ETV Bharat / city

ಅರುಣಾ ಕುಮಾರಿ ನನಗೂ ಮೋಸ ಮಾಡಿದ್ದಾರೆ: ಉದ್ಯಮಿ ನಾಗವರ್ಧನ್ - ನಟ ದರ್ಶನ್ ಪ್ರಕರಣದ ಆರೋಪಿ ಅರುಣಾ ಕುಮಾರಿ ಸುದ್ದಿ

ನಟ ದರ್ಶನ್ ವಂಚನೆ ಪ್ರಕರಣದ ಆರೋಪಿ ಅರುಣಾ ಕುಮಾರಿ ನನಗೂ ಮೋಸ ಮಾಡಿದ್ದಾರೆ. ಆಕೆ ನನ್ನ ಸ್ನೇಹಿತರು, ಸಂಬಂಧಿಕರನ್ನು ದೂರ ಮಾಡುತ್ತ ಬಂದಳು. ಈಗ ದರ್ಶನ್, ಉಮಾಪತಿ ನಡುವೆ ಇದೇ ಆಗಿದೆ ಎಂದು ಉದ್ಯಮಿ ನಾಗವರ್ಧನ್ ಆರೋಪಿಸಿದ್ದಾರೆ.

ಉದ್ಯಮಿ ನಾಗವರ್ಧನ್
ಉದ್ಯಮಿ ನಾಗವರ್ಧನ್
author img

By

Published : Jul 13, 2021, 5:09 PM IST

Updated : Jul 13, 2021, 7:51 PM IST

ಬೆಂಗಳೂರು: ಅರುಣಾ ಕುಮಾರಿಯಿಂದ ನನಗೂ 5 ವರ್ಷಗಳ ಹಿಂದೆ ವಂಚನೆ ಆಗಿತ್ತು. ಫೇಸ್​ಬುಕ್ ಮೂಲಕ ಪರಿಚಯವಾದ ಆಕೆ ನನಗೆ ಸಿನಿಮಾಗೆ ಆಫರ್ ಕೊಟ್ಟಿದ್ದರು ಎಂದು ನಿರ್ದೇಶಕ, ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್ ಅವರ ಜೊತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಉದ್ಯಮಿ ನಾಗವರ್ಧನ್ ವಿವರಿಸಿದರು.

ಅರುಣಾಕುಮಾರಿ ನಂದಿತಾ ಅಂತ ಸುಳ್ಳು ಹೆಸರು ಹೇಳಿ ಪರಿಚಯ ಮಾಡಿಕೊಂಡಳು. ನನ್ನ ತಂದೆ ನಂದಿನಿ ಡೇರಿಯಲ್ಲಿ ಮ್ಯಾನೇಜರ್, ನಮ್ಮದು ಹೈ ಪ್ರೊಫೈಲ್ ಕುಟುಂಬ ಎನ್ನುತ್ತಿದ್ದಳು. ನಂತರದ ದಿನಗಳಲ್ಲಿ ನಿಮಗೆ ದೊಡ್ಡ ತೆಲುಗು ಸಿನಿಮಾ ಮಾಡ್ತೀನಿ ಅಂತ ಆಫರ್ ಕೊಟ್ಟಳು. ಆದರೆ ಈ ಸಿನಿಮಾ ಶುರುವೇ ಆಗಲಿಲ್ಲ. ಬಳಿಕ ಕನಕಪುರ ರಸ್ತೆಯಲ್ಲಿ ಆಸ್ತಿ ಬಗ್ಗೆ ಮಾತಾಡಿದ್ದಳು. 10-12 ಕೋಟಿ‌ ರೂ ಮೊತ್ತದ ನಿರ್ಮಾಣ ಪ್ರಾಜೆಕ್ಟ್ ತೋರಿಸಿದ್ದರು. ಕನಕಪುರ ರೋಡ್​ನಲ್ಲಿ ನಿವೇಶನ ತೋರಿಸಿ ನಿರ್ಮಾಣ ಕಾರ್ಯಕ್ಕೆ ಬಂದರು. ಅದೂ ಆಗಲಿಲ್ಲ. ನಂತರ ಮನೆ ಸಮಸ್ಯೆ ಹೇಳಿ, ಆಭರಣ ಹಾಗೂ ಹಣ ಸೇರಿ 6 ಲಕ್ಷ ತೆಗೆದುಕೊಂಡಿದ್ದರು ಎಂದು ಹೇಳಿದರು.

