ETV Bharat / city

ಲಸಿಕಾ ಮೇಳಕ್ಕೆ ಜನರ ಭರ್ಜರಿ ರೆಸ್ಪಾನ್ಸ್: 1 ಲಕ್ಷಕ್ಕೂ ಹೆಚ್ಚು ಡೋಸ್ ವಿತರಣೆ

author img

By

Published : Sep 1, 2021, 9:43 PM IST

ಬೆಂಗಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಸೂಪರ್ ಮಾರ್ಕೆಟ್​​, ಮಾರುಕಟ್ಟೆ, ಜನನಿಬಿಡ ಪ್ರದೇಶ, ಫುಟ್​​ಪಾತ್ ಮೇಲೆ, ಕೈಗಾರಿಕೆ, ಫ್ಯಾಕ್ಟರಿಗಳ ಬಳಿ ಲಸಿಕಾ ಮೇಳ ಹಮ್ಮಿಕೊಳ್ಳಲಾಗುತ್ತಿದೆ.

vaccine-mela-in-bengaluru
ಲಸಿಕಾ ಮೇಳಕ್ಕೆ ಜನರ ಭರ್ಜರಿ ರೆಸ್ಪಾನ್ಸ್: 1 ಲಕ್ಷಕ್ಕೂ ಹೆಚ್ಚು ಡೋಸ್ ವಿತರಣೆ

ಬೆಂಗಳೂರು: ನಗರದಲ್ಲಿ ದಾಖಲೆ ಮಟ್ಟದಲ್ಲಿ ಇಂದು ವ್ಯಾಕ್ಸಿನ್ ವಿತರಣೆ ನಡೆಯುವ ಸಾಧ್ಯತೆ ಇದೆ. ಮಧ್ಯಾಹ್ನ 3-30ರವರೆಗೂ 1 ಲಕ್ಷದ 15 ಸಾವಿರ ವ್ಯಾಕ್ಸಿನ್ ಡೋಸ್ ವಿತರಣೆಯಾಗಿದೆ. ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊರತುಪಡಿಸಿ ಇತರೆಡೆಯೂ ಕ್ಯಾಂಪ್ ಹಾಕಿ (ಮೊಬೈಲ್ ಸೆಂಟರ್ ಗಳ ಮೂಲಕ) ಸಾರ್ವಜನಿಕರಿಗೆ ಇದೇ ಮೊದಲು ಲಸಿಕೆ ನೀಡಲು ಬಿಬಿಎಂಪಿ ಮುಂದಾಗಿದೆ.

ಇಂದಿನಿಂದ ಮೂರು ದಿನಗಳ ಕಾಲ ಈ ಲಸಿಕಾ ಮೇಳ ನಡೆಯಲಿದ್ದು, ಇಂದು 1,30,500 ಕೋವಿಡ್ ವಿರುದ್ಧದ ಲಸಿಕೆ ಡೋಸ್ ವಿತರಣೆಯಾಗಿದೆ. ಒಟ್ಟು 269 ಸ್ಥಳಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಲಸಿಕಾ ಮೇಳಕ್ಕೆ ನಗರದಲ್ಲಿ‌ ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಆಸ್ಪತ್ರೆಗಳ ಮುಂದೆ, ಲಸಿಕಾ ಕ್ಯಾಂಪ್​ಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತು ವ್ಯಾಕ್ಸಿನ್​ಗಾಗಿ ಮೊರೆ ಹೋಗಿದ್ದಾರೆ. ಹಲವೆಡೆ ಜನ ಬಂದಿದ್ದರೂ, ವ್ಯಾಕ್ಸಿನ್ ಸಾಲಲಿಲ್ಲ. ಇದರಿಂದ ಸಿಬ್ಬಂದಿ, ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿಯೂ‌ ನಡೆಯಿತು. ಬೆಳಗ್ಗೆ‌ ಎಂಟರಿಂದಲೇ ವ್ಯಾಕ್ಸಿನ್ ಹಂಚಿಕೆ ಬಗ್ಗೆ ಬಿಬಿಎಂಪಿ ಘೋಷಣೆ ಮಾಡಿದ್ದರೂ, ತಡವಾಗಿ ಆರಂಭಿಸಲಾಯಿತು.

