ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯ ಮತಕೇಂದ್ರ ಕೋವಿಡ್ ಆಸ್ಪತ್ರೆ ಪಕ್ಕದಲ್ಲೇ ಸ್ಥಾಪನೆಯಾಗಿದ್ದು, ಜನರು ಕೋವಿಡ್ ಆತಂಕದಲ್ಲೇ ಮತದಾನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಲಗ್ಗೆರೆ ವಾರ್ಡ್ನ ಬೆಥಲ್ ಮೆಡಿಕಲ್ ಮಿಷನ್ ಆಸ್ಪತ್ರೆಯಲ್ಲಿ ಸುಮಾರು 17 ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದು, ಪಕ್ಕದ ಬೆಥಲ್ ಮೆಡಿಕಲ್ ಮಿಷನ್ ಆಸ್ಪತ್ರೆಯ ಕಾಲೇಜಿನಲ್ಲಿ ಮತಕೇಂದ್ರ ಸ್ಥಾಪನೆಯಾಗಿದೆ.
ಬೆಥಲ್ ಮೆಡಿಕಲ್ ಮಿಷನ್ ಕಾಲೇಜು ಕೋವಿಡ್ ಆಸ್ಪತ್ರೆಯ ಪಕ್ಕದಲ್ಲಿದ್ದರೂ ಮತಕೇಂದ್ರ ಸ್ಥಾಪಿಸಲಾಗಿದೆ. ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಜನರಲ್ಲಿ ಕೋವಿಡ್ ಆತಂಕವಿದೆ.