ETV Bharat / city

ಕಲಬುರಗಿಯಲ್ಲಿ ಕೊರೊನಾದಿಂದಾದ ಸಾವು ಬೇಜವಾಬ್ದಾರಿಯಿಂದ ಆಗಿದೆ : ವಾಟಾಳ್​ ನಾಗರಾಜ - ಕೊರೊನಾ ಕುರಿತು ವಾಟಾಳ್ ನಾಗರಾಜ ಹೇಳಿಕೆ

ಕೊರೊನಾ ವೈರಸ್​ನಿಂದ ಕಲಬುರಗಿಯಲ್ಲಿ ಸಂಭವಿಸಿದ ಘಟನೆ ಬೇಜವಾಬ್ದಾರಿ ಇಂದ ಆಗಿದೆ. ಮೊದಲೇ ಎಚ್ಚರಿಕೆ ವಹಿಸಿದ್ರೆ ಆ ವ್ಯಕ್ತಿ ಸಾವನ್ನಪ್ಪುತಿರಲಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

vatal-nagaraj-statement-on-corona-death-in-kalaburagi
ವಾಟಾಳ್​ ನಾಗರಾಜ
author img

By

Published : Mar 15, 2020, 3:29 AM IST

ಬೆಂಗಳೂರು : ಕಲಬುರಗಿಯಲ್ಲಿ ಸಂಭವಿಸಿದ ಘಟನೆ ಬೇಜವಾಬ್ದಾರಿಯಿಂದ ಆಗಿದೆ. ಮೊದಲೇ ಎಚ್ಚರಿಕೆ ವಹಿಸಿದ್ರೆ ಆ ವ್ಯಕ್ತಿ ಸಾವನ್ನಪ್ಪುತಿರಲಿಲ್ಲ. ಈ ವಿಚಾರವಾಗಿ ಸರ್ಕಾರ ಬಹಳ ಎಚ್ಚರವಹಿಸಬೇಕಾಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸುಚಿತ್ವ ನಮ್ಮ ಆದ್ಯ ಕರ್ತವ್ಯ, ಎಲ್ಲಿ ಶುಚಿತ್ವ ಇರುತ್ತೋ ಅಲ್ಲಿ ಯಾವುದೇ ಕಾಯಿಲೆ ಬರುವುದಿಲ್ಲ. ಅದ್ರೆ ಕರ್ನಾಟಕದಲ್ಲಿ ಕೊರೊನಾಗೆ ಹೆದರಿ ಇಡೀ ವಾರ ಬಂದ್ ಮಾಡಿರುವುದರಿಂದ ದಿನಗೂಲಿ ನೌಕರರಿಗೆ ತೊಂದರೆ ಆಗುತ್ತಿದೆ. ಇದನ್ನು ಸರ್ಕಾರ ಅರಿತುಕೊಳ್ಳಬೇಕು. ಅಲ್ಲದೇ ಸರ್ಕಾರ ಅಖಂಡ ಕರ್ನಾಟಕದ ಗಡಿ ಭಾಗಗಳನ್ನು ಬಂದ್ ಮಾಡಿ ಎಚ್ಚರಿಕೆ ವಹಿಸಬೇಕು ಎಂದರು.

ಕೊರೊನಾ ಸಾವು ಕುರಿತು ವಾಟಾಳ್​ ನಾಗರಾಜ್ ಪ್ರತಿಕ್ರಿಯೆ

ಕೊರೊನ ವೈರಸ್ ತೀವ್ರವಾಗಿ ಹರಡುತ್ತಿರುವ ಗಂಭೀರ ರೋಗ, ಆದರೆ ಜನರು ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ. ನಮ್ಮ ಸುತ್ತಮುತ್ತಲಿನ ಪರಿಸರ ಶುಚಿತ್ವ ಕಾಪಾಡಿಕೊಳ್ಳಬೇಕು ಅಷ್ಟೆ ಎಂದು ಸಾರ್ವಜನಿಕರಿಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಲಹೆ ನೀಡಿದ್ದಾರೆ.

ಈ ಕಾಯಿಲೆಗೆ ಚಿಕಿತ್ಸೆ ನೀಡುವ ಸಲುವಾಗಿ ಹೆಚ್ಚು ಆಸ್ಪತ್ರೆಗಳನ್ನು ತೆರಯಬೇಕಾಗಿದೆ. ಅಲ್ಲದೆ ರಾಜ್ಯದ ಜನರಿಗೆ ಮಾಸ್ಕ್ ಹಾಗೂ ಔಷದವನ್ನು ಸರ್ಕಾರವೇ ಉಚಿತವಾಗಿ ನೀಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.