ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದು ಸರಿಯಲ್ಲ. ಪರೀಕ್ಷೆಯಿಲ್ಲದೇ ಎಲ್ಲರನ್ನೂ ಪಾಸ್ ಮಾಡುವಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದರು.
ಇಂದು ಸಚಿವ ಸುರೇಶ್ ಕುಮಾರ್ ಮನೆ ಮುಂದೆ ಏಕಾಂಗಿ ಹೋರಾಟ ಮಾಡಿದ ವಾಟಾಳ್, ಸಚಿವ ಸುರೇಶ್ ಕುಮಾರ್ ಮಕ್ಕಳ ವಿಷಯದಲ್ಲಿ ಆಟ ಆಡಬಾರದು. ಹಠ ಮಾಡದೇ ಪ್ರಾಮಾಣಿಕವಾಗಿ ಚಿಂತನೆ ಮಾಡಬೇಕು ಎಂದು ಆಗ್ರಹಿಸಿದರು.
ಕ್ಯಾಬಿನೆಟ್ ತೀರ್ಮಾನ ತೆಗೆದುಕೊಳ್ಳಬೇಕು. ಇಡೀ ರಾಜ್ಯದ ಮಕ್ಕಳ ತಂದೆ-ತಾಯಿಗಳ ಅನುಮತಿ ಕೇಳಿ ತೀರ್ಮಾನಕ್ಕೆ ಬನ್ನಿ. ಕೊರೊನಾದಿಂದ ಮಕ್ಕಳನ್ನ ಉಳಿಸಿ ಎಂದು ಮನವಿ ಮಾಡಿದರು.