ETV Bharat / city

ಚಾಮರಾಜನಗರ ಸಾವು ಪ್ರಕರಣ : ನ್ಯಾಯಾಂಗ ತನಿಖೆ ಪ್ರಕ್ರಿಯೆ ಹಾಗೂ ಸವಾಲುಗಳು! - ಬೆಂಗಳೂರು ಸುದ್ದಿ

High court
High court
author img

By

Published : May 8, 2021, 7:26 PM IST

ಬೆಂಗಳೂರು: ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಲಭ್ಯವಾಗದೇ 24 ಕೋವಿಡ್ ಸೋಂಕಿತ ರೋಗಿಗಳು ಸಾನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಈ ನ್ಯಾಯಾಂಗ ತನಿಖೆ ಏಕೆ, ಹೇಗೆ ಮತ್ತು ಸವಾಲುಗಳೇನು ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ.

ಮೇ 2ರ ರಾತ್ರಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಸಾವನ್ನಪ್ಪಿದ ದುರಂತವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ವಿಪಕ್ಷಗಳು ಒತ್ತಾಯಿಸಿದ್ದವು. ಮೇ.4ರಂದು ಹೈಕೋರ್ಟ್​ನಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಹಾಗೂ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವ ಅಗತ್ಯವಿದೆ ಎಂದಿತ್ತಲ್ಲದೇ, ಈ ಕುರಿತು ನಿಲುವು ತಿಳಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಮೇ 5ರಂದು ಹೈಕೋರ್ಟ್​ಗೆ ಮಾಹಿತಿ ನೀಡಿದ್ದ ಅಡ್ವೊಕೇಟ್ ಜನರಲ್ ನ್ಯಾಯಾಂಗ ತನಿಖೆ ನಡೆಸಲು ಹೈಕೋರ್ಟ್​​​​​ನ ನಿವೃತ್ತ ನ್ಯಾಯಮೂರ್ತಿ ಬಿ.ಎ ಪಾಟೀಲ್ ಅವರ ಏಕ ವ್ಯಕ್ತಿ ಆಯೋಗ ರಚಿಸಿರುವುದಾಗಿ ತಿಳಿಸಿತ್ತು. ಇದೀಗ ಆಯೋಗ ತನ್ನ ತನಿಖಾ ಕಾರ್ಯವನ್ನ ಆರಂಭಿಸಿದೆ.

ನ್ಯಾಯಾಂಗ ತನಿಖೆ :

ರಾಜ್ಯ ಸರ್ಕಾರ ಮೇ. 5ರಂದು 'ವಿಚಾರಣಾ ಆಯೋಗ ಕಾಯ್ದೆ-1952'ರ ಪ್ರಕಾರ ನ್ಯಾ. ಬಿ.ಎ ಪಾಟೀಲ್ ಅವರ ಏಕ ವ್ಯಕ್ತಿ ಆಯೋಗವನ್ನು ರಚಿಸಿ ಅಧಿಸೂಚನೆ ಹೊರಡಿಸಿದೆ. ಅದರಂತೆ ನ್ಯಾ, ಪಾಟೀಲ್ ಅವರ ಆಯೋಗ ಪ್ರಕರಣದ ತನಿಖೆ ನಡೆಸಲಿದೆ. ನ್ಯಾಯಾಂಗ ತನಿಖೆಯ ಪ್ರಕ್ರಿಯೆ ಮೇಲ್ನೋಟಕ್ಕೆ ಇತರೆಲ್ಲ ತನಿಖಾಧಿಕಾರಿಗಳ ಅಥವಾ ತನಿಖಾ ಏಜೆನ್ಸಿಗಳ ರೀತಿಯಲ್ಲೇ ಇರುತ್ತದೆ. ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯುವುದರಿಂದಷ್ಟೇ ಇದನ್ನು ನ್ಯಾಯಾಂಗ ತನಿಖೆ ಎನ್ನುತ್ತಾರೆ. ಆದರೆ, ವಾಸ್ತವದಲ್ಲಿ ಇತರೆಲ್ಲ ತನಿಖಾಧಿಕಾರಿಗಳಿಗಿಂತ ನ್ಯಾಯಾಂಗ ತನಿಖೆ ನಡೆಸುವ ಆಯೋಗಕ್ಕೆ ಹೆಚ್ಚಿನ ಅಧಿಕಾರ ಇರುತ್ತದೆ. ಮುಖ್ಯವಾಗಿ ನ್ಯಾಯಾಂಗ ತನಿಖೆಯು ಸಹಜ ನ್ಯಾಯ ತತ್ವಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ ಎನ್ನುತ್ತಾರೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ.

ಆಯೋಗದ ಅಧಿಕಾರಗಳೇನು?

