ಬೆಂಗಳೂರು: ಉಪಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಇವರ ನಡುವೆಯೇ ನಟ ಉಪೇಂದ್ರ ನೇತೃತ್ವದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಸದ್ದಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ.
ಕೆ.ಆರ್.ಪುರಂ ವಿಧಾನಸಧಾ ಕ್ಷೇತ್ರದಲ್ಲಿ ಇಂದು ಏಕಾಂಗಿಯಾಗಿ ಪ್ರಚಾರ ನಡೆಸಿದ ಪಕ್ಷದ ಅಭ್ಯರ್ಥಿ ಸಂತೋಷ್, ಕ್ಷೇತ್ರದ ಸಂತೆ, ಬಿಬಿಎಂಪಿ ಕಚೇರಿ ಸುತ್ತಮುತ್ತಲಿನ ಪ್ರತಿ ಅಂಗಡಿಗಳಿಗೂ ತೆರಳಿ ಮತಯಾಚಿಸಿದರು.
ಈ ವೇಳೆ ಮಾತನಾಡಿದ ಸಂತೋಷ್, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಕ್ಷದ ಧ್ಯೇಯೋದ್ದೇಶಗಳನ್ನು ಜನರಿಗೆ ತಿಳಿಸುತ್ತಿದ್ದೇನೆ. ಗೆಲ್ಲುವುದು, ಸೋಲುವುದು ಮುಖ್ಯವಲ್ಲ. ಉತ್ತಮ ಪ್ರಜಾಕೀಯ ಪಕ್ಷ ಇದೆ ಅನ್ನೊದು ಜನರಿಗೆ ಗೊತ್ತಾಗಬೇಕು. ಪಕ್ಷದ ಚಿಂತನೆಗಳು ಜನರಿಗೆ ಗೊತ್ತಾಗಬೇಕು. ನಿಮ್ಮಂತ ಯುವಕರು ಬರಬೇಕು ಎಂದು ಮತದಾರರು ಪ್ರಚಾರದ ವೇಳೆ ಹೇಳುತ್ತಿದ್ದಾರೆ. ಬೇರೆ ಪಕ್ಷದ ಅಭ್ಯರ್ಥಿಗಳ ಕುರಿತು ಮಾತಾಡುವುದಿಲ್ಲ. ಜನರಿಗೆ ಒಳ್ಳೆಯದಾಗಬೇಕು ಅಷ್ಟೆ ಎಂದರು.