ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಮಗ್ರ ಕನ್ನಡಿಗರ ಏಳಿಗೆ, ಕನ್ನಡಿಗರ ಅಭಿವೃದ್ಧಿ , ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಕನ್ನಡಿಗರ ಉದ್ಯೋಗಕ್ಕಾಗಿ ಒತ್ತಾಯಿಸಿ ಮಂಗಳ ವಾದ್ಯ ನುಡಿಸುವ ಮೂಲಕ ವಿನೂತನ ವಿಶೇಷ ಪ್ರತಿಭಟನಾ ಕಾರ್ಯಕ್ರಮವನ್ನ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಡೆಸಿದರು.
ಸರೋಜಿನಿ ಮಹಿಷಿ ವರದಿ ಜಾರಿ ಆಗಬೇಕು, ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತನಾಡಬೇಕು, ಪರಭಾಷೆ ದಬ್ಬಾಳಿಕೆ ತಪ್ಪಿಸಬೇಕು, ಬ್ಯಾಂಕ್ ಗಳಲ್ಲಿ ಕನ್ನಡ ಬಳಕೆ ಆಗಲೇಬೇಕು ಹೀಗೆ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ವಾಗ್ದಾಳಿ ಮಾಡಿದ ವಾಟಾಳ್ ನಾಗರಾಜ್ ಗುಡುಗಿದರು.
ಸಮಗ್ರ ಕನ್ನಡಿಗರ ಏಳಿಗೆಗಾಗಿ, ಕನ್ನಡಿಗರ ಅಭಿವೃದ್ಧಿಗಾಗಿ, ಕನ್ನಡ ಭಾಷೆಯ ಬೆಳವಣಿಗೆಗಾಗಿ ಹಾಗೂ ಕನ್ನಡಿಗರ ಉದ್ಯೋಗಕ್ಕಾಗಿ ಒತ್ತಾಯಿಸಿದರು. ಕನ್ನಡಿಗರಿಗೆ ಉದ್ಯೋಗವಿಲ್ಲ, ಹಿಂದಿ ಭಾಷೆ ಬೇಡವೇ ಬೇಡ. ಪರಭಾಷೆಯವರ ದಬ್ಬಾಳಿಕೆ ತಪ್ಪಬೇಕು, ಉಚ್ಛ ನ್ಯಾಯಾಲಯದಲ್ಲಿ ಕನ್ನಡ ಬಳಕೆಯಾಗಬೇಕು, ಗಡಿನಾಡಿನಲ್ಲಿ ಸಮಗ್ರ ಕನ್ನಡ ಉಳಿಯಬೇಕು, ಹೊರನಾಡ ಕನ್ನಡಿಗರಿಗೆ ವಿಶೇಷ ಅನುದಾನ ನೀಡಬೇಕು, ಕಾಸರಗೋಡು, ಸೊಲ್ಲಾಪುರ, ಹೊಸೂರು, ತಾಳವಾಡಿ, ಅಕ್ಕಲಕೋಟೆ ಸೇರಿದಂತೆ (ಹೊರನಾಡು) ಬ್ಯಾಂಕ್‌ಗಳಲ್ಲಿ ಚೆಕ್‌ಗಳು ಕನ್ನಡದಲ್ಲಿ ಇರಬೇಕೆಂದು ಕೇಂದ್ರ ಹಾಗು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಕನ್ನಡ ಗೀತಗಾಯನ ಹಮ್ಮಿಕೊಳ್ಳಲಾಗಿತ್ತು. ಇದರ ಬೆನ್ನಲ್ಲೇ ವಾಟಾಳ್ ನಾಗರಾಜ್ ಈ ರೀತಿಯ ವಿನೂತನ ಕಾರ್ಯಕ್ರಮ ನಡೆಸಿದರು.