ETV Bharat / city

ಹತೋಟಿಗೆ ಬಾರದ ಬರ ನಿರ್ವಹಣೆ ಕಾಮಗಾರಿ.. ಕುಡಿಯುವ ನೀರಿಗೆ ಪರದಾಟ - undefined

ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಬಹುತೇಕ ಪ್ರದೇಶಗಳು ಕಡಿಮೆ ಮಳೆ ಕಂಡಿದ್ದರಿಂದ ಬರಕ್ಕೆ ತುತ್ತಾಗಿವೆ. ಜೊತೆಗೆ ಅಂತರ್ಜಲದ ಮಟ್ಟ ಪಾತಾಳ ಕಂಡಿದ್ದು, ಕುಡಿಯುವ ನೀರಿಗೆ ಜನ- ಜಾನುವಾರುಗಳು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ.

ಬೆಂಗಳೂರು ಗ್ರಾಮಾಂತರ
author img

By

Published : May 10, 2019, 3:08 AM IST

ಬೆಂಗಳೂರು: ಬರದಿಂದ ಇಡೀ ರಾಜ್ಯವೇ ತತ್ತರಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಬರ ನಿರ್ವಹಣೆ ಜೊತೆಗೆ ಕುಡಿಯುವ ನೀರು ಪೂರೈಕೆಗೆ ಸರ್ಕಾರ ಮುಂದಾಗಿದ್ದರೂ ಬರು ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ ಎಂಬ ಆಪಾದನೆ ಕೇಳಿಬರುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಬಹುತೇಕ ಪ್ರದೇಶಗಳು ಕಡಿಮೆ ಮಳೆ ಕಂಡಿದ್ದರಿಂದ ಬರಕ್ಕೆ ತುತ್ತಾಗಿವೆ. ಜೊತೆಗೆ ಅಂತರ್ಜಲದ ಮಟ್ಟ ಪಾತಾಳ ಕಂಡಿದ್ದು, ಕುಡಿಯುವ ನೀರಿಗೆ ಜನ- ಜಾನುವಾರುಗಳು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ.

ಬೆಂಗಳೂರು ಗ್ರಾಮಾಂತರ

ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಅನುದಾನವನ್ನು ಈಗಾಗಲೇ ಒದಗಿಸಿದೆ. ಜಿಲ್ಲೆಯ 72 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದಂತೆ 36 ಕಡೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪಡೆದು ಪೈಪ್​ಲೈನ್ ಮೂಲಕ ಸರಬರಾಜು ಮಾಡಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರಿಗೌಡರು ಹೇಳಿದರು.

ಜಿಲ್ಲೆಯ ದೇವನಹಳ್ಳಿ, ವಿಜಯಪುರ, ನೆಲಮಂಗಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಂಡುಬಂದಿಲ್ಲ. ನಗರಸಭೆ ವ್ಯಾಪ್ತಿಗಳಲ್ಲಿ ಹೆಚ್ಚಿನ ಸಮಸ್ಯೆ ಇದ್ದು, ಮುಂಗಾರು ಪೂರ್ವ ಮಳೆ ಬೀಳದಿದ್ದರೇ ನೀರಿನ ಅಭಾವ ಇನ್ನಷ್ಟು ತಲೆದೋರಲಿದೆ.

ಸದ್ಯಕ್ಕೆ ಕೆಲವೊಂದು ಕಡೆ ಸರ್ಕಾರಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಸಮಸ್ಯೆ ಹೆಚ್ಚಾಗದಂತೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮ‌ ತೆಗೆದುಕೊಂಡಿದ್ದೇವೆ. ಎಲ್ಲ ತಾಲೂಕು ಕೇಂದ್ರಗಳಲ್ಲಿ ನಿಯಂತ್ರಣ ಕೇಂದ್ರಗಳನ್ನು ತೆರೆಯಲಾಗಿದ್ದು, ನೀರಿನ ಸಮಸ್ಯೆಗಳ ದೂರು ಬಂದ ಗಂಟೆಯೊಳಗೆ ಬಗೆಹರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Intro:KN_BNG_01_090519_Water_Draught_script_Ambarish_7203301
Slug: ಬರ ‌ನಿರ್ವಹಣೆಗೆ ಮುಂದಾದ ಜಿಲ್ಲಾಡಳಿತ

