ರೀಚ್​ನ ಕಾವೇರಿ ಕೂಗು ಯೋಜನೆಯಲ್ಲಿ ಸರ್ಕಾರದ ಪಾತ್ರವಿದೆಯೇ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸುವಂತೆ ನಿರ್ದೇಶಿಸಿದೆ. ಆದರೆ ರಾಜ್ಯ ಸರ್ಕಾರ ಈವರೆಗೂ ಲಿಖಿತ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಫೆಬ್ರವರಿ 23ರೊಳಗೆ ಸರ್ಕಾರ ತನ್ನ ಸ್ಪಷ್ಟನೆ ನೀಡಬೇಕು. ಮತ್ತೆ ಕಾಲಾವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿ ವಿಚಾರಣೆ ಮುಂದೂಡಿತು.

ಓದಿ-ಬಿಗ್ ಬಾಸ್ ಸೀಸನ್ 8ಕ್ಕೆ ಸುದೀಪ್ ಪಡೆಯಲಿರುವ ಸಂಭಾವನೆ ಇಷ್ಟು₹___ ಕೋಟಿ

ಕಾವೇರಿ ನದಿ ಪಾತ್ರದುದ್ದಕ್ಕೂ ಗಿಡ ನೆಡುವ ಉದ್ದೇಶದಿಂದ ಸದ್ಗುರು ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಶನ್ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದನ್ನು ಆಕ್ಷೇಪಿಸಿ ವಕೀಲ ಎ.ವಿ.ಅಮರನಾಥ್ ಪಿಐಎಲ್ ಸಲ್ಲಿಸಿದ್ದರು. ನದಿ ಪಾತ್ರದುದ್ದಕ್ಕೂ 639 ಕಿ.ಮೀ.ವರೆಗೆ 253 ಕೋಟಿ ಗಿಡಗಳನ್ನು ನೆಡುವುದಾಗಿ ಪ್ರಚಾರ ಮಾಡುತ್ತಾ ಪ್ರತಿ ಗಿಡಕ್ಕೆ 42 ರೂ. ಸಂಗ್ರಹಿಸುತ್ತಿದೆ. ಈ ರೀತಿ ಒಟ್ಟು 10 ಸಾವಿರ ಕೋಟಿಗೂ ಅಧಿಕ ಹಣ ಸಂಗ್ರಹಿಸಲು ಮುಂದಾಗಿರುವುದು ಕಾನೂನು ಬಾಹಿರ ಎಂದು ಆರೋಪಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಕಾರಣಾಂತರಗಳಿಂದ ಹೈಕೋರ್ಟ್ ಅರ್ಜಿಯನ್ನು ಸ್ವಯಂಪ್ರೇರಿತ ಅರ್ಜಿಯಾಗಿ ಪರಿವರ್ತಿಸಿಕೊಂಡಿದೆ.

ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ಈಶಾ ಫೌಂಡೇಶನ್ ಗಿಡ ನೆಡುವ ಕಾರ್ಯವನ್ನು ಈಶಾ ಔಟ್ ರೀಚ್ ಮಾಡುತ್ತಿದೆ. ಹಾಗೆಯೇ ಗಿಡಗಳನ್ನು ಸರ್ಕಾರಿ ಭೂಮಿಯಲ್ಲಿ ನೆಡುತ್ತಿಲ್ಲ. ಬದಲಿಗೆ ನದಿ ತಪ್ಪಲಿನ ರೈತರ ಜಮೀನುಗಳಲ್ಲಿ ನೆಡಲು ಉದ್ದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆದರೆ ಸರ್ಕಾರ ಮಾತ್ರ ಈವರೆಗೆ ಯೋಜನೆಯಲ್ಲಿ ತನ್ನ ಪಾತ್ರದ ಕುರಿತು ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.