ETV Bharat / city

ಬಿಜೆಪಿಯವರ ಪ್ರವೃತ್ತಿ ಎಂದರೆ ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಅನ್ನೋ ಹಾಗಿದೆ: ಉಗ್ರಪ್ಪ ವ್ಯಂಗ್ಯ - bangalore news

ಎರಡನೇ ಅಲೆಗೆ ಸಾಕಷ್ಟು ಸಾವುಗಳಾಗಿವೆ. ಹೀಗಾಗಿ ‌ಎಲ್ಲದಕ್ಕೂ ನೇರ ಕಾರಣ ಮಿಸ್ಟರ್ ನರೇಂದ್ರ ಮೋದಿ ಹಾಗೂ ಅವರ ಸರ್ಕಾರ. ಇನ್ನು‌ ರಾಜ್ಯದಲ್ಲಿ ಮುಖ್ಯಮಂತ್ರಿಗಳು ನೇರ ಕಾರಣ. ಆದ್ರೆ ಇದನ್ನ ಯಾರಾದರೂ ಪ್ರಶ್ನಿಸಿದ್ರೆ ಅವರ ಬಾಯಿ ಮುಚ್ವಿಸುವ ಕೆಲಸ ಮಾಡಿದ್ದಾರೆ ಎಂದು ಉಗ್ರಪ್ಪ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

 Ugrappa outrage against BJP over corona
Ugrappa outrage against BJP over corona
author img

By

Published : May 17, 2021, 8:43 PM IST

Updated : May 17, 2021, 9:24 PM IST

ಬೆಂಗಳೂರು: ಬಿಜೆಪಿಯವರ ಪ್ರವೃತ್ತಿ ಎಂದರೆ ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಅನ್ನೋ ಹಾಗಿದೆ ಎಂದು ಮಾಜಿ ಸಂಸದ ವಿಎಸ್ ಉಗ್ರಪ್ಪ ವ್ಯಂಗ್ಯವಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ಚಂದ್ರಪ್ಪ ಮಾಜಿ ಸಚಿವ ಎಚ್ಎಂ ರೇವಣ್ಣ ಹಾಗೂ ಶಾಸಕ ಎನ್ ಎ ಹ್ಯಾರಿಸ್ ಜತೆ ಜಂಟಿ ಸುದ್ದಿ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿ, ನಾವು ಲಾಕ್​​​ಡೌನ್​​ಗೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಆದ್ರೆ ನಾವು ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಕೊಡುವಂತೆ ಒತ್ತಾಯ ಮಾಡಿದ್ವಿ. ಜೊತೆಗೆ ಲಸಿಕೆ ಚಿಕಿತ್ಸೆ ವಿಷಯಕ್ಕೆ ಒತ್ತು ಕೊಡುವಂತೆ ಒತ್ತಾಯಿಸಿದ್ವಿ. ಹಾಗೆ ಇಎಂಐ ಹಾಗೂ‌ ಎಲೆಕ್ಟ್ರಿಸಿಟಿ ಬಿಲ್ ಗೆ ವಿನಾಯಿತಿ ನೀಡುವಂತೆ ಒತ್ತಾಯಿಸಿದ್ವಿ ಎಂದರು.

ಸಿಟಿಯಿಂದ ಹಳ್ಳಿಗೆ ಈ ರೋಗ ಜಾಸ್ತಿಯಾಗಿದೆ. ಅನೇಕ ಗ್ರಾಮದಲ್ಲಿ ಈ ರೋಗ ತನ್ನ ರುದ್ರ ನರ್ತನ ಮಾಡಿದೆ. ಆದ್ರೆ ಇದನ್ನ ಪರಿಣಾಮಕಾರಿಯಾಗಿ ಎದರಿಸಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿಯವರ ಪ್ರವೃತ್ತಿ ಎಂದರೆ ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಅನ್ನೋ ಹಾಗಿದೆ: ಉಗ್ರಪ್ಪ ವ್ಯಂಗ್ಯ

ಶೇ.80 ರಷ್ಟು ಜನರಿಗೆ ಲಸಿಕೆಯನ್ನ ನೀಡಬೇಕು. ಆದ್ರೆ ನಮಗೆ ಲಭ್ಯವಾಗಿರೋ ಪ್ರಕಾರ 14 ಕೋಟಿ ಯಷ್ಟು ಜನರಿಗೆ ಫಸ್ಟ್ ಡೋಸ್ ಕೊಟ್ಟಿದ್ದಾರೆ. ಇನ್ನು 4 ಕೋಟಿಯಷ್ಟು ಮಂದಿಗೆ ಸೆಕೆಂಡ್ ಡೋಸ್ ಕೊಟ್ಟಿದ್ದಾರೆ. ಇನ್ನು‌ ಕರ್ನಾಟಕದಲ್ಲಿ 86 ಲಕ್ಷದಷ್ಟು ಫಸ್ಟ್ ಡೋಸ್, 25 ಲಕ್ಷದಷ್ಟು ಸೆಕೆಂಡ್ ಡೋಸ್ ಕೊಟ್ಟಿದ್ದಾರೆ. ಹೀಗಾಗಿ ಬೇರೆ ಬೇರೆ ದೇಶದಲ್ಲಿ ನೋಡಿದ್ರೆ ಅನೇಕ ದೇಶಗಳು ಈಗಾಗಲೇ ಸಾಕಷ್ಟು ಲಸಿಕೆ ಕೊಟ್ಟಿದ್ದಾರೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಶೇ. 80 ಲಸಿಕೆಗೆ 3 ವರ್ಷ ಬೇಕಾಗುತ್ತೆ. ಹೀಗಾಗಿ ಎಲ್ಲದರಲ್ಲೂ ನಮ್ಮ ರಾಜ್ಯ ಹಾಗೂ ‌ಕೇಂದ್ರ ಸರ್ಕಾರ ವಿಫಲವಾಗಿವೆ ಎಂದು ಆರೋಪ ಮಾಡಿದರು.

