ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕರಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪರ್ಯಾಯ ನಾಯಕತ್ವ ಹುಟ್ಟುಹಾಕಲು ಹೈಕಮಾಂಡ್ ರಾಜಕೀಯ ತಂತ್ರಗಾರಿಕೆ ರೂಪಿಸತೊಡಗಿದೆ. ಜನಸಮುದಾಯದ ನಾಯಕರೆಂದು ಗುರುತಿಸಿಕೊಂಡಿದ್ದ ಸಿಎಂ ಯಡಿಯೂರಪ್ಪನವರನ್ನು ಬದಲಾಯಿಸಿ ಅವರ ಸ್ಥಾನದಲ್ಲಿ ಬೇರೊಬ್ಬ ನಾಯಕನಿಗೆ ಅವಕಾಶ ಕೊಟ್ಟು ಬೆಳೆಸುವ ಹೆಕಮಾಂಡ್ನ ಯೋಜನೆ ಫಲಿಸುವುದೇ...? ಎನ್ನುವ ಪ್ರಶ್ನೆ ಈಗ ಮೂಡಿದೆ.
ರಾಜಕೀಯ ಲೆಕ್ಕಾಚಾರಗಳೊಂದಿಗೆ ಬಹಳಷ್ಟು ಅಳೆದು ತೂಗಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆಗೆ ಹೈಕಮಾಂಡ್ ಮುಹೂರ್ತ ನಿಗದಿಪಡಿಸಿದೆ. ಅಷ್ಟೇ ಅಲ್ಲ ಜೊತೆ ಜೊತೆಗೆ ಪರ್ಯಾಯ ನಾಯಕನನ್ನೂ ಶೋಧಿಸುತ್ತಿದೆ. ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಉತ್ತರಾಖಂಡ್ ರಾಜ್ಯಗಳಲ್ಲಿ ಮಾಸ್ ಲೀಡರ್ಗಳನ್ನು ಕಡೆಗಣಿಸಿ ಅಚ್ಚರಿಯ ಅಭ್ಯರ್ಥಿಗಳನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದ ಮಾದರಿಯಲ್ಲಿಯೇ ಕರ್ನಾಟಕಕ್ಕೂ ಸಿಎಂ ಆಯ್ಕೆಯಲ್ಲಿ ಸರ್ಪ್ರೈಸ್ ನೀಡಲು ಪ್ರಧಾನಿ ಮೋದಿ - ಅಮಿತ್ ಷಾ ಜೋಡಿ ತಂತ್ರಗಾರಿಕೆ ರೂಪಿಸತೊಡಗಿದೆ.
ಬಹಳಷ್ಟು ವಿಭಿನ್ನ ರಾಜಕಾರಣ ಮತ್ತು ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕರ್ನಾಟಕದಲ್ಲಿ ಹೊಸ ಹೊಸ ರಾಜಕೀಯ ಪ್ರಯೋಗಗಳನ್ನು ಮಾಡುವುದು ದೆಹಲಿಯ ಬಿಜೆಪಿ ಹೈಕಮಾಂಡ್ಗೆ ಅಂದುಕೊಂಡಂತೆ ಸುಲಭವಲ್ಲ. ಪ್ರಬಲ ಲಿಂಗಾಯತ ಸಮುದಾಯದ ಬೆಂಬಲ ಹೊಂದಿರುವ ಮಹಾನಾಯಕ ಯಡಿಯೂರಪ್ಪ ಅವರನ್ನ ರಾಜಕೀಯವಾಗಿ ನಿರ್ಲಕ್ಷಿಸಿ ಪರ್ಯಾಯ ನಾಯಕನನ್ನು ಬೆಳೆಸುವುದು ಸುಲಭದ ಮಾತಲ್ಲ. ಅದೊಂದು ಸವಾಲಿನ ಕೆಲಸ ಅಂತಾನೂ ಅವರಿಗೆ ಗೊತ್ತು.
ಪರ್ಯಾಯ ನಾಯಕತ್ವದ ಪ್ರಯೋಗಗಳೆಲ್ಲವೂ ವಿಫಲ ...!
ರಾಜ್ಯ ಬಿಜೆಪಿಯಲ್ಲಿ ಅನಭಿಷಕ್ತ ದೊರೆಯಾಗಿ ಬೆಳೆದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪರ್ಯಾಯ ನಾಯಕನನ್ನು ಬೆಳೆಸಲು ಸುಮಾರು 20 ವರ್ಷಗಳಿಂದಲೂ ಬಿಜೆಪಿ ಹೈಕಮಾಂಡ್ ಹತ್ತಾರು ರಾಜಕೀಯ ಪ್ರಯೋಗಗಳನ್ನು ಮಾಡಿದೆ. ಆದರೆ ಯಾವ ತಂತ್ರಗಾರಿಕೆಯೂ ನಿರೀಕ್ಷಿತ ಫಲ ನೀಡಿಲ್ಲ. ಲಿಂಗಾಯತ ಮತ್ತು ಲಿಂಗಾಯೇತರ ಸಮುದಾಯಗಳಿಗೆ ಸೇರಿದ ನಾಯಕರಿಗೆ ಪಕ್ಷದಲ್ಲಿ ಮತ್ತು ಬಿಜೆಪಿ ಆಡಳಿತದ ಸರ್ಕಾರದಲ್ಲಿ ಅಧಿಕಾರ ಹಾಗೂ ಪ್ರೋತ್ಸಾಹ ನೀಡಿ ಪರ್ಯಾಯ ನಾಯಕನನ್ನು ಬೆಳೆಸಲು ತರಹೇವಾರಿ ಪ್ರಯೋಗ ನಡೆಸಿದರೂ ಯಡಿಯೂರಪ್ಪನವರಿಗಿದ್ದ ಜನ ಬೆಂಬಲದ ನಡುವೆ ಎಲ್ಲವೂ ಹೈಕಮಾಂಡ್ಗೆ ತಿರುಗುಬಾಣವಾದವು.
ಬಿಎಸ್ವೈಗೆ ಪರ್ಯಾಯ ನಾಯಕತ್ವ... ಹೈಕಮಾಂಡ್ನ ತಂತ್ರಗಾರಿಕೆ ಈ ಬಾರಿಯಾದ್ರೂ ಸಫಲವಾಗುವುದೇ?
ರಾಜಕೀಯ ಲೆಕ್ಕಾಚಾರಗಳೊಂದಿಗೆ ಬಹಳಷ್ಟು ಅಳೆದು ತೂಗಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆಗೆ ಹೈಕಮಾಂಡ್ ಮುಹೂರ್ತ ನಿಗದಿಪಡಿಸಿದೆ. ಅಷ್ಟೇ ಅಲ್ಲ ಜೊತೆ ಜೊತೆಗೆ ಪರ್ಯಾಯ ನಾಯಕನನ್ನೂ ಶೋಧಿಸುತ್ತಿದೆ.