ETV Bharat / city

ಅಮೆರಿಕ ಮೂಲದ ಮಹಿಳೆಗೆ 2.5 ಕೋಟಿ ವಂಚನೆ : ಬಿಹಾರ ಮೂಲದ ಆರೋಪಿ ಬಂಧನ - ETV Bharat Kannada

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಣಿ ತಿರುಮಲೈಗೆ ಸಹಾಯ ಮಾಡುತ್ತಾ ನಂಬಿಕೆ ಸಂಪಾದಿಸಿದ್ದ ಆರೋಪಿ ಅವರ ಮಗನಂತೆ ಬಾಂಧವ್ಯ ಬೆಳೆಸಿಕೊಂಡು, ಎರಡೂವರೆ ಕೋಟಿ ವಂಚಿಸಿ ನಂಬಿಕೆ ದ್ರೋಹ ಎಸಗಿದ್ದಾನೆ.

Bihar based accused arrested
ಬಿಹಾರ ಮೂಲದ ಆರೋಪಿ ಬಂಧನ
author img

By

Published : Aug 5, 2022, 9:03 AM IST

ಬೆಂಗಳೂರು : ಅಮೆರಿಕದಿಂದ ಮರಳಿ ಭಾರತದಲ್ಲಿ ನೆಲೆಯೂರುವ ಪ್ರಯತ್ನದಲ್ಲಿದ್ದ ಮಹಿಳೆಗೆ ಬರೋಬ್ಬರಿ 2.5 ಕೋಟಿ ವಂಚಿಸಿದ ಸರ್ವಿಸ್ ಅಪಾರ್ಟ್‌ಮೆಂಟ್ ಸಿಬ್ಬಂದಿಯೊಬ್ಬನನ್ನು ಹುಳಿಮಾವು ಠಾಣಾ ಪೊಲೀಸರು ಬಂಧಿಸಿದ್ದಾರೆ. 35 ವರ್ಷದ ಬಿಹಾರ ಮೂಲದ ಕನ್ಹಯ್ಯ ಕುಮಾರ್ ಯಾದವ್ ಬಂಧಿತ ಆರೋಪಿ. 75 ವರ್ಷದ ಮಣಿ ತಿರುಮಲೈ ಮೋಸಹೋದ ಮಹಿಳೆ.

1973ರಲ್ಲಿ ಪತಿಯೊಂದಿಗೆ ಅಮೆರಿಕಕ್ಕೆ ತೆರಳಿ ನೆಲೆಸಿದ್ದ ಮಣಿ ತಿರುಮಲೈ,‌ ಪತಿಯ ನಿಧನದ ನಂತರ ಕೋವಿಡ್ ಸಂದರ್ಭದಲ್ಲಿ ಭಾರತಕ್ಕೆ ಮರಳಿದ್ದರು. ಈ ವೇಳೆ, ಹುಳಿಮಾವಿನ ಸಾರ್ವಭೌಮನಗರದ ಸರ್ವಿಸ್ ಅಪಾರ್ಟ್ಮೆಂಟ್​ವೊಂದರಲ್ಲಿ ವಾಸವಿದ್ದ ಮಣಿ ತಿರುಮಲೈಗೆ ಆರೋಪಿ ಪರಿಚಯವಾಗಿದ್ದ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಣಿ ತಿರುಮಲೈಗೆ ಸಹಾಯ ಮಾಡುತ್ತಾ ನಂಬಿಕೆ ಸಂಪಾದಿಸಿದ್ದ ಆರೋಪಿ ಅವರ ಮಗನಂತೆ ಬಾಂಧವ್ಯ ಬೆಳೆಸಿಕೊಂಡಿದ್ದ.

