ETV Bharat / city

ತವರಿಗೆ ಮರಳಿದ ವಿಶ್ವಕಪ್ ಗೆದ್ದ ಭಾರತ ಯುವ ತಂಡ.. ಸ್ವಾಗತವೂ ಇಲ್ಲ, ಸಂಭ್ರಮವೂ ಇಲ್ಲ! - ತವರಿಗೆ ಮರಳಿದ ಭಾರತ ಯುವ ತಂಡ

ಮಂಗಳವಾರ ಟ್ರೋಫಿಯೊಂದಿಗೆ ಯಶ್​ ಧುಲ್​ ಪಡೆ ತವರಿಗೆ ವಾಪಸ್​ ಆಗಿದೆ. ವೆಸ್ಟ್ ಇಂಡೀಸ್​ನಿಂದ ದುಬೈ ಮಾರ್ಗವಾಗಿ ಟೀಮ್ ಇಂಡಿಯಾ ಆಟಗಾರರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣಕ್ಕೆ ಆಗಮಿಸಿದರು.ವಿಮಾನ ನಿಲ್ದಾಣದ ಬಳಿಯಿರುವ ತಾಜ್ ಹೋಟೆಲ್​ನಲ್ಲಿ ಇಂದು ವಿಶ್ರಾಂತಿ ಪಡೆಯಲಿದ್ದು, ಸಂಜೆ ಅಹಮದಾಬಾದ್​ಗೆ ಪ್ರಯಾಣ ಬೆಳೆಸಲಿದ್ದಾರೆ.

ತವರಿಗೆ ಮರಳಿದ ವಿಶ್ವಕಪ್ ಗೆದ್ದ ಭಾರತ ಯುವ ತಂಡ

author img

By

Published : Feb 8, 2022, 5:41 PM IST

Updated : Feb 8, 2022, 6:24 PM IST

ದೇವನಹಳ್ಳಿ: 2022ರ 19 ವರ್ಷದೊಳಗಿನ ವಿಶ್ವಕಪ್ ಗೆದ್ದ ಭಾರತೀಯ ಕಿರಿಯರ ತಂಡ ಮಂಗಳವಾರ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಎಲ್ಲ ಆಟಗಾರರು ನಗರದ ತಾಜ್ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯಲಿದ್ದು, ಇಂದು ರಾತ್ರಿ ಅಹಮದಾಬಾದ್​ಗೆ ಆಟಗಾರರು ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ವೆಸ್ಟ್ ಇಂಡೀಸ್​ನಲ್ಲಿ‌ ನಡೆದ 1ಕಿರಿಯರ ವಿಶ್ವಕಪ್ ಫೈನಲ್​ನಲ್ಲಿ ಇಂಗ್ಲೆಂಡ್ ಯುವ ತಂಡವನ್ನು 4 ವಿಕೆಟ್​ಗಳಿಂದ ಮಣಿಸುವ ಮೂಲಕ ವಿಶ್ವದಾಖಲೆಯ 5ನೇ ಟ್ರೋಫಿಗೆ ಭಾರತ ಮುತ್ತಿಕ್ಕಿತ್ತು. ಈ ಹಿಂದೆ ಭಾರತ 2000, 2008, 2012, 2018ರಲ್ಲಿ ವಿಶ್ವಚಾಂಪಿಯನ್​ ಆಗಿ ಹೊರ ಹೊಮ್ಮಿತ್ತು.

ತವರಿಗೆ ಮರಳಿದ ವಿಶ್ವಕಪ್ ಗೆದ್ದ ಭಾರತ ಯುವ ತಂಡ

ಮಂಗಳವಾರ ಟ್ರೋಫಿಯೊಂದಿಗೆ ಯಶ್​ ಧುಲ್​ ಪಡೆ ತವರಿಗೆ ವಾಪಸ್​ ಆಗಿದೆ. ವೆಸ್ಟ್ ಇಂಡೀಸ್​ನಿಂದ ದುಬೈ ಮಾರ್ಗವಾಗಿ ಟೀಮ್ ಇಂಡಿಯಾ ಆಟಗಾರರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣಕ್ಕೆ ಆಗಮಿಸಿದರು. ವಿಮಾನ ನಿಲ್ದಾಣದ ಬಳಿಯಿರುವ ತಾಜ್ ಹೋಟೆಲ್​ನಲ್ಲಿ ಇಂದು ವಿಶ್ರಾಂತಿ ಪಡೆಯಲಿದ್ದು, ಬುಧವಾರ ಬಿಸಿಸಿಐ ವಿಶ್ವಕಪ್​ ಗೆದ್ದ ತಂಡಕ್ಕೆ ಸನ್ಮಾನ ಕಾರ್ಯಕ್ರಮ ಆಯೋಜಿಸಿರುವುದರಿಂದ ಇಂದು ಸಂಜೆ ಅಹಮದಾಬಾದ್​ಗೆ ಪ್ರಯಾಣ ಬೆಳೆಸಲಿದ್ದಾರೆ.

ಸ್ವಾಗತಕ್ಕೆ ಬಾರದ ಅಧಿಕಾರಿಗಳು:

ದೇಶಕ್ಕೆ ವಿಶ್ವಕಪ್​ ಗೆದ್ದು ತಂದ ಯುವಪಡೆಯನ್ನು ಬಿಸಿಸಿಐನ ಯಾವುದೇ ಅಧಿಕಾರಿಗಳು ಸ್ವಾಗತ ಕೋರಲು ಆಗಮಿಸಿರಲಿಲ್ಲ. ಅಲ್ಲದೇ ವಿಮಾನ ನಿಲ್ದಾಣದಿಂದ ಹೋಟೆಲ್​ಗೆ ಪ್ರಯಾಣಿಸಲು ಸೂಕ್ತ ವಾಹನ ವ್ಯವಸ್ಥೆ ಮಾಡದಿದ್ದರಿಂದ, ಯುವ ಪ್ರತಿಭೆಗಳು ಕೆಲಕಾಲ ರಸ್ತೆಯಲ್ಲಿ ಕಾರುಗಳಿಗೆ ಕಾಯುತ್ತಿದ್ದ ಸ್ಥಿತಿ ಕಂಡು ಬಂದಿತು.

ಇದನ್ನೂ ಓದಿ:ಕ್ರಿಕೆಟ್​ ಬಿಟ್ಟು ನಿಮ್ಮಪ್ಪನ ಜೊತೆ ಆಟೋ ಓಡಿಸ್ಕೊಂಡಿರು ಎಂದಿದ್ರು.. ಧೋನಿ ಮಾತು ನನ್ನಲ್ಲಿ ವಿಶ್ವಾಸ ತರಿಸಿದವು: ಸಿರಾಜ್​​

Last Updated : Feb 8, 2022, 6:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.