ಬೆಂಗಳೂರು: ಕೊರೊನಾ ವೈರಸ್ 2ನೇ ಅಲೆ ನಡುವೆಯೂ ಯುಗಾದಿ ಹಬ್ಬ ಸಂಭ್ರಮದಿಂದ ನಡೆದಿದೆ. ಇಂದು ಹೊಸ ತೊಡಕಿಗೆ ಗ್ರಾಹಕರು ಮಟನ್, ಚಿಕನ್ ಸ್ಟಾಲ್ಗಳ ಮುಂದೆ ಸರತಿ ಸಾಲಲ್ಲಿ ನಿಂತಿದ್ದ ದೃಶ್ಯ ಕಂಡುಬಂತು.
ನಗರದ ಮೈಸೂರು ರಸ್ತೆ ಪಾಪಣ್ಣ ಮಟನ್ ಸ್ಟಾಲ್ ಎದುರು ಜನದಟ್ಟಣೆ ಕಂಡುಬಂತು. ಮಾಸ್ಕ್ ಧರಿಸಿ, 2 ಮೀಟರ್ ಅಂತರ ಕಾಯ್ದುಕೊಂಡು, ಬ್ಯಾಗ್ ಹಿಡಿದು ಮಟನ್ ಖರೀದಿಗೆ ಜನರು ಸಾಲಾಗಿ ನಿಂತಿದ್ದರು.
ಅಂಗಡಿ ಸಿಬ್ಬಂದಿ ದೇಹದ ಉಷ್ಣತೆ ಪರೀಕ್ಷಿಸಿದ ಬಳಿಕವೇ ಮಟನ್ ಖರೀದಿಗೆ ಬಿಡುತ್ತಿದ್ದಾರೆ. ಜೊತೆಗೆ ಮಟನ್ ಸ್ಟಾಲ್ ಮುಂಭಾಗ ಮಾರ್ಕಿಂಗ್ ಮಾಡಿ, ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಡಬಲ್ ಮರ್ಡರ್ ಪ್ರಕರಣ: ಆರೋಪಿ ಕಾಲಿಗೆ ಗುಂಡು ಹೊಡೆದ ಪೊಲೀಸರು