141 ಪ್ರಾಥಮಿಕ ಆರೋಗ್ಯ ಕೇಂದ್ರ, ಸೂಪರ್ ಮಾರ್ಕೆಟ್​​, ಮಾರುಕಟ್ಟೆ , ಜನನಿಬಿಡ ಪ್ರದೇಶ , ಫುಟ್​​ಪಾತ್ ಮೇಲೆ, ಕೈಗಾರಿಕೆ, ಫ್ಯಾಕ್ಟರಿಗಳ ಬಳಿ ಲಸಿಕಾ ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಕ್ಯಾಂಪ್​​ನಲ್ಲಿ ಕನಿಷ್ಟ 170 ಜನರಿಗೆ ಲಸಿಕೆ ನೀಡಬೇಕು. ಪ್ರತಿದಿನ ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೂ ಲಸಿಕಾ ಅಭಿಯಾನ ನಡೆಸಲು ಪಾಲಿಕೆ ನಿರ್ಧರಿಸಿದೆ.

ಶೇಷಾದ್ರಿಪುರಂ ಆರೋಗ್ಯ ಪ್ರಾಥಮಿಕ ಕೇಂದ್ರದಲ್ಲೂ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿತ್ತು. ಲಸಿಕೆಗಾಗಿ ಬರುವ ಸಾರ್ವಜನಿಕರಿಗೆ ಪೂರ್ಣ ವ್ಯವಸ್ಥೆ ಮಾಡಲಾಗಿತ್ತು. ಒಬ್ಬರು ಡಾಕ್ಟರ್, ಡೇಟಾ ಎಂಟ್ರಿ ಅಪರೇಟರ್, ಆಶಾ ಕಾರ್ಯಕರ್ತರು, ಸ್ವ್ಯಾಬ್ ಕಲೆಕ್ಷನ್ ಸಿಬ್ಬಂದಿ, ಸಹಾಯಕ ಸಿಬ್ಬಂದಿಗಳ ನಿಯೋಜನೆಯಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ಅತ್ಯಾಚಾರ ಪ್ರಕರಣಗಳು: ನಾಲ್ಕು ವರ್ಷಗಳ ಅಂಕಿ-ಅಂಶ ಇಲ್ಲಿದೆ..

ಪ್ರತಿ ಟೀಂಗೂ ಲೀಡರ್ ಹಾಗೂ ಡೈವರ್, ವೆಹಿಕಲ್ ಸೌಲಭ್ಯ ನೀಡಲಾಗಿದೆ. ಬೆಂಗಳೂರು ರಾಜಪುರೋಹಿತ್ ಸಂಘ ಆವರಣದಲ್ಲಿಯೂ ವ್ಯಾಕ್ಸಿನೇಶನ್ ಕೈಗೊಳ್ಳಲಾಗಿತ್ತು. ಸುತ್ತಮುತ್ತ ಕೆಲಸ ಮಾಡುವ ಸಿಬ್ಬಂದಿ ಬಂದು ವ್ಯಾಕ್ಸಿನ್ ಪಡೆಯಲು ಕ್ಯೂ ನಿಂತರು. ಶಿವಾಜಿನಗರ ಕ್ಷೇತ್ರದಲ್ಲಿ ವ್ಯಾಕ್ಸಿನ್​ಗಾಗಿ‌ ಜನರಿಂದ ನೂಕು ನುಗ್ಗಲು ಉಂಟಾಯಿತು. ಒಂದೊಂದು ಲಸಿಕಾ ಕೇಂದ್ರಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ಜಮಾಯಿಸಿದ್ದರು.

ವ್ಯಾಕ್ಸಿನ್ ಹಂಚಿಕೆ

  • ಬೊಮ್ಮನಹಳ್ಳಿ- 15000
  • ದಕ್ಷಿಣ- 17000
  • ಆರ್ ಆರ್ ನಗರ- 13000
  • ಪಶ್ಚಿಮ- 20000
  • ಪೂರ್ವ- 18000
  • ಮಹದೇವಪುರ- 14000
  • ಯಲಹಂಕ- 13000
  • ದಾಸರಹಳ್ಳಿ - 20500

ETV Bharat Logo

Copyright © 2024 Ushodaya Enterprises Pvt. Ltd., All Rights Reserved.