ETV Bharat / city

ವೃಷಭಾವತಿ ನದಿ ಪುನಶ್ಚೇತನ: ನೀರಿ ಶಿಫಾರಸು ಜಾರಿಗೊಳಿಸುವುದಾಗಿ ಜಲಮಂಡಳಿ ಸ್ಪಷ್ಟನೆ - ಕರ್ನಾಟಕ ಜಲ ಮಂಡಳಿ

ನೀರಿಯ ಮಧ್ಯಂತರ ವರದಿ ಶಿಫಾರಸ್ಸು ಪ್ರಕಾರ ವೃಷಭಾವತಿ ನದಿ ಪುನಶ್ಚೇತನಕ್ಕೆ 22 ಅಲ್ಪಾವಧಿ ಮತ್ತು 10 ದೀರ್ಘಾವಧಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದರಲ್ಲಿ ಜಲಮಂಡಳಿಯ ವ್ಯಾಪ್ತಿಗೆ 3 ಅಲ್ಪಾವಧಿ ಮತ್ತು 1 ದೀರ್ಘಾವಧಿ ಕ್ರಮಗಳು ಬರಲಿವೆ.

ವೃಷಭಾವತಿ ನದಿ
ವೃಷಭಾವತಿ ನದಿ
author img

By

Published : Aug 27, 2021, 5:13 AM IST

ಬೆಂಗಳೂರು: ವೃಷಭಾವತಿ ನದಿ ಪುನಶ್ಚೇತನಕ್ಕೆ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನೀರಿ) ನೀಡಿರುವ ಶಿಫಾರಸ್ಸುಗಳ ಅನ್ವಯ ಅಲ್ಪಾವಧಿ ಮತ್ತು ದಿರ್ಘಾವಧಿ ಕ್ರಮಗಳನ್ನು ಕೈಗೊಂಡಿರುವುದಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ವೃಷಭಾವತಿ ನದಿ ಸಂರಕ್ಷಣೆ ಮಾಡಲು ಕೋರಿ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿರುವ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಜಲಮಂಡಳಿ ಪರ ವಕೀಲರು ಹಾಜರಾಗಿ, ವೃಷಭಾವತಿ ನದಿ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಂಡಳಿಯ ಮುಖ್ಯ ಎಂಜಿನಿಯರ್ ಬಿ.ಸಿ.ಗಂಗಾಧರ ಅವರ ಪ್ರಮಾಣ ಪತ್ರವನ್ನು ಪೀಠಕ್ಕೆ ಸಲ್ಲಿಸಿದರು. ಪ್ರಮಾಣ ಪತ್ರ ದಾಖಲಿಸಿಕೊಂಡ ಪೀಠ ವಿಚಾರಣೆ ಮುಂದೂಡಿತು.

