ETV Bharat / city

ರಾಜ್ಯದಲ್ಲಿ ಒಮಿಕ್ರಾನ್​ ಅಬ್ಬರ.. ಮೂವರು ಮಕ್ಕಳು ಸೇರಿ 23 ಹೊಸ ಸೋಂಕಿತರು ಪತ್ತೆ.. - ಕರ್ನಾಟಕದಲ್ಲಿ 23 ಒಮಿಕ್ರಾನ್​

cases of Omicron in Karnataka : ಕರ್ನಾಟಕದಲ್ಲಿಂದು ಒಂದೇ ದಿನ ದಾಖಲೆಯ 23 ಹೊಸ ಒಮಿಕ್ರಾನ್​ ಕೇಸ್​ಗಳು ಪತ್ತೆಯಾಗಿವೆ. ಇದರಲ್ಲಿ ಎರಡು ವರ್ಷದ ಮಗುವಿಗೂ ಸೋಂಕು ಇರುವುದು ಪತ್ತೆಯಾಗಿದೆ..

cases of Omicron in Karnataka
cases of Omicron in Karnataka
author img

By

Published : Dec 31, 2021, 5:19 PM IST

Updated : Dec 31, 2021, 5:39 PM IST

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್​ ಸ್ಫೋಟಗೊಂಡಿದೆ. ಒಂದೇ ದಿನ 23 ಹೊಸ ಸೋಂಕಿತ ಪ್ರಕರಣ ದಾಖಲಾಗಿವೆ. ಇದರಲ್ಲಿ 19 ಜನರು ವಿದೇಶ ಪ್ರಯಾಣದ ಹಿಸ್ಟರಿ ಹೊಂದಿದ್ದು, ಉಳಿದಂತೆ ನಾಲ್ವರು ಸ್ಥಳೀಯರು ಎಂದು ತಿಳಿದು ಬಂದಿದೆ.

ಒಮಿಕ್ರಾನ್​ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಸಚಿವ ಡಾ. ಸುಧಾಕರ್​ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ಯುಎಸ್​ಎ, ಯುರೋಪ್​, ಆಫ್ರಿಕಾ ಸೇರಿದಂತೆ ಅನೇಕ ದೇಶಗಳಿಂದ ಬಂದಿರುವ ಪ್ರಯಾಣಿಕರಲ್ಲಿ ಸೋಂಕು ಕಾಣಿಸಿದೆ ಎಂದು ತಿಳಿಸಿದ್ದಾರೆ. ಎಲ್ಲರಿಗೂ ಐಸೋಲೇಷನ್​ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕದಲ್ಲಿ ಒಮಿಕ್ರಾನ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಈಗಾಗಲೇ ನೈಟ್​ ಕರ್ಫ್ಯೂ ವಿಧಿಸಲಾಗಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಇಷ್ಟೊಂದು ಸೋಂಕಿತ ಪ್ರಕರಣ ದಾಖಲಾಗಿವೆ. ರಾಜ್ಯದಲ್ಲಿ ಸದ್ಯ 63 ಒಮಿಕ್ರಾನ್ ಸೋಂಕಿತರಿದ್ದಾರೆ.

ಯುಎಸ್ಎಯಿಂದ ಬಂದಿದ್ದ 7 ಮಂದಿಗೆ, ನೈಜೀರಿಯಾದಿಂದ ಬಂದ ಇಬ್ಬರಿಗೆ, ದಕ್ಷಿಣ ಆಫ್ರಿಕಾದ ಉಬ್ಬರು ಹಾಗೂ ಥನ್ಜಿಯಾ 3, ದುಬೈ 2, ಡೆನ್ಮಾರ್ಕ್, ಕಾಂಗೋ, ಯುಎಇ, ಯುನೈಟೆಡ್ ಕಿಂಗ್ಡಮ್​ನಿಂದ ಬಂದಿರುವ ತಲಾ ಒಬ್ಬರಲ್ಲಿ ಒಮಿಕ್ರಾನ್ ದೃಢಪಟ್ಟಿದೆ.

ಮಕ್ಕಳಲ್ಲೂ ಕಾಣಿಸಿಕೊಂಡ ಸೋಂಕು

ಥನ್ಜಿಯಾದಿಂದ ಬಂದಿರುವ 2 ವರ್ಷದ ಬಾಲಕ ಹಾಗೂ 10 ವರ್ಷದ ಬಾಲಕಿಗೆ ಹಾಗೂ ಅಮೆರಿಕಾದಿಂದ ಬಂದಿದ್ದ 12 ವರ್ಷ ಬಾಲಕಿಗೆ ಒಮಿಕ್ರಾನ್ ತಗುಲಿದ್ದು ಆತಂಕ ಮೂಡಿಸಿದೆ.

Last Updated : Dec 31, 2021, 5:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.