ETV Bharat / city

ಕೊರೊನಾ ವಾರಿಯರ್‌ಗೆ ಸಿಗದ ಚಿಕಿತ್ಸೆ! ರಾತ್ರಿಯಿಡೀ ಅಲೆದು ಪ್ರಾಣಬಿಟ್ಟ ಹೆಡ್ ಕಾನ್ಸ್‌ಟೇಬಲ್ - ವಿಜಯನಗರ ಪೊಲೀಸ್ ಹೆಡ್​ ಕಾನ್ಸಟೆಬಲ್ ಸಾವು

ಸಾಮಾನ್ಯ ಅನಾರೋಗ್ಯದಿಂದ ಬಳಲುತ್ತಿರುವ ಜನರಿಗೆ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಸಾಮಾನ್ಯ ಯಕೃತ್ತು ಹಾಗೂ ಎದೆನೋವು ಸಮಸ್ಯೆಯಿಂದ ಬಳಲುತ್ತಿದ್ದ ಹೆಡ್‌ಕಾನ್ಸ್‌ಟೇಬಲ್ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

vijayanagar-head-constable-death-from-illness
ಕೊರೊನಾ ವಾರಿಯರ್‌ಗೆ ಸಿಗದ ಚಿಕಿತ್ಸೆ
author img

By

Published : Jul 3, 2020, 3:20 PM IST

Updated : Jul 3, 2020, 4:20 PM IST

ಬೆಂಗಳೂರು: ಯಕೃತ್ತು ಹಾಗೂ ಎದೆ ನೋವು ಸಮಸ್ಯೆಯಿಂದ ಬಳಲುತ್ತಿದ್ದ ವಿಜಯನಗರ ಪೊಲೀಸ್​ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ವಿಜಯನಗರ ಪೊಲೀಸ್​ ಠಾಣಾ ಸಿಬ್ಬಂದಿ ರವಿಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ ಪೊಲೀಸ್​ ಎಂದ ತಕ್ಷಣ ಕೋವಿಡ್​ ಇರಬಹುದು ಎಂಬ ಶಂಕೆಯಿಂದ ಹೆದರಿ ಸಿಬ್ಬಂದಿ ಬೆಡ್​ ಇಲ್ಲವೆಂದು ಹೇಳಿ ಕಳುಹಿಸಿದ್ದಾರೆ.

ರಾತ್ರಿಪೂರ್ತಿ ಬೆಂಗಳೂರು ಸುತ್ತಿದ ಪೊಲೀಸ್ ಸಿಬ್ಬಂದಿಗೆ ತುರ್ತು ಔಷಧ ಸಿಗದೆ ‌ಮನೆಗೆ ಬಂದಿದ್ದಾರೆ. ಬಳಿಕ ಮುಂಜಾವು ಆಸ್ಪತ್ರೆಗೆ ದಾಖಲಾಗಲು ಅವರು ನಿರ್ಧರಿಸಿದ್ದರು. ಆದರೆ ಹೆಡ್ ಕಾನ್ಸ್‌ಟೇಬಲ್​ಗೆ ಆರೋಗ್ಯ ಸಮಸ್ಯೆ ಉಲ್ಬಣಿಸಿದೆ. ಪರಿಣಾಮ ಅವರು‌ ಮನೆಯಲ್ಲಿಯೇ ಅಸುನೀಗಿದ್ದಾರೆ.

Last Updated : Jul 3, 2020, 4:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.