ಪ್ರಮಾಣ ಪತ್ರದ ವಿವರ:
ನೀರಿಯ ಮಧ್ಯಂತರ ವರದಿ ಶಿಫಾರಸ್ಸು ಪ್ರಕಾರ ವೃಷಭಾವತಿ ನದಿ ಪುನಶ್ಚೇತನಕ್ಕೆ 22 ಅಲ್ಪಾವಧಿ ಮತ್ತು 10 ದೀರ್ಘಾವಧಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದರಲ್ಲಿ ಜಲಮಂಡಳಿಯ ವ್ಯಾಪ್ತಿಗೆ 3 ಅಲ್ಪಾವಧಿ ಮತ್ತು 1 ದೀರ್ಘಾವಧಿ ಕ್ರಮಗಳು ಬರಲಿವೆ. ಅದರಂತೆ ವೃಷಭಾವತಿಗೆ ವಿವಿಧ ಮೂಲಗಳಿಂದ ಬರುತ್ತಿರುವ ಮಾಲಿನ್ಯ ತಡೆಗಟ್ಟಲು, ನದಿ ಅಂಚಿನಲ್ಲಿರುವ ಎಸ್‌ಟಿಪಿ ಮತ್ತು ಸಿಇಟಿಪಿಗಳ ಕಾರ್ಯಾಚರಣೆ ಪರಿಶೀಲಿಸಲು, ನದಿಗೆ ಹರಿಯುವ ಒಳಚರಂಡಿ ನೀರಿನ ಪ್ರಮಾಣ ಮಾಪನ ಮಾಡುವ ಹಾಗೂ ನಿಯಂತ್ರಿಸುವ ಕ್ರಮಗಳನ್ನು ಜಲಮಂಡಳಿ ಕೈಗೆತ್ತಿಕೊಂಡಿದೆ. ಈ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಅಲ್ಲದೆ, 300 ಕಿಮೀ ಇರುವ ವೃಷಭಾವತಿ ನದಿ ಕಾಲುವೆಯನ್ನು ಈಗಾಗಲೇ 76 ಕಿಮೀ ಸರ್ವೇ ನಡೆಸಿ 1,780 ಕಲ್ಮಶ ನೀರಿನ ಮೂಲಗಳನ್ನು ಗುರುತಿಸಲಾಗಿದೆ. ಈ ಮೂಲಗಳಿಂದ ಹರಿಯುತ್ತಿರುವ ತ್ಯಾಜ್ಯ ನೀರನ್ನು ಒಳಚರಂಡಿ ವ್ಯವಸ್ಥೆಗೆ ಕಂಪರ್ಕ ಕಲ್ಪಿಸಲಾಗುವುದು. 450 ಕೋಟಿ ರೂ. ಮೊತ್ತದಲ್ಲಿ ಐದು ಪುನರ್ವಸತಿ ಕಾಮಗಾರಿ ಯೋಜಿಸಲಾಗಿದೆ. ಈಗಾಗಲೇ 3 ಕಾಮಗಾರಿ ಪೂರ್ಣಗೊಂಡಿದ್ದು, ಉಳಿದವನ್ನು 2021 ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು. ಎಲ್ಲ ಕೆಲಸಗಳನ್ನು 2022ರ ಮಾರ್ಚ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ವೃಷಭಾವತಿ ನದಿಗೆ ನಗರದ ಎಂಟೂ ವಲಯದಿಂದ ಹರಿಯುವ ಮಾಲಿನ್ಯ ನೀರನ್ನು ಶುದ್ಧೀಕರಣಗೊಳಿಸಲು 7 ಎಸ್‌ಟಿಪಿಗಳನ್ನು ಜಲಮಂಡಳಿ ನಿರ್ವಹಣೆ ಮಾಡುತ್ತಿದೆ. ಹಾಲಿ ತ್ಯಾಜ್ಯ ನೀರು ಶುದ್ಧೀಕರಣದ ಸಾಮರ್ಥ್ಯದ ಜತೆಗೆ ನಾಯಂಡಹಳ್ಳಿಯ ಎಸ್‌ಪಿಟಿ ಘಟಕದಲ್ಲಿ ನಿತ್ಯ 150 ದಶ ಲಕ್ಷ ಲೀಟರ್ ಹೆಚ್ಚುವರಿ ನೀರು ಶುದ್ಧೀಕರಣ ಮಾಡಲು 470 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಿದೆ. ಕಾಮಗಾರಿ 2022ರ ಮಾರ್ಚ್‌ಗೆ ಪೂರ್ಣಗೊಳ್ಳಲಿದೆ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.

ಇದೇ ವೇಳೆ ಸರ್ಕಾರದ ಪರ ವಕೀಲರು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರ ಮೆಮೋ ಸಲ್ಲಿಸಿ, ಹೈಕೋರ್ಟ್ ನಿರ್ದೇಶನದ ಮೇರೆಗೆ ವೃಷಭಾವತಿ ನದಿ ಪುನಶ್ಚೇತನಕ್ಕೆ ನೀರಿ ಸಂಸ್ಥೆ ಶಿಫಾರಸ್ಸು ಮಾಡಿರುವ ಅಲ್ಪಾವಧಿ ಹಾಗೂ ದೀರ್ಘಾವಧಿ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಆ.13ರಂದು ಸಭೆ ನಡೆಸಿ ಚರ್ಚಿಸಲಾಗಿದೆ. ಬಿಬಿಎಂಪಿ, ಬಿಡಿಎ, ಮಾಲಿನ್ಯ ನಿಯಂತ್ರಣ ಮಂಡಳಿ, ಜಲಮಂಡಳಿ, ಸಣ್ಣ ನೀರಾವರಿ ಇಲಾಖೆ ಸೇರಿ ಸಂಬಂಧಪಟ್ಟ 21 ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವೃಷಭಾವತಿ ನದಿ ಕಾಲುವೆ ಜಾಗದ ಸರ್ವೇ ನಡೆಸಿ, ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ. ಸರ್ವೇ ಪೂರ್ಣಗೊಂಡ ನಂತರ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳು ತಮ್ಮ ವ್ಯಾಪ್ತಿಗೆ ಬರುವ ನದಿ ಪಾತ್ರದಲ್ಲಿರುವ ನಿರ್ಮಿಸಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.