ETV Bharat / city

ಬಿಎಸ್​ವೈ ಭೇಟಿಯಾದ ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ.. - ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿಯೂ ಭೇಟಿ ಮಾಡಿದ್ದ ಸುಬ್ಬಾರೆಡ್ಡಿ, ಇದೀಗ ಟಿಟಿಡಿ ಅಧ್ಯಕ್ಷ ಸ್ಥಾನಕ್ಕೆ ಮರುನೇಮಕಗೊಂಡ ನಂತರ ಬೆಂಗಳೂರಿಗೆ ಮೊದಲ ಬಾರಿ ಆಗಮಿಸಿ ಬಿಎಸ್​ವೈ ಅವರನ್ನು ಭೇಟಿ ಮಾಡಿದ್ದಾರೆ. ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ..

TTD Chairman Subba Reddy meets BSY
TTD Chairman Subba Reddy meets BSY
author img

By

Published : Sep 3, 2021, 3:58 PM IST

ಬೆಂಗಳೂರು : ಆಂಧ್ರಪ್ರದೇಶದ ತಿರುಮಲದಲ್ಲಿರುವ ತಿರುಪತಿ ದೇವಾಲಯದ ಆಡಳಿತ ಮಂಡಳಿಯಾದ 'ತಿರುಮಲ ತಿರುಪತಿ ದೇವಸ್ಥಾನಂ' (ಟಿಟಿಡಿ) ಅಧ್ಯಕ್ಷ ವೈ ವಿ ಸುಬ್ಬಾರೆಡ್ಡಿ ಅವರು ಇಂದು ಬೆಂಗಳೂರಿಗೆ ಆಗಮಿಸಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದರು.

ಬಿಎಸ್​ವೈ ಭೇಟಿಯಾದ ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ

ಕಾವೇರಿ ನಿವಾಸಕ್ಕೆ ಆಗಮಿಸಿದ ಸುಬ್ಬಾರೆಡ್ಡಿ ಅವರನ್ನು ಬಿಎಸ್​ವೈ ಆತ್ಮೀಯವಾಗಿ ಬರಮಾಡಿಕೊಂಡು ಸತ್ಕರಿಸಿದರು. ಈ ವೇಳೆ ತಿಮ್ಮಪ್ಪನ ಪ್ರಸಾದವನ್ನು ಯಡಿಯೂರಪ್ಪ ಅವರಿಗೆ ನೀಡಿದ ಸುಬ್ಬಾರೆಡ್ಡಿ, ದೇವಸ್ಥಾನ ಸಮಿತಿ ಪರವಾಗಿ ಸನ್ಮಾನಿಸಿ ಗೌರವಿಸಿದರು.

ಇದನ್ನೂ ಓದಿ: ತಿರುಮಲದ ಅಂಜನಾದ್ರಿ ಹನುಮನ ನಿಜವಾದ ಜನ್ಮಸ್ಥಳ- ಟಿಟಿಡಿ ಘೋಷಣೆ

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿಯೂ ಭೇಟಿ ಮಾಡಿದ್ದ ಸುಬ್ಬಾರೆಡ್ಡಿ, ಇದೀಗ ಟಿಟಿಡಿ ಅಧ್ಯಕ್ಷ ಸ್ಥಾನಕ್ಕೆ ಮರುನೇಮಕಗೊಂಡ ನಂತರ ಬೆಂಗಳೂರಿಗೆ ಮೊದಲ ಬಾರಿ ಆಗಮಿಸಿ ಬಿಎಸ್​ವೈ ಅವರನ್ನು ಭೇಟಿ ಮಾಡಿದ್ದಾರೆ. ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.