ಬೆಂಗಳೂರು: ಕೊರೊನಾ ರೋಗಿಯನ್ನು ನೋಡಲು ಬಿಡದ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿ ದಾಂಧಲೆ ನಡೆಸಿದ್ದ ಇಬ್ಬರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ನಾಗರಬಾವಿ ಪ್ರಶಾಂತ್ ಮತ್ತು ಬ್ಯಾಡರಹಳ್ಳಿಯ ವೆಂಕಟೇಶ್ ಬಂಧಿತರು. ಇತ್ತೀಚೆಗೆ ಆರೋಪಿಗಳ ಪರಿಚಯಸ್ಥರೊಬ್ಬರಿಗೆ ಕೊರೊನಾ ಸೋಂಕು ತಗುಲಿತ್ತು. ಅವರನ್ನು ಕೆಂಗೇರಿ ಬಳಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಕೋವಿಡ್ ವಾರ್ಡ್ಗೆ ದಾಖಲಿಸಲಾಗಿತ್ತು.
ಸೋಮವಾರ ರಾತ್ರಿ ಏಕಾಏಕಿ ಆಸ್ಪತ್ರೆಗೆ ಬಂದ ಆರೋಪಿಗಳು, ಕೊರೊನಾ ಸೋಂಕಿತನ್ನು ನೋಡಲು ಅವಕಾಶ ಮಾಡಿಕೊಡುವಂತೆ ಕೇಳಿದ್ದಾರೆ. ಪ್ರವೇಶ ನಿರಾಕರಿಸಿದಕ್ಕೆ ಆಕ್ರೋಶಗೊಂಡ ಆರೋಪಿಗಳು, ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ದಾಂಧಲೆ ನಡೆಸಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಮನೆಯವರಿಗೆ ಬೇಡವಾದ ಅಜ್ಜಿ ಬೀದಿಪಾಲು... ಮನವೊಲಿಸಿ ಮನೆಗೆ ಬಿಟ್ಟ ಸ್ನೇಹಜೀವಿ ಬಳಗ!