ETV Bharat / city

ಪ್ರಭಾವ ಬಳಸಿ ವ್ಯಾಕ್ಸಿನ್ ವಿತರಣೆ ಆರೋಪ : ಎಲ್ಲರಿಗೂ ಒಂದೇ ನಿಯಮ ಎಂದ ಬಿಬಿಎಂಪಿ - bbmp vaccine allegation news

ನಿನ್ನೆ 90 ಸಾವಿರ ವ್ಯಾಕ್ಸಿನೇಷನ್ ಆಗಿದೆ. ಎಲ್ಲಾ ಕಡೆ ಲಸಿಕೆ ಸಿಗುತ್ತಿದೆ. ಕೇವಲ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಅಲ್ಲ. ಇಂದು ಬಿಎಂಟಿಸಿ ಡ್ರೈವರ್, ಕಂಡಕ್ಟರ್‌ಗಳಿಗೆ, ಆಟೋ ಚಾಲಕರು, ಟ್ಯಾಕ್ಸಿ ಚಾಲಕರಿಗೂ ಸ್ಥಳೀಯವಾಗಿ ವ್ಯಾಕ್ಸಿನ್ ನೀಡಲಾಗ್ತಿದೆ..

ಪ್ರಭಾವ ಬಳಸಿ ವ್ಯಾಕ್ಸಿನ್ ವಿತರಣೆ ಆರೋಪ
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ
author img

By

Published : Jun 1, 2021, 4:10 PM IST

ಬೆಂಗಳೂರು : ವ್ಯಾಕ್ಸಿನ್ ವಿತರಣೆಯಲ್ಲಿ ಹೆಚ್ಚಳ ಮಾಡಲಾಗಿದೆ. ಮುಂಚೂಣಿ ಕಾರ್ಯಕರ್ತರಿಗೆ ಹಲವೆಡೆ ಲಸಿಕೆ ನೀಡಲಾಗುತ್ತಿದೆ. ಆದರೆ, ರಾಜಕೀಯ ಮುಖಂಡರು, ಕಾರ್ಯಕರ್ತರು ಪ್ರಭಾವ ಬಳಸಿ ಅವರ ಕುಟುಂಬಸ್ಥರಿಗೆ ಹಾಗೂ ಕಾರ್ಯಕರ್ತರಿಗೆ ವ್ಯಾಕ್ಸಿನ್ ಕೊಡಿಸುತ್ತಿದ್ದಾರೆ ಎಂಬ ದೂರು ಕೇಳಿ ಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಸರ್ಕಾರ ನಿಗದಿ ಮಾಡಿದಂತೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳೀಯವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಲಸಿಕೆ ಹಾಕಲಾಗುತ್ತಿದೆ. ಯಾರಿಗೂ ವಿಶೇಷ ಆದ್ಯತೆ ಕೊಡುತ್ತಿಲ್ಲ. ಎಲ್ಲರಿಗೂ ಸಮಾನವಾದ ನಿಯಮ ಇದೆ. ಆ ರೂಲ್ಸ್‌ ಪ್ರಕಾರವೇ ವ್ಯಾಕ್ಸಿನ್ ಪಡೆಯಬೇಕು ಎಂದರು.

ಪ್ರಭಾವ ಬಳಸಿ ವ್ಯಾಕ್ಸಿನ್ ವಿತರಣೆ ಆರೋಪ

ಇನ್ನು, 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ವ್ಯಾಕ್ಸಿನ್ ವಿತರಣಾ ಸೆಂಟರ್​ಗಳನ್ನು ಪ್ರತೀ ವಾರ್ಡ್​ಗಳಲ್ಲಿ ತೆರೆಯಲಾಗಿದೆ. ಕೆಲವೆಡೆ ಎರಡೆರಡು ತೆರೆಯಲಾಗಿದೆ. ಎಲ್ಲಾ ಸಾರ್ವಜನಿಕರು ಬಂದು ಲಸಿಕೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ನಿನ್ನೆ 90 ಸಾವಿರ ವ್ಯಾಕ್ಸಿನೇಷನ್ ಆಗಿದೆ. ಎಲ್ಲಾ ಕಡೆ ಲಸಿಕೆ ಸಿಗುತ್ತಿದೆ. ಕೇವಲ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಅಲ್ಲ. ಇಂದು ಬಿಎಂಟಿಸಿ ಡ್ರೈವರ್, ಕಂಡಕ್ಟರ್‌ಗಳಿಗೆ, ಆಟೋ ಚಾಲಕರು, ಟ್ಯಾಕ್ಸಿ ಚಾಲಕರಿಗೂ ಸ್ಥಳೀಯವಾಗಿ ವ್ಯಾಕ್ಸಿನ್ ನೀಡಲಾಗ್ತಿದೆ.

ಸರ್ಕಾರದ ನಿಯಮದ ಪ್ರಕಾರ ಸ್ಲಂ ನಿವಾಸಿಗಳಿಗೆ ಸದ್ಯಕ್ಕೆ ನೀಡಲಾಗುವುದಿಲ್ಲ. ಆದ್ರೆ, ಎನ್​ಜಿಒಗಳು ಲಸಿಕೆ ನೀಡುವುದಕ್ಕೆ ಮುಂದೆ ಬಂದಿದ್ದು, ಸರ್ಕಾರದ ಜೊತೆ ಚರ್ಚೆ ಆಗಿದೆ ಎಂದು ತಿಳಿಸಿದರು. ಲಾಕ್‌ಡೌನ್ ವಿಚಾರವಾಗಿ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗಲಿದೆ. ನಮ್ಮ ಅಭಿಪ್ರಾಯ ತಿಳಿಸಲಾಗಿದೆ ಎಂದು ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.