ಕಾಯ್ದೆ ಅಡಿ ರಚಿಸುವ ಕಮಿಷನ್​ಗೆ ಸಿವಿಲ್ ಕೋರ್ಟ್​ಗೆ ಇರುವಷ್ಟೇ ಅಧಿಕಾರಗಳನ್ನು ನೀಡಲಾಗಿರುತ್ತದೆ. ಅದರಂತೆ ಆಯೋಗ ಯಾವುದೇ ವ್ಯಕ್ತಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಬಹುದಾಗಿದೆ. ಯಾವುದೇ ದಾಖಲೆಗಳನ್ನು ಹಾಜರುಪಡಿಸುವಂತೆ ನಿರ್ದೇಶಿಸಬಹುದಾಗಿದೆ. ಸಾಕ್ಷ್ಯಗಳನ್ನು ಪ್ರಮಾಣಪತ್ರಗಳ ಮೂಲಕ ದಾಖಲಿಸಿಕೊಳ್ಳುವ ಅಧಿಕಾರ ಹೊಂದಿದೆ. ಯಾವುದೇ ಕೋರ್ಟ್, ಕಚೇರಿಗೆ ದಾಖಲೆಗಳನ್ನು ನೀಡುವಂತೆ ಕೋರುವ, ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಪರೀಕ್ಷೆಗೆ ಒಳಪಡಿಸುವ ವಿಶೇಷ ಅಧಿಕಾರ ಆಯೋಗಕ್ಕಿದೆ. ಇನ್ನು, ತನಿಖೆಗೆ ನಿರ್ದಿಷ್ಟ ವಿಷಯಗಳಲ್ಲಿ ವಿಶೇಷ ಜ್ಞಾನ ಹೊಂದಿರುವವರನ್ನು ಬಳಸಿಕೊಳ್ಳುವ ಅವಕಾಶವನ್ನೂ ನೀಡಲಾಗುತ್ತದೆ.

ಆಯೋಗದಿಂದ ತನಿಖೆ : ಹೈಕೋರ್ಟ್ ಈಗಾಗಲೇ ಆಕ್ಸಿಜನ್ ಪೂರೈಕೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದ್ದು, ಈ ಎಲ್ಲ ದಾಖಲೆಗಳನ್ನು ಆಯೋಗ ತನ್ನ ವಶಕ್ಕೆ ಪಡೆಯಲಿದೆ. ಇದರ ಹೊರತಾಗಿ ಉಳಿದಿರಬಹುದಾದ ದಾಖಲೆಗಳನ್ನು ಆರೋಗ್ಯ ಇಲಾಖೆಯಿಂದ, ಮೈಸೂರು, ಚಾಮರಾಜನಗರ ಜಿಲ್ಲಾಧಿಕಾರಿಗಳ ಕಚೇರಿಗಳಿಂದ, ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ, ಆಕ್ಸಿಜನ್ ಪೂರೈಕೆ ಏಜೆನ್ಸಿಗಳಿಂದ ವಶಕ್ಕೆ ತೆಗೆದುಕೊಳ್ಳಲಿದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿಗಳು, ವೈದ್ಯಾಧಿಕಾರಿಗಳು, ಆಕ್ಸಿಜನ್ ಪೂರೈಕೆದಾರರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ. ಈ ಹೇಳಿಕೆಗಳನ್ನು ಪ್ರಮಾಣ ಪತ್ರದ ಮೂಲಕ ತೆಗೆದುಕೊಳ್ಳಲಿದೆ.

ಇದೇ ವೇಳೆ, ಮೃತರ ಸಂಬಂಧಿಕರಿಂದ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆ, ಮಾಹಿತಿ, ಹೇಳಿಕೆಗಳನ್ನು ಪಡೆದುಕೊಳ್ಳಲಿದೆ. ತಜ್ಞರ ಅಭಿಪ್ರಾಯಗಳನ್ನೂ ಸಂಗ್ರಹಿಸಲಿದೆ. ನಂತರ ಲಭ್ಯ ದಾಖಲೆಗಳು, ಹೇಳಿಕೆಗಳು, ಸಾಂದರ್ಭಿಕ ಸಾಕ್ಷ್ಯಗಳು, ತಜ್ಞರ ಅಭಿಪ್ರಾಯಗಳನ್ನು ವಿಶ್ಲೇಷಣೆಗೆ ಒಳಪಡಿಸಿ ಲೋಪ ಆಗಿದ್ದೆಲ್ಲಿ, ಯಾರೆಲ್ಲ ಕಾರಣ ಎಂಬುದನ್ನು ನಿಖರವಾಗಿ ಗುರುತಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಆಯೋಗದ ಎದುರಿನ ಸವಾಲುಗಳು

ಸಾಮಾನ್ಯವಾಗಿ ನ್ಯಾಯಾಂಗ ತನಿಖೆಗಳು, ವಿಚಾರಣಾ ಆಯೋಗಗಳ ತನಿಖಾ ವರದಿಗಳು ಲಭ್ಯವಾಗಲು ಕನಿಷ್ಠ ಆರು ತಿಂಗಳು ಹಿಡಿಯುತ್ತವೆ. ಆದರೆ, ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಗೆ ಒಂದು ತಿಂಗಳ ಸಮಯ ನಿಗದಿಪಡಿಸಿದೆ. ಹೈಕೋರ್ಟ್​ಗೂ ತಿಂಗಳೊಳಗೆ ವರದಿ ಲಭ್ಯವಾಗಲಿದೆ ಎಂದು ಹೇಳಿದೆ.

