ETV Bharat / city

ರಂಗೇರಿದ ಗ್ರಾಮ ಪಂಚಾಯತಿ ಚುನಾವಣೆ: ಅಭ್ಯರ್ಥಿಗಳ ಅವಿರೋಧ ಆಯ್ಕೆ - ಗ್ರಾಮ ಪಂಚಾಯತಿ ಚುನಾವಣೆ ಅಭ್ಯರ್ಥಿಗಳ ಅವಿರೋಧ ಆಯ್ಕೆ

ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ರಂಗೇರುತ್ತಿದೆ. ಕೆಲವು ಕಡೆ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಭಾಗದ ಕಣ್ಣೂರು, ಆವಲಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಕೆಲವು ಚುನಾವಣಾ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಕಾರಣ ಅವಿರೋಧ ಆಯ್ಕೆ ನಡೆದಿದೆ.

unanimous-selection-of-candidates-in-bangalore-rural
ಗ್ರಾಮ ಪಂಚಾಯತಿ ಚುನಾವಣೆ
author img

By

Published : Dec 20, 2020, 8:08 PM IST

ಮಹದೇವಪುರ: ಎರಡನೇ ಹಂತದ ಚುನಾವಣಾ ಕಣ ರಂಗೇರಿದ್ದು ಕೇಲ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಹಿನ್ನೆಲೆ ಕಣ್ಣೂರು ಪಂಚಾಯತಿ ವ್ಯಾಪ್ತಿಯಲ್ಲಿ ಶಿವಶಂಕರ್ ಮತ್ತು ಸುಂದರ್ ಎಂಬುವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಂಗೇರಿದ ಗ್ರಾಮ ಪಂಚಾಯತಿ ಚುನಾವಣೆ

ಅಲ್ಲದೆ ಆವಲಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ವಿರೇನಹಳ್ಳಿ ಗ್ರಾಮದ ಕೃಷ್ಣ, ಆವಲಹಳ್ಳಿ ರಾಜು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಚುನಾವಣೆಗೆ ಎಂಟು ದಿನಗಳ ಕಾಲಾವಧಿಯಿದ್ದು ಉಳಿದ ಅಭ್ಯರ್ಥಿಗಳ ಗೆಲುವಿಗೆ ಉಭಯ ಪಕ್ಷಗಳ ಕಾರ್ಯಕರ್ತರು ಟೊಂಕ ಕಟ್ಟಿ ನಿಂತಿದ್ದಾರೆ.

ಬಿದರಹಳ್ಳಿ ಪಂಚಾಯತಿ, ಕಣ್ಣೂರು, ಕಿತ್ತಗನೂರು, ಕನ್ನಮಂಗಲ, ಶೀಗೆಹಳ್ಳಿ, ದೊಡ್ಡಬನಹಳ್ಳಿ, ಮಂಡೂರು ಸೇರಿದಂತೆ ವಿವಿಧೆಡೆ ಚುನಾವಣೆ ಕಣ ರಂಗೇರಿದೆ.

ತಮ್ಮ ಬೆಂಬಲಿಗರನ್ನು ಗೆಲ್ಲಿಸಲು ಕೆಲ ನಾಯಕರು ಅವಿರೋಧ ಆಯ್ಕೆಯ ರಣತಂತ್ರ ರೂಪಿಸಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಮನವೊಲಿಸಿ ನಾಮಪತ್ರ ವಾಪಾಸ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಕೆಲವು ಅಭ್ಯರ್ಥಿಗಳು ಅವಿರೋಧ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಬಿಜೆಪಿಗರೆ ಹೆಚ್ಚಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.