ETV Bharat / city

'ಉಡ್ತಾ ಪಂಜಾಬ್‌'ನಂತೆ 'ಉಡ್ತಾ ಬೆಂಗಳೂರು' ಆಗಲು ಬಿಡಲ್ಲ: ಭಾಸ್ಕರ್​ ರಾವ್​​ - Udtha Punjab

ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಂದ ಡ್ರಗ್ಸ್ ಬಳಕೆ ಹಾಗೂ ಮಾರಾಟ ಚಟುವಟಿಕೆ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ಉನ್ನತ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ.‌‌ ಮುಂದಿನ ದಿನಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿಸಿದರೆ ಹಾಸ್ಟೆಲ್​ ಹಾಗೂ ಕಾಲೇಜುಗಳಿಗೆ ಹೋಗಿ ರೈಡ್ ಮಾಡುತ್ತೇವೆ. ಉಡ್ತಾ ಪಂಜಾಬ್‌ನಂತೆ ಉಡ್ತಾ ಬೆಂಗಳೂರು ಆಗಲು ಬಿಡುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

ಭಾಸ್ಕರ್ ರಾವ್ ಸುದ್ದಿಗೋಷ್ಟಿ
author img

By

Published : Sep 28, 2019, 4:46 PM IST

ಬೆಂಗಳೂರು: ಒಡಿಶಾದಿಂದ ರೈಲು ಮೂಲಕ ಪ್ರಯಾಣಿಕರ ಸೋಗಿನಲ್ಲಿ ಬಂದು ಬ್ಯಾಗ್ ಹಾಗೂ ಸೂಟ್​ಕೇಸ್​ಗಳಲ್ಲಿ ನಗರದ ವಿವಿಧ ಭಾಗಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 28 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ. ಒಡಿಶಾದ ಸಿಮಿಲಿಗುಡದಿಂದ ಬೆಂಗಳೂರಿಗೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿ ಸಂಜಯ್ ಕುಮಾರ್ ಮೊದಲೇ ಬಂಧಿತನಾಗಿದ್ದ. ಈತ ನೀಡಿದ ಮಾಹಿತಿ ಮೇರೆಗೆ ಚಂದ್ರ ಪ್ರಸಾದ್ ಶರ್ಮಾ, ಆಸಿಶ್ ರಭಿದಾಸ್, ದಿಬಾಕರ್ ಬಿಸಾಯ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬಂಧಿತರೆಲ್ಲರೂ ಒಡಿಶಾ ಮೂಲದವರಾಗಿದ್ದು, ಕೆಲಸಕ್ಕಾಗಿ ನಗರಕ್ಕೆ ಬರುವ ಇವರು ಕಾಲಕ್ರಮೇಣ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದನ್ನು ಶುರು‌ ಮಾಡಿದ್ದಾರೆ.‌ ಇದು ಸರಿಯಲ್ಲ.‌ ಆರೋಪಿಗಳು ಸಣ್ಣ ಸಣ್ಣ ಪೊಟ್ಟಣ‌ಗಳ ಮೂಲಕ ಕಾಲೇಜು ವಿದ್ಯಾರ್ಥಿಗಳಿರುವ ಶೈಕ್ಷಣಿಕ ಸಂಸ್ಥೆಗಳ ಮುಂದೆ ಮಾರಾಟ ಮಾಡುತ್ತಿದ್ದರು. ನಗರದಲ್ಲಿ ಕೊಕೇನ್ ಸೇರಿದಂತೆ ವಿವಿಧ ಸ್ವರೂಪದ ಮಾದಕ ವಸ್ತುಗಳನ್ನು ಅಕ್ರಮ ಬಳಕೆ ಮಾಡುತ್ತಿರುವವರ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದೇವೆ ಎಂದಿದ್ದಾರೆ.

ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿ

ನೈಜೀರಿಯಾ ಪ್ರಜೆಗಳಿಂದ ಡ್ರಗ್ಸ್ ಬಳಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಪಾಶ್ಚಾತ್ಯ ದೇಶಗಳಿಂದ ನಗರಕ್ಕೆ ಬಂದು ಅಪರಾಧ ಎಸಗುವುದು ಸಹಿಸಲು ಸಾಧ್ಯವಿಲ್ಲ. ಇವರ ವಿರುದ್ಧ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಂದ ಡ್ರಗ್ಸ್ ಬಳಕೆ ಹಾಗೂ ಮಾರಾಟ ಚಟುವಟಿಕೆ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ಉನ್ನತ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ.‌‌ ಮುಂದಿನ ದಿನಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿಸಿದರೆ ಹಾಸ್ಟೆಲ್​ ಹಾಗೂ ಕಾಲೇಜುಗಳಿಗೆ ಹೋಗಿ ರೇಡ್ ಮಾಡುತ್ತೇವೆ. ಉಡ್ತಾ ಪಂಜಾಬ್‌ನಂತೆ ಉಡ್ತಾ ಬೆಂಗಳೂರು ಆಗಲು ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:press meet

Body:byte

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.