ETV Bharat / city

ಸರ್ವ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಬಜೆಟ್: ಎಸ್ ಎಂ ಕೃಷ್ಣ

ದೇಶದ ಕಟ್ಟಕಡೆಯ ವ್ಯಕ್ತಿಗೆ ತಲುಪುವ ಬಜೆಟ್ ಇದು. ನಿರ್ಮಲಾ ಸೀತಾರಾಮನ್​ ಅವರು ಯಾವುದೇ ಕ್ಷೇತ್ರವನ್ನು ನಿರ್ಲಕ್ಷಿಸದೇ ಎಲ್ಲಾ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಬಜೆಟ್ ಮಂಡಿಸಿದ್ದಾರೆ ಎಂದು ಮಾಜಿ ಸಿಎಂ, ಮಾಜಿ ವಿದೇಶಾಂಗ ಸಚಿವ ಎಸ್​.ಎಂ.ಕೃಷ್ಣ ಹೇಳಿದ್ದಾರೆ.

budget
ಎಸ್ ಎಂ ಕೃಷ್ಣ
author img

By

Published : Feb 1, 2022, 5:48 PM IST

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಬಜೆಟ್ ಮಂಡಿಸಿದ್ದು, ಇದೊಂದು ಉತ್ತಮ ಬಜೆಟ್ ಆಗಿದೆ ಎಂದು ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್​ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂದು ಮಂಡನೆಯಾದ ಕೇಂದ್ರ ಬಜೆಟ್ ಸ್ವಾಗತಾರ್ಹವಾಗಿದೆ. ಇದು ಬೆಳವಣಿಗೆ ಆಧಾರಿತ ಬಜೆಟ್‌ ಆಗಿದೆ. ಶಿಕ್ಷಣ, ಕೃಷಿ, ಉದ್ಯೋಗ ಸೃಷ್ಟಿ, ಮೂಲಭೂತ ಸೌಕರ್ಯ, ಸಾರಿಗೆ ಸಂಪರ್ಕ, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಬಜೆಟ್‌ ಇದಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಕಟ್ಟಕಡೆಯ ವ್ಯಕ್ತಿಗೆ ತಲುಪುವ ಬಜೆಟ್ ಇದು. ನಿರ್ಮಲಾ ಸೀತಾರಾಮನ್​ ಅವರು ಯಾವುದೇ ಕ್ಷೇತ್ರವನ್ನು ನಿರ್ಲಕ್ಷಿಸದೇ ಎಲ್ಲಾ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಬಜೆಟ್ ಮಂಡಿಸಿದ್ದಾರೆ ಎಂದು ಎಸ್​.ಎಂ.ಕೃಷ್ಣ ಬಣ್ಣಿಸಿದ್ದಾರೆ.

ಜಾಹೀರಾತು-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.