ETV Bharat / city

ರಾಜ್ಯದಲ್ಲಿ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ: ಎಸ್ಎಂಎಸ್ ಬಂದವರಿಗೆ ಮಾತ್ರ ಅವಕಾಶ

18 ರಿಂದ 44ರ ವಯಸ್ಸಿನವರಿಗೆ ರಾಜ್ಯ ಸರ್ಕಾರ ಇಂದಿನಿಂದ ಕೋವಿಡ್​ ಲಸಿಕೆ ನೀಡುತ್ತಿದೆ. ಫಲಾನುಭವಿಗಳು ಆನ್​ಲೈನ್​ನಲ್ಲಿ ಕಡ್ಡಾಯವಾಗಿ ಹೆಸರನ್ನು ನೋಂದಾಯಿಸಿಕೊಂಡಿರಬೇಕು ಹಾಗೂ ನೋಂದಣಿಯ ನಂತರ ತಮ್ಮ‌ ಮೊಬೈಲ್​ನಲ್ಲಿ ಸಮಯ ಮತ್ತು ದಿನಾಂಕ ನಿಗದಿಯ ಬಗ್ಗೆ ಎಸ್ಎಂಎಸ್ ಸ್ವೀಕರಿಸಿರಬೇಕು.

state
state
author img

By

Published : May 9, 2021, 10:54 PM IST

Updated : May 10, 2021, 6:04 AM IST

ಬೆಂಗಳೂರು: ಇಂದಿನಿಂದ ರಾಜ್ಯದ ನಿಗದಿತ ಕೇಂದ್ರಗಳಲ್ಲಿ 18 ರಿಂದ 44 ವರ್ಷ ವಯಸ್ಸಿನವರಿಗೆ ಕೋವಿಡ್-19 ಲಸಿಕೆ ನೀಡಲಾಗುತ್ತದೆ. ಈಗಾಗಲೇ ನೋಂದಣಿ ಮಾಡಿಕೊಂಡವರು ತಮಗೆ ಬಂದಿರುವ ಸಂದೇಶವನ್ನು ಪೊಲೀಸರಿಗೆ ತೋರಿಸಿ ಲಸಿಕೆ ಪಡೆಯಲು ತೆರಳಬಹುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

18 ರಿಂದ 44 ವರ್ಷ ವಯಸ್ಸಿನ ನಡುವಿನ ಫಲಾನುಭವಿಗಳು ಆನ್​ಲೈನ್​ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಂಡಿರಬೇಕು ಹಾಗೂ ನೋಂದಣಿಯ ನಂತರ ತಮ್ಮ‌ ಮೊಬೈಲ್​ನಲ್ಲಿ ಸಮಯ ಮತ್ತು ದಿನಾಂಕ ನಿಗದಿಯ ಬಗ್ಗೆ ಎಸ್ಎಂಎಸ್ ಸ್ವೀಕರಿಸಿರಬೇಕು.

ಇಂದಿನಿಂದ 14 ದಿನಗಳ ಕಾಲ ಲಾಕ್​ಡೌನ್ ಆರಂಭವಾಗಲಿದ್ದು, ಕಟ್ಟುನಿಟ್ಟಿನ ಈ ಸಂದರ್ಭದಲ್ಲಿ ಫಲಾನುಭವಿಗಳು ಮೊಬೈಲ್​ನಲ್ಲಿ ಸ್ವಿಕರಿಸಿದ ಎಸ್ಎಂಎಸ್ ಪರಿಶೀಲಸಿದ ನಂತರವಷ್ಟೇ ಪೊಲೀಸರು ಲಸಿಕಾ ಕೇಂದ್ರಗಳಿಗೆ ತೆರಳಲು ಅನುಮತಿ ನೀಡಲಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.

Last Updated : May 10, 2021, 6:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.