ಇನ್ನು ನಮ್ಮ ದೇಶ ಬಿಟ್ಟು ಬೇರೆ ದೇಶಕ್ಕೆ ಲಸಿಕೆ ಕೊಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪೋಸ್ಟ್ ಹಾಕಿದ್ರೆ 25 ಜನರನ್ನ ಬಂಧಿಸಿದ್ದಾರೆ ಎಂದು ದೂರಿದರು.

ಎರಡನೇ ಅಲೆಗೆ ಸಾಕಷ್ಟು ಸಾವುಗಳಾಗಿವೆ. ಹೀಗಾಗಿ ‌ಎಲ್ಲದಕ್ಕೂ ನೇರ ಕಾರಣ ಮಿಸ್ಟರ್ ನರೇಂದ್ರ ಮೋದಿ ಹಾಗೂ ಅವರ ಸರ್ಕಾರ. ಇನ್ನು‌ ರಾಜ್ಯದಲ್ಲಿ ಮುಖ್ಯಮಂತ್ರಿಗಳು ನೇರ ಕಾರಣ. ಆದ್ರೆ ಇದನ್ನ ಯಾರಾದರೂ ಪ್ರಶ್ನಿಸಿದ್ರೆ ಅವರ ಬಾಯಿ ಮುಚ್ವಿಸುವ ಕೆಲಸ ಮಾಡಿದ್ದಾರೆ. ಲಾಕ್ ಡೌನ್ ಮಾಡುವ ಸಮಯದಲ್ಲಿ ಪ್ಯಾಕೇಜ್ ಕೊಡಿ ಅಂದರೆ ಅಗಲ್ಲ ಅಂತಾರೆ. ಆದ್ರೆ ಜಿಂದಾಲ್ ಗೆ ಜಮೀನು ಕೊಟ್ಟಿದ್ದಾರೆ. ಹಿಂದೆ ಇವರೇ ವಿರೋಧ ಮಾಡಿದ್ರು .ಆದ್ರೆ, ಈಗ ಕಡಿಮೆ ಹಣಕ್ಕೆ ಅವರಿಗೆ ಕೊಟ್ಟಿದ್ದಾರೆ. ಹೀಗಾಗಿ ಇವರು ಕಿಕ್ ಬ್ಯಾಕ್ ಬಗ್ಗೆ ಅಷ್ಟೇ ಯೋಚನೆ ಮಾಡ್ತಾರೆ ಎಂದರು.

ಶಾಸಕ ಹ್ಯಾರಿಸ್ ಮಾತನಾಡಿ, ಸದ್ಯ ಲಾಕ್ ಡೌನ್ ಏರಿರೋ ಸರ್ಕಾರ ಯಾವುದೇ ಪರಿಹಾರ ಕೊಟ್ಟಿಲ್ಲ. ಇನ್ನು ವಿಸ್ತರಣೆ ಮಾಡ್ತಿವಿ ಅಂತಾರೆ. ಆದ್ರೆ ಯಾವುದೇ ಪರಿಹಾರ ಘೋಷಣೆ ಮಾಡ್ತಿಲ್ಲ. ಜೊತೆಗೆ ಲಾಕ್ ಡೌನ್ ಅಂತ ಹೇಳಿದ್ರೆ ಪರಿಹಾರ ಕೊಡಬೇಕಾಗುತ್ತೆ ಅಂತ ಕರ್ಪ್ಯೂ ಅಂತಾರೆ. ಯಾವುದೇ ಬೆಡ್ ಚಿಕಿತ್ಸೆ ಸಿಕ್ತಿಲ್ಲ. ಲಸಿಕೆ ಕೇಳಿದ್ರೆ ಅರೆಸ್ಟ್ ಮಾಡಿಸ್ತಾರೆ. ನಮ್ಮನ್ನೂ ಅರೆಸ್ಟ್ ಮಾಡಿಸಲಿ ನಾವು ಸಹ ರೆಡಿ ಇದ್ದೇವೆ ಎಂದು ಸವಾಲ್​ ಹಾಕಿದರು.

Last Updated : May 17, 2021, 9:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.