ETV Bharat / city

20 ಟನ್​ ತಾಜಾ ತರಕಾರಿಯಲ್ಲಿ ಅರಳಿತು ತ್ರಿವರ್ಣ ಧ್ವಜ.. ಆಹಾರೋತ್ಪನ್ನದಲ್ಲಿ ಭಾರತದ ಪ್ರಗತಿ - 20 ಟನ್​ ತಾಜಾ ತರಕಾರಿಯಲ್ಲಿ ಅರಳಿತು ತ್ರಿವರ್ಣ ಧ್ವಜ

75ನೇ ಸ್ವಾತಂತ್ರ‍್ಯ ದಿನಾಚರಣೆ ಹಾಗೂ ಆಜಾದಿ ಕಾ ಅಮೃತ್ ಮಹೋತ್ಸವ ಸ್ಮರಣಾರ್ಥ ಭಾರತದ ಪ್ರಮುಖ ಆಹಾರ ಮತ್ತು ಕೃಷಿ ತಂತ್ರಜ್ಞಾನ ವೇದಿಕೆಯಾದ ವೇ ಕೂಲ್ ಫುಡ್ಸ್ ಸಂಸ್ಥೆ ಇಂದು ಸುಮಾರು 7632 ಚದರ್​ ಅಡಿಗಳಷ್ಟು ವಿಸ್ತಾರವಾದ ಆಹಾರ ಧ್ವಜ ರಚಿಸಿದೆ.

A tricolor flag prepared with fresh vegetables
ತಾಜಾ ತರಕಾರಿಗಳಿಂದ ತಯಾರಾದ ತ್ರಿವರ್ಣ ಧ್ವಜ
author img

By

Published : Aug 15, 2022, 12:41 PM IST

Updated : Aug 15, 2022, 2:24 PM IST

ಬೆಂಗಳೂರು : ದೇಶದೆಲ್ಲೆಡೆ 75ನೇ ಸ್ವಾತಂತ್ರೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಹರ್ ಘರ್ ತಿರಂಗಾ ಅಭಿಯಾನದ ಹಿನ್ನೆಲೆಯಲ್ಲಿ, ನಮ್ಮ‌ ತ್ರಿವರ್ಣ ಧ್ವಜವನ್ನು ವಿಶೇಷವಾಗಿ ತೋರಿಸುವ ಹಂಬಲ ಇರುತ್ತೆ. ಹೀಗಾಗಿ ಭಾರತದ ಪ್ರಮುಖ ಆಹಾರ ಮತ್ತು ಕೃಷಿ ತಂತ್ರಜ್ಞಾನ ವೇದಿಕೆಯಾದ ವೇ ಕೂಲ್ ಫುಡ್ಸ್ ಸಂಸ್ಥೆ, ಸುಮಾರು 20 ಟನ್ ತೂಕದ ವಿವಿಧ ತರಕಾರಿಗಳನ್ನು ಒಳಗೊಂಡಂತೆ ಗ್ರ್ಯಾಂಡ್ ಇಂಡಿಯನ್ ಫುಡ್ ಫ್ಲ್ಯಾಗ್ ಅನ್ನು ರಚಿಸಿದೆ.

ಭಾರತದ ಪ್ರಮುಖ ಆಹಾರ ಮತ್ತು ಕೃಷಿ ತಂತ್ರಜ್ಞಾನ ವೇದಿಕೆಯಾದ ವೇ ಕೂಲ್ ಫುಡ್ಸ್, ಬೆಂಗಳೂರಿನ ಕನ್ನಮಂಗಲದಲ್ಲಿರುವ ಅದರ ವಿತರಣಾ ಕೇಂದ್ರದ ಬಳಿ 75ನೇ ಸ್ವಾತಂತ್ರ‍್ಯ ದಿನಾಚರಣೆ - ಆಜಾದಿ ಕಾ ಅಮೃತ್ ಮಹೋತ್ಸವ ಸಂಸ್ಮರಣಾರ್ಥ ಇಂದು ಸುಮಾರು 7632 ಚದರ್​ ಅಡಿಗಳಷ್ಟು ವಿಸ್ತಾರವಾದ ಆಹಾರ ಧ್ವಜವನ್ನು ರಚಿಸಿದೆ.

ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ಪ್ರಗತಿ.. ಹಿಂದೆ ಆಹಾರದ ಕೊರತೆ ಎದುರಿಸುತ್ತಿದ್ದ ದೇಶಗಳ ಪಟ್ಟಿಯಲ್ಲಿದ್ದ ಭಾರತವು ಇಂದು ಅಗತ್ಯಕ್ಕಿಂತ ಹೆಚ್ಚು ಆಹಾರ ಉತ್ಪಾದನೆಯಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ ಮತ್ತು ಜಗತ್ತಿಗೆ ಆಹಾರ ಶಕ್ತಿ ಕೇಂದ್ರವಾಗುವತ್ತ ಸಾಗಿದೆ. ಅದರ ಪ್ರಯಾಣದ ಸಂಕೇತ ಈ ಆಹಾರದ ಧ್ವಜವಾಗಿದೆ. ಇಂದು ಭಾರತ ವಿಶ್ವದ ಹಣ್ಣುಗಳು ಮತ್ತು ತರಕಾರಿಗಳ ಅತಿದೊಡ್ಡ ಉತ್ಪಾದಕರಲ್ಲಿ ಭಾರತವೂ ಒಂದಾಗಿದೆ.

ತಾಜಾ ತರಕಾರಿಗಳಿಂದ ತಯಾರಾದ ತ್ರಿವರ್ಣ ಧ್ವಜ

ಹರ್​ ಘರ್​ ತಿರಂಗಾ ಭಾಗವಾಗಿ ಧ್ವಜ ರಚನೆ.. ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ, ವೇಕೂಲ್ ಸಂಸ್ಥೆ ಭಾರತದಲ್ಲಿ ಬೆಳೆದ ತಾಜಾ ಉತ್ಪನ್ನಗಳಾದ ಕ್ಯಾರೆಟ್, ಮೂಲಂಗಿ, ಹಸಿರು ಬೆಂಡೆಕಾಯಿ, ಬೀನ್ಸ್, ಕ್ಯಾಪ್ಸಿಕಂ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಾದ ಪೊಟ್ಯಾಟೊ ಫ್ಲೇಕ್ಸ್ ಮುಂತಾದವುಗಳ ಉತ್ತಮ ಆಯ್ಕೆಯೊಂದಿಗೆ ಧ್ವಜದ ತ್ರಿವರ್ಣಗಳನ್ನು ಯಶಸ್ವಿಯಾಗಿ ಮರುಸೃಷ್ಟಿಸಿದೆ.

ಈ ಧ್ವಜ ನಿರ್ಮಿಸಲು 20 ಟನ್‌ಗಳಿಗಿಂತ ಹೆಚ್ಚು ಮತ್ತು ವಿವಿಧ ಬಗೆಯ ತಾಜಾ ಉತ್ಪನ್ನಗಳನ್ನು ಬಳಸಲಾಗಿತ್ತು. ಇದು ಭಾರತದ ಬಹುಮುಖಿ ವ್ಯಕ್ತಿತ್ವ ಮತ್ತು ಕೃಷಿ ಉತ್ಪನ್ನದ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ. ಧ್ವಜಕ್ಕೆ ಕೇಸರಿ ಬಣ್ಣವನ್ನು ಕ್ಯಾರೆಟ್‌ಗಳಿಂದ, ಮೂಲಂಗಿ ಮತ್ತು ಆಲೂಗಡ್ಡೆ ತುಂಡುಗಳಿಂದ ಬಿಳಿ ಬಣ್ಣವನ್ನು ರೂಪಿಸಲಾಯಿತು. ಕ್ಯಾಪ್ಸಿಕಂ, ಬೀನ್ಸ್ ಮತ್ತು ಬೆಂಡೆಕಾಯಿಗಳೊಂದಿಗೆ ಹಸಿರು ಬಣ್ಣವನ್ನು ನೀಡಲಾಗಿತ್ತು.

ಪ್ರದರ್ಶನದಲ್ಲಿ ಬಳಸಿದ ಉತ್ಪನ್ನಗಳಲ್ಲಿ ಒಂದು ಗ್ರಾಂ ಕೂಡ ವ್ಯರ್ಥವಾಗದೇ ಇರುವುದನ್ನು ಖಾತ್ರಿಮಾಡಿಕೊಳ್ಳಲು ಕಂಪನಿಯು ತನ್ನ ಸಂಗ್ರಹಣೆ ಮತ್ತು ನಿರ್ವಹಣೆ ತಂತ್ರಜ್ಞಾನಗಳನ್ನು ಬಳಸಿತಲ್ಲದೇ ಉತ್ಪನ್ನಗಳನ್ನು ಅತ್ಯುತ್ತಮ ನೈರ್ಮಲ್ಯಪೂರ್ಣ ರೀತಿಗಳಲ್ಲಿ ನಿರ್ವಹಿಸಲಾಗಿದೆ. ಕಾರ್ಯಕ್ರಮದ ನಂತರ ಧ್ವಜ ರಚನೆಯಲ್ಲಿ ಬಳಸಲಾದ ಹಣ್ಣುಗಳು ಮತ್ತು ತರಕಾರಿಗಳನ್ನು ತಕ್ಷಣವೇ ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