ETV Bharat / city

3 ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದ ಕುರಿತು ಸಿಎಂ, ಆರ್ ಅಶೋಕ್, ರಾಜುಗೌಡ ಹೀಗಂದರು.. - Minister R Ashok statement about Congress

ರಾಜ್ಯದ 3 ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ರಾಜ್ಯಾಧ್ಯಕ್ಷ, ಸಿಎಂ ಪರಿಶ್ರಮದಿಂದ ಗೆಲುವು ಬಂದಿದೆ. ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯಲಿದೆ. ಮೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಜತೆ ಮಾತುಕತೆ ನಡೆದಿದೆ.‌ ಹೆಚ್​ಡಿಕೆ ಜತೆಯೂ ಮಾತುಕತೆ ನಡೆಸಲಾಗಿದೆ. ಬೊಮ್ಮಾಯಿ ಸರ್ಕಾರವನ್ನ ಜನತೆ ಒಪ್ಪಿದ್ದಾರೆ ಅನ್ನೋದು ಗೊತ್ತಾಗಿದೆ..

ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯ
ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯ
author img

By

Published : Sep 6, 2021, 7:33 PM IST

ಬೆಂಗಳೂರು : ಹೆಸರೇ ಇಲ್ಲದ ಪಕ್ಷದವರು ನಮ್ಮ ಪಕ್ಷದ ಬಗ್ಗೆ ಮಾತನಾಡಲು ಲಾಯಕ್ಕಿಲ್ಲ. ಅವರ ಭಾಷೆ ಅವರ ಸ್ಥಾನವನ್ನು ನಿರ್ಧರಿಸುತ್ತದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಅವರು ನಳಿನ್ ಕುಮಾರ್ ಕಟೀಲ್​ ಅವರಿಗೆ ಮಾಡಿದ ಟೀಕೆ ಬಗ್ಗೆ, ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಆರ್.ಅಶೋಕ್, ಕಟೀಲ್ ಮೂರು ಬಾರಿ ಎಂಪಿ ಆಗಿದ್ದಾರೆ. ಇಡೀ ರಾಜ್ಯವನ್ನ ಆರು ಬಾರಿ ಸುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ರಾಜ್ಯದಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೆಸರೇ ಇಲ್ಲದ ಪಕ್ಷದವರು ನಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ಮಾತನಾಡೋದು ಸರಿಯಲ್ಲ ಎಂದರು.

ಸಂಸತ್ತಿನಲ್ಲಿ ವಿಪಕ್ಷ ಸ್ಥಾನದಲ್ಲಿ ಕೂರಲು ನಾಲಾಯಕ್ ಆದವರು ನಮ್ಮ ಪಕ್ಷದ ಬಗ್ಗೆ ಮಾತನಾಡೋದು ಸರಿಯಲ್ಲ. ಅವರ ಭಾಷೆ ಅವರ ಸ್ಥಾನವನ್ನ ತೋರಿಸುತ್ತದೆ. ಬಿಜೆಪಿಯಲ್ಲಿ ಒಂದೇ ಬ್ರ್ಯಾಂಡ್ ಅದು ಮೋದಿ ಬ್ರ್ಯಾಂಡ್, ಕಾಂಗ್ರೆಸ್​ನಲ್ಲಿ ಸಿದ್ದು ಬ್ರ್ಯಾಂಡ್, ಡಿಕೆಶಿ ಬ್ರ್ಯಾಂಡ್ ಹೀಗೆ ಬೇರೆ ಬೇರೆ ಬ್ರ್ಯಾಂಡ್ ಇದೆ ಎಂದು ವ್ಯಂಗ್ಯವಾಡಿದರು.

"ನಮ್ಮದು ಒಂದೇ ಬ್ರ್ಯಾಂಡ್, ಅದು ಮೋದಿ ಬ್ರ್ಯಾಂಡ್"

ಬಿಜೆಪಿ ಓಕೆ ಕಾಂಗ್ರೆಸ್ ಯಾಕೆ?: ಕಲಬುರಗಿ, ಹುಬ್ಬಳಿ-ಧಾರವಾಡ, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ರಾಜ್ಯಾಧ್ಯಕ್ಷ, ಸಿಎಂ ಪರಿಶ್ರಮದಿಂದ ಗೆಲುವು ಬಂದಿದೆ ಎಂದರು.

ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯಲಿದೆ. ಮೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಜತೆ ಮಾತುಕತೆ ನಡೆದಿದೆ.‌ ಹೆಚ್​ಡಿಕೆ ಜತೆಯೂ ಮಾತುಕತೆ ನಡೆಸಲಾಗಿದೆ. ಬೊಮ್ಮಾಯಿ ಸರ್ಕಾರವನ್ನ ಜನತೆ ಒಪ್ಪಿಕೊಂಡಿದ್ದಾರೆ ಅನ್ನೋದು ಗೊತ್ತಾಗಿದೆ. ಬಿಜೆಪಿ ಓಕೆ, ಕಾಂಗ್ರೆಸ್ ಯಾಕೆ ಅನ್ನುವ ವಾತಾವರಣ ನಿರ್ಮಾಣವಾಗಿದೆ ಎಂದರು.

ಕಾಂಗ್ರೆಸ್ ಸೋಲಿನ ಸಭೆ ನಡೆಸಲಿ : ಕಾಂಗ್ರೆಸ್ ಸೋಲಿನ ಸಭೆ ನಡೆಸಲಿ. ಲಿಂಗಾಯಿತ ಪ್ರತ್ಯೇಕ ಧರ್ಮದ ಬಗ್ಗೆ ಒಂದು ಮಾತು ಎತ್ತಿದ್ದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.‌ ಮತ್ತೊಮ್ಮೆ ಈ ವಿಚಾರ ಎತ್ತಿದರೆ ರಾಜ್ಯದಿಂದಲೇ ಕಾಂಗ್ರೆಸ್ ನ ಓಡಿಸೋ ಕೆಲಸ ಮತದಾರರು ಮಾಡ್ತಾರೆ ಎಂದರು.

ಬೆಂಗಳೂರು ಬಿಜೆಪಿಯ ಸಾಮ್ರಾಜ್ಯ : ಬಿಬಿಎಂಪಿ ಚುನಾವಣೆ ನಡೆಸುವ ವಿಚಾರವಾಗಿ ಮಾತನಾಡಿ, ಕೋರ್ಟ್​ನಲ್ಲಿ ಪ್ರಕರಣ ಇರುವುದರಿಂದ ಸದ್ಯಕ್ಕೆ ಚುನಾವಣೆ ಬಗ್ಗೆ ಮಾತನಾಡುವುದು ಬೇಡ. ಬೆಂಗಳೂರು ಬಿಜೆಪಿಯ ಸಾಮ್ರಾಜ್ಯ. ಬಿಬಿಎಂಪಿಯಲ್ಲಿ 150 ಸ್ಥಾನ ಗೆಲ್ಲಲಿದೆ. ಬಿಬಿಎಂಪಿ ಚುನಾವಣೆ ನಡೆಸೋಕೆ ರಾಜ್ಯ ಸರ್ಕಾರಕ್ಕೆ ಮನಸ್ಸಿದೆ ಎಂದರು.

ಮತದಾರರಿಗೆ ಧನ್ಯವಾದ ಅರ್ಪಿಸಿದ ಸಿಎಂ ಬೊಮ್ಮಾಯಿ : ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿದ ಎಲ್ಲ ಪ್ರಬುದ್ಧ ಮತದಾರರಿಗೆ ಧನ್ಯವಾದ ಅರ್ಪಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಚುನಾವಣೆಯಲ್ಲಿ ಜಯಶಾಲಿ ಆಗಿರುವ ಬಿಜೆಪಿ ಅಭ್ಯರ್ಥಿಗಳಿಗೆ ಶುಭಾಶಯ ಕೋರುತ್ತೇನೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ನಾವು ಚುನಾವಣೆ ಎದುರಿಸಿದ್ದೇವೆ. ಈ ಚುನಾವಣೆ ಗೆಲುವಿನ ಶ್ರೇಯಕ್ಕೆ ಕಾರಣೀಕರ್ತರಾಗಿರುವ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಸುತ್ತೇನೆ ಎಂದು ತಿಳಿಸಿದ್ದಾರೆ.

