ಬೆಂಗಳೂರು: ಕೊರೊನಾ ನಡುವೆ ಸರಳವಾಗಿ ಗಣೇಶ ಹಬ್ಬ ಆಚರಿಸಲು ಸರ್ಕಾರ ಸೂಚನೆ ನೀಡಿದೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್ಗೆ ಒಂದರಂತೆ ಮಾತ್ರ ಗಣಪತಿ ಕೂರಿಸುವಂತೆ ಸರ್ಕಾರ ನಿಯಮಗಳನ್ನ ಹೇರಿದೆ. ಆದರೆ ಇದಕ್ಕೆ ಕೆಲವೊಬ್ಬರು ಮಾರ್ಗಸೂಚಿ ಬದಲಾವಣೆಗೆ ಮನವಿ ಮಾಡ್ತಿದ್ದಾರೆ.
ಇತ್ತ ಡಿ.ಜೆ. ಹಳ್ಳಿ ಗಲಭೆ ಪ್ರಕರಣಕ್ಕೆ ಉಗ್ರರ ನಂಟಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ನಗರದಲ್ಲಿ ಮತ್ತೆ ಯಾವುದೇ ಗಲಭೆ ನಡೆಯಬಾರದು ಅನ್ನೋ ಕಾರಣಕ್ಕೆ ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ. ಹೀಗಾಗಿ ಇಂದು ಕಮಿಷನರ್ ಕಚೇರಿಯಲ್ಲಿ ನಗರದ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಕರೆದಿದ್ದು, ಹೆಚ್ಚುವರಿ ಆಯುಕ್ತರು, ಡಿಸಿಪಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ.
ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂದು ಕಮಿಷನರ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಸದ್ಯ ಖಾಕಿ ಕೂಡ ಕಟ್ಟೆಚ್ಚರ ವಹಿಸಿದ್ದು, ವಾರ್ಡ್ ನಲ್ಲಿ ಗಣಪತಿ ಇಡುವ ಮೊದಲು ಸ್ಥಳೀಯ ಠಾಣೆಗೆ ಬಂದು ಅನುಮತಿ ತೆಗೆದುಕೊಳ್ಳಬೇಕು. ಠಾಣೆಯಲ್ಲಿ ಅನುಮತಿ ತೆಗೆದುಕೊಂಡವರು ಮಾತ್ರ ಗಣಪತಿ ಕೂರಿಸಬೇಕಾಗುತ್ತದೆ.
ಹಾಗೆ ಜನರು ಗುಂಪು ಗುಂಪಾಗಿ ಹಬ್ಬವನ್ನು ಆಚರಣೆ ಮಾಡಬೇಕು. ಹೀಗಾಗಿ ನಗರ ಆಯುಕ್ತರ ಸೂಚನೆ ಮೇರೆಗೆ ಆಯಾ ವಿಭಾಗದ ಡಿಸಿಪಿ ಅವರ ನೇತೃತ್ವದಲ್ಲಿ ಭದ್ರತೆಯನ್ನ ವಹಿಸಲಿದ್ದಾರೆ. ಮತ್ತೊಂದೆಡೆ ಡಿ.ಜಿ. ಹಳ್ಳಿ, ಕೆ.ಜಿ ಹಳ್ಳಿ ಕೂಡ ಖಾಕಿ ಕಣ್ಗಾವಲಿನಲ್ಲಿರಲಿದೆ.