ಬೆಂಗಳೂರು: ಉರಿ ಬಿಸಿಲು ಹಾಗೂ ಬರದಿಂದ ರಾಜ್ಯ ತತ್ತರಿಸಿದ್ದು, ಬರ ನಿರ್ವಹಣೆಯೊಂದಿಗೆ ಕುಡಿಯುವ ನೀರು ಪೂರೈಕೆಗೆ ಸರಕಾರ ಮುಂದಾಗುತ್ತಿದ್ದರು ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ. ಅಂತೆಯೇ ಬಯಲುಸೀಮೆ ಜಿಲ್ಲೆಗಳಲ್ಲಿ ಒಂದಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಬರ ನರ್ತನವಾಡ್ತಿದೆ. ಒಂದೆಡೆ ಬರಗಾಲದಿಂದ ರೈತ ಕಂಗಾಲಾಗಿದ್ರೆ ಮತ್ತೊಂದೆಡೆ ಕುಡಿಯುವ ನೀರಿಗೆ ಜನ ಜಾನುವಾರುಗಳು ಕಂಗೆಟ್ಟಿದ್ದಾರೆ. ಜಿಲ್ಲೆಗೆ ವಿವಿಧ ಯೋಜನೆಗಳಲ್ಲಿ ಕೋಟ್ಯಾಂತರ ರೂಪಾಯಿ ಅನುದಾನವನ್ನು ಬರ ನಿರ್ವಹಣೆಗೆ ಸರಕಾರ ಜಿಲ್ಲಾಧಿಕಾರಿಗೆ ಒದಗಿಸಿದೆ. ಜಿಲ್ಲೆಯ ೭೨ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.. ಉಳಿದಂತೆ ೩೬ ಕಡೆ ಪ್ರೈವೇಟ್ ಬೋರ್ ವೆಲ್ ಗಳಿಂದ ನೀರು ತೆರದುಕೊಂಡು ಪೈಪ್ ಲೈನ್ ಗೆ ಕನೆಕ್ಟ್ ಮಾಡಿದ್ದು ಅದರಿಂದ ಜನರಿಗೆ ಕುಡಿಯಲು ನೀರು ಪೂರೈಕೆ ಮಾಡಲಾಗ್ತಿದೆ. ಉಳಿದ ಕಡೆ ಟ್ಯಾಂಕರ್ ನಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಜಿಲ್ಲೆಯ ದೇವನಹಳ್ಳಿ, ವಿಜಯಪುರ, ನೆಲಮಂಗಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆ ಇದೆ.. ಉಳಿದಂತೆ ನಗರಸಭೆ ವ್ಯಾಪ್ತಿಗಳಲ್ಲಿ ಹೆಚ್ಚಿನ ಸಮಸ್ಯೆಯಿದ್ದು, ಮಳೆ ಬೀಳಲಿಲ್ಲವಾದ್ರೆ ಜಿಲ್ಲೆಯಾದ್ಯಂತ ನೀರಿನ ಬರ ಶುರುವಾಗಲಿದೆ.

ಸದ್ಯಕ್ಕೆ ಕೆಲವೊಂದು ಕಡೆ ಸರ್ಕಾರಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲಾಗ್ತಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಕಡಿಮೆ ಇದೆ.. ಹೆಚ್ಚು ಸಮಸ್ಯೆ ಉಂಟಾಗದಂತೆ‌ ಮುನ್ನೆಚ್ಚರಿಕೆ ಕ್ರಮ‌ಕೈಗೊಳ್ಳುತ್ತೇವೆ.. ಅಲ್ಲದೇ ಎಲ್ಲಾ ತಾಲೂಕಿನಲ್ಲಿ ಕಂಟ್ರೋಲ್ ರೂ ಓಪನ್ ಮಾಡಿದ್ದು, ಎಲ್ಲಿ ನೀರಿನ ಸಮಸ್ಯೆ ಇದೆ ಅಂತ ದೂರು ಬರುತ್ತೋ‌ ಅಲ್ಲಿ ನೀರಿನ ಸಮಸ್ಯೆ ಬಗೆಹರಿಸುತ್ತೇವೆ.. ಒಂದು ಗಂಟೆಯೊಳಗೆ ಸಮಸ್ಯೆ ಬಗೆಹರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕರಿಗೌಡರು ಮಾಹಿತಿ ನೀಡಿದ್ರು.. ಬರ ಪರಿಹಾರಕ್ಕಾಗಿ ಸರಕಾರದಿಂದ ಕೋಟ್ಯಾಂತರ ರೂಪಾಯಿ ಹಣ ನೀಡಿದ್ದು, ಬರ ನಿರ್ವಹಣೆಗೆ ಜಿಲ್ಲಾಡಳಿತ ಮುಂದಾಗಿದೆ.Body:NoConclusion:No

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.