ಚುನಾವಣೆಯಲ್ಲಿ ಸಕ್ರಿಯವಾಗಿ ಹಗಲಿರುಳು ಶ್ರಮಿಸಿರುವ, ಚುನಾವಣೆ ಪ್ರಚಾರ ಕಾರ್ಯದಲ್ಲಿ ಉಸ್ತುವಾರಿ ಸಚಿವರು, ಜಿಲ್ಲಾಧ್ಯಕ್ಷರು, ಸ್ಥಳೀಯ ಶಾಸಕರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಎಲ್ಲ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ನಮ್ಮ ನಾಯಕರೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿ ಸಾಧನೆ ಮಾಡಿದ್ದಾರೆ : ಮೂರು ಜಿಲ್ಲೆಗಳ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಗೆದ್ದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ರಾಜುಗೌಡ, ಕ್ರಿಕೆಟ್​ನಲ್ಲಿ ಮಾಡಿಕೊಳ್ಳುವ ಎ ಮತ್ತು ಬಿ ತಂಡದಂತೆ ನಾವು ಕೆಲಸ ಮಾಡಿದ್ದೆವು. ನಮ್ಮ ನಾಯಕರೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿಯಲ್ಲಿ ನಮ್ಮ ಸತೀಶ್ ರೆಡ್ಡಿ & ಟೀಂ ಬೆಂಗಳೂರಿನಿಂದ ಹೋಗಿ ಕೆಲಸ ಮಾಡಿತ್ತು. ಕಲಬುರಗಿಯಲ್ಲೂ ಬಿಜೆಪಿಯವರೇ ಮೇಯರ್ ಆಗ್ತಾರೆ. ಅಲ್ಲಿನ ಕೆಲವೊಂದು ಏರಿಯಾಗಳಲ್ಲಿ ಕೇವಲ ಅಲ್ಪಸಂಖ್ಯಾತ ವೋಟುಗಳು ಮಾತ್ರ ಇದ್ದವು. ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಸಚಿವ ಸ್ಥಾನ ಕೊಟ್ಟಿದ್ದರೆ ಇನ್ನೂ ಹೆಚ್ಚು ಉತ್ಸಾಹ, ಹುರುಪಿನಿಂದ ಅಲ್ಲಿನ ಜನ ಮತ ಹಾಕುತ್ತಿದ್ದರು ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್​ನಲ್ಲಿ ಕಿತ್ತಾಟ : ಕಾಂಗ್ರೆಸ್ ಅನ್ನು ಜನ ತಿರಸ್ಕಾರ ಮಾಡಿದ್ದಾರೆ. ಅಧಿಕಾರ ಇಲ್ಲದೇ ಇರುವಾಗಲೇ ಕಾಂಗ್ರೆಸ್ ಇಷ್ಟು ಕಿತ್ತಾಡುತ್ತಿದ್ದಾರೆ. ಇನ್ನು, ಚುನಾವಣೆ ಯಾವಾಗ ಅನ್ನೋದೇ ಗೊತ್ತಿಲ್ಲ. ಆಗಲೇ‌ ಕಾಂಗ್ರೆಸ್​ನವರು ನಾನು ಸಿಎಂ, ನೀನು ಸಿಎಂ ಎಂದು ಕಿತ್ತಾಡುತ್ತಿದ್ದಾರೆ. ಹೀಗಾಗಿ, ಜನರು ಕಾಂಗ್ರೆಸ್ ಅನ್ನು ದೂರ ಇಟ್ಟಿದ್ದಾರೆ. ನಮ್ಮ ನಾಯಕರ ಸಾಮೂಹಿಕ ಕೆಲಸದಿಂದ ಬಿಜೆಪಿಗೆ ಜನ ಮತ ಹಾಕಿದ್ದಾರೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.