ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ದೇಶಾದ್ಯಂತ ಜಾರಿಗೆ ತರಲು ಮುಂದಾಗಿದೆ. ಈ ಶಿಕ್ಷಣ ನೀತಿ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಜೊತೆಗೆ ಶಿಕ್ಷಕರ ಬದುಕಿಗೂ ಒತ್ತು ನೀಡಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆಯ ಕಾರ್ಯದರ್ಶಿ ಡಾ.ಆರ್.ಎನ್.ಶ್ರೀನಿವಾಸ ಗೌಡ, ಎಲ್ಲ ಕಾಲೇಜುಗಳು ಸ್ವಾಯತ್ತ ಪಡೆಯಲು ಅರ್ಹನಾ ಅಂದರೆ ಅಲ್ಲಿ ಕಾಡುವುದು ಮೂಲ ಸೌಕರ್ಯದ ಪ್ರಶ್ನೆ. ಕಾಲೇಜಿಗೆ ವಿದ್ಯಾರ್ಥಿಗಳನ್ನ ದಾಖಲಾತಿ ಮಾಡಿಕೊಳ್ಳುವ ಸಂಖ್ಯೆಗೆ ಅನುಗುಣವಾಗಿ ಮೂಲ ಸೌಕರ್ಯ ಇರಲಿದೆಯಾ ಎಂಬುದನ್ನು ಮನಗಾಣಬೇಕು.
ಎರಡನೇಯದಾಗಿ ಬೋಧಕ-ಬೋಧಕೇತರ ಸಿಬ್ಬಂದಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಯಾಕೆಂದರೆ ಬಹಳಷ್ಟು ಕಾಲೇಜಿನಲ್ಲಿ ಶೇ.50ರಷ್ಟು ಬೋಧಕರ ಕೊರತೆ ಇರೋದಿಲ್ಲ. ಇದರ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತೆ.
ಇದರ ಜೊತೆಗೆ ಶಿಕ್ಷಣದಲ್ಲಿ ಸಂಶೋಧನೆ ಮತ್ತು ನಾವೀನ್ಯತೆ ಅಳವಡಿಸಿಕೊಳ್ಳಬೇಕಾದರೆ ಇದಕ್ಕೆ ಬೇಕಾದ ಸೌಕರ್ಯ ಇದೆಯಾ? ಇದನ್ನ ಪೂರೈಸಲು ಆರ್ಥಿಕವಾಗಿ ಸದೃಢನಾ ಎಂಬುದನ್ನ ಪರಿಶೀಲಿಸಬೇಕಾಗುತ್ತೆ. ಇವೆಲ್ಲವನ್ನೂ ಸಾಧಿಸಿದರೆ 2035ರ ವೇಳೆಗೆ ಸ್ವಾಯತ್ತತೆ ಪಡೆಯಬಹುದಾಗಿದೆ ಎಂದಿದ್ದಾರೆ.