ಮಣಿ ತಿರುಮಲೈ ಸಹ ಆರೋಪಿಯನ್ನು ಸಂಪೂರ್ಣವಾಗಿ ನಂಬಿದ್ದರು. ಇದೇ ವೇಳೆ ಬೆಂಗಳೂರಿನಲ್ಲಿ ಮನೆ ಖರೀದಿಗಾಗಿ ಹುಡುಕಾಟ ನಡೆಸುತ್ತಿದ್ದ ತಿರುಮಲೈಗೆ ಆರೋಪಿ ಕನ್ಹಯ್ಯನೇ ಕಳೆದ ಏಪ್ರಿಲ್‌ನಲ್ಲಿ ಬಿಟಿಎಂ ಲೇಔಟ್ ನಾಲ್ಕನೇ ಹಂತದಲ್ಲಿ ನಾಲ್ಕು ಅಂತಸ್ತಿನ ಮನೆಯನ್ನು ತೋರಿಸಿದ್ದ. ಮಾತುಕತೆಯ ಬಳಿಕ 2.65 ಕೋಟಿಗೆ ಮನೆ ಖರೀದಿಗೆ ತಿರುಮಲೈ ನಿರ್ಧರಿಸಿದ್ದರು. ಅಷ್ಟರಲ್ಲಿ ತಮ್ಮ ಅನಾರೋಗ್ಯದ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದರು. ಈ ವೇಳೆ ಮನೆ ಮಾಲೀಕನಿಗೆ ಜುಲೈ ತನಕ ಕಾಯುವಂತೆ ತಿರುಮಲೈ ಹೇಳಿದ್ದರು.

ಆದರೆ, ಮಾಲೀಕ ತನಗೆ ತುರ್ತು ಹಣದ ಅವಶ್ಯಕತೆಯಿರುವುದರಿಂದ ಕಾಯಲು ಒಪ್ಪದಿದ್ದಾಗ ಆರೋಪಿ ತಿರುಮಲೈಗೆ 'ತಾವು ನನಗೆ ಹಣ ನೀಡಿದರೆ ತನ್ನ ಹೆಸರಿನಲ್ಲಿ ಮನೆ ಖರೀದಿಸಿ ನೀವು ಮರಳಿದ ಬಳಿಕ ನಿಮ್ಮ ಹೆಸರಿಗೆ ವರ್ಗಾಯಿಸಿ ಕೊಡುವುದಾಗಿ' ನಂಬಿಸಿದ್ದನು. ಆರೋಪಿಯ ಮಾತು ನಂಬಿ ಮೂರು ಚೆಕ್ ರೂಪದಲ್ಲಿ 2.5 ಕೋಟಿ ರೂವನ್ನು ತಿರುಮಲೈ ಆರೋಪಿಗೆ ನೀಡಿದ್ದರು.

ಜುಲೈ 8ರಂದು ಬೆಂಗಳೂರಿಗೆ ವಾಪಸ್​ ಆಗಿ ವಿಚಾರಿಸಿದಾಗ ಆರೋಪಿ 'ಕಾನೂನುಬದ್ಧವಾಗಿ ಮನೆ ತನ್ನ ಹೆಸರಿನಲ್ಲಿದ್ದು ಹಸ್ತಾಂತರಿಸಲು ಸಾಧ್ಯವಿಲ್ಲವೆಂದು' ಬೆದರಿಕೆ ಹಾಕಿದ್ದ. ಇದರಿಂದ ಬೇಸತ್ತ ತಿರುಮಲೈ ಜುಲೈ 28ರಂದು ಹುಳಿಮಾವು ಠಾಣೆಗೆ ದೂರು ನೀಡಿದ್ದರು. ಜುಲೈ 30ರಂದು ಮುಂಬೈಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಆರೋಪಿಯನ್ನು ಸಿಟಿ ರೈಲ್ವೇ ನಿಲ್ದಾಣದಲ್ಲಿ ಹುಳಿಮಾವು ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ‌.

ಇದನ್ನೂ ಓದಿ : ಕೆನಡಾ ಮೋಸ್ಟ್ ವಾಂಟೆಡ್ ಪಟ್ಟಿ 11 ಅಪರಾಧಿಗಳಲ್ಲಿ 9 ಮಂದಿ ಭಾರತೀಯ ಮೂಲದವರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.