ಇತ್ತೀಚೆಗಷ್ಟೇ ಹೈಕೋರ್ಟ್​ನಿಂದ ನಿವೃತ್ತಿ ಹೊಂದಿರುವ ನ್ಯಾ. ಬಿ.ಎ ಪಾಟೀಲ್ ಅವರ ಕಾನೂನು ಜ್ಞಾನ, ದಕ್ಷತೆ ಬಗ್ಗೆ ನ್ಯಾಯಾಲಯಕ್ಕಾಗಲೀ, ಸರ್ಕಾರಕ್ಕಾಗಲೀ ಅನುಮಾನವಿಲ್ಲ. ಆದರೆ, ಒಂದು ತಿಂಗಳ ಅವಧಿಯಲ್ಲಿ 24 ರೋಗಿಗಳ ಸಾವಿಗೆ ಯಾರೆಲ್ಲ ಕಾರಣರು ಎಂಬುದನ್ನು ಪತ್ತೆ ಮಾಡುವುದು ಆಯೋಗಕ್ಕೆ ಸವಾಲಾಗುವ ಸಾಧ್ಯತೆ ಇದೆ. ತನಿಖೆಯಲ್ಲಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ, ಏಜೆನ್ಸಿಯವರಿಗೆ, ಮೃತರ ಸಂಬಂಧಿಕರಿಗೆ ಸಮನ್ಸ್ ಜಾರಿ ಮಾಡಿ, ಅವರನ್ನು ಕರೆಸಿ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ. ಇವೆಲ್ಲವನ್ನೂ 1 ತಿಂಗಳೊಳಗೆ ಮುಗಿಸುವುದೇ ಸವಾಲು.

ಹೈಕೋರ್ಟ್​ನಿಂದ ಪ್ರತ್ಯೇಕ ಸಮಿತಿ :

ಇನ್ನು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡದೇ ನ್ಯಾಯಾಂಗ ತನಿಖೆಗೆ ಆದೇಶಿಸಿದ ಬಳಿಕ ಹೈಕೋರ್ಟ್ ಪ್ರಕರಣದ ಸತ್ಯ ಶೋಧನೆಗೆ ಇಬ್ಬರು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸಮಿತಿ ರಚಿಸಿದೆ. ಈ ಸಮಿತಿ 10 ದಿನಗಳಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ. ಆ ಬಳಿಕ ಆಯೋಗ ವರದಿ ಸಲ್ಲಿಸಲಿದ್ದು, ವರದಿ ಏರುಪೇರಾಗದಂತೆ ಕರಾರುವಕ್ಕಾದ ಹಾಗೂ ವಿಸ್ತೃತವಾದ ವರದಿಯನ್ನು ನ್ಯಾ. ಬಿ.ಎ ಪಾಟೀಲ್ ಅವರ ಆಯೋಗವೂ ನೀಡಬೇಕಿದೆ.

ಪ್ರಮುಖ ಸಾಕ್ಷ್ಯವಾಗಬಲ್ಲ ವರದಿ :

ಸರ್ಕಾರದ ಆದೇಶದಂತೆ ಕಾರ್ಯಾರಂಭ ಮಾಡಿರುವ ಆಯೋಗ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬಹುದೇ ಹೊರತು ಶಿಕ್ಷಿಸುವ ಅಧಿಕಾರ ಹೊಂದಿಲ್ಲ ಆದರೆ, ನ್ಯಾ. ಬಿ.ಎ ಪಾಟೀಲ್ ಅವರ ನ್ಯಾಯಾಂಗ ತನಿಖೆಯ ವರದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖ ಸಾಕ್ಷ್ಯವಾಗಲಿದೆ. ಸಹಜ ನ್ಯಾಯತತ್ವಗಳ ಬುನಾದಿ ಮೇಲೆ ನಡೆಸುವ ನ್ಯಾಯಾಂಗ ತನಿಖೆಯ ವರದಿಗಳನ್ನು ನ್ಯಾಯಾಲಯಗಳು ಬಹುಮುಖ್ಯ ಸಾಕ್ಷ್ಯಗಳಾಗಿ ನಿಲ್ಲುತ್ತವೆ. ಹೀಗಾಗಿ ಮೃತರ ಸಂಬಂಧಿಕರು ಸರ್ಕಾರದಿಂದ ಅಥವಾ ತಪ್ಪಿತಸ್ಥರಿಂದ ಪರಿಹಾರ ಕೋರಿ ಕಾನೂನು ಹೋರಾಟ ಆರಂಭಿಸಿದ್ದಲ್ಲಿ ಈ ವರದಿ ಪ್ರಮುಖ ಸಾಕ್ಷ್ಯವಾಗಿ ನಿಲ್ಲಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.