ಆ ಮಹಿಳೆಯ ಅಸಲಿಯತ್ತು ತಿಳಿದುಕೊಳ್ಳೋಕೆ ನಾಲ್ಕು ತಿಂಗಳು ಬೇಕಾಯ್ತು. ನನ್ನ ಸ್ನೇಹಿತರಿಂದ ಅವಳಿಗೆ 1 ಲಕ್ಷ ಕೊಡಿಸಿದ್ದೆ. ಸಿನಿಮಾ ಮಾಡುವ ಬಗ್ಗೆ ಕೇಳಿದಾಗ ಬೇರೆ ವಿಚಾರ ಬಂತು. ನನಗೆ ಬೆದರಿಕೆ ಇದೆ ಎಂದು ಅರುಣಾ ಕುಮಾರಿ ಹೇಳಿದ್ದಳು. ಅವಳ ಪರಿಚಯ ಆದ ಮೇಲೆ ಸ್ನೇಹಿತರ ನಡುವೆ ಗೊಂದಲ ಸೃಷ್ಟಿಯಾಗುತ್ತಿತ್ತು. ನನ್ನ ಸ್ನೇಹಿತರು, ಸಂಬಂಧಿಕರನ್ನು ದೂರ ಮಾಡುತ್ತಾ ಬಂದಳು. ಈಗ ದರ್ಶನ್, ಉಮಾಪತಿ ನಡುವೆ ಇದೇ ಆಗಿದೆ ಎಂದು ತಿಳಿಸಿದರು.

ಆಕೆ ನನಗೆ 6 ಲಕ್ಷ ರೂ ಹಾಗೂ ಚಿನ್ನ ತೆಗೆದುಕೊಂಡು ಮೋಸ ಮಾಡಿದ್ದಾರೆ. ಅವರಿಂದ ಸುಮಾರು 15 ಲಕ್ಷ ರೂ. ವಂಚನೆ ಆಗಿದೆ. 2016 ಫೆಬ್ರವರಿ ಅಂತ್ಯದಲ್ಲಿ ಇವರ ನಾಟಕಗಳು ಗೊತ್ತಾದವು. 2016ರ ಫೆಬ್ರವರಿಯಲ್ಲಿ ಅವಳನ್ನು ಕೊನೆ ಬಾರಿ ಭೇಟಿಯಾಗಿದ್ದೆ. ನನ್ನ ಪತ್ನಿ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ಕೊಟ್ಟಿದ್ರು. ನಾನು ಅರುಣಾ ಕುಮಾರಿಗೆ ರಕ್ಷಣೆ ಕೊಡಲು ಹೋಗಿದ್ದೆ. ಮೂರು ತಿಂಗಳ ಕಾಲ ಮನೆಗೆ ಬರದ ಹಿನ್ನೆಲೆ ದೂರು ನೀಡಿದ್ದರು. ನಮ್ಮ ಚಾಲಕನಿಗೆ ಅರುಣಾ ಕುಮಾರಿ ಹೆದರಿಸುತ್ತಿದ್ದಳಂತೆ. ಇವಳಿಂದ ನನಗೆ ಬ್ಯುಸಿನೆಸ್​ನಲ್ಲಿ 35 ಲಕ್ಷದವರೆಗೂ ನಷ್ಟ ಉಂಟಾಗಿದೆ ಎಂದು ನಾಗವರ್ಧನ್ ಹೇಳಿದ್ದಾರೆ.

ಜೀವ ಬೆದರಿಕೆ ಇದೆ ಎಂದು ಹೇಳಿದ್ದಳು. ನಾನು ಅರುಣಾ ಕುಮಾರಿಗೆ ರಕ್ಷಣೆ ಕೊಡಲು ಹೋಗಿದ್ದೆ. ಮೂರು ತಿಂಗಳ ಕಾಲ ಮನೆಗೆ ಬರದ ಹಿನ್ನೆಲೆಯಲ್ಲಿ ದೂರು ನೀಡಿದ್ದರು. ನನ್ನ ಪತ್ನಿ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ಕೊಟ್ಟಿದ್ದರು ಎಂದು ನಡೆದ ಘಟನೆಗಳನ್ನು ವಿವರಿಸಿದರು.

Last Updated : Jul 13, 2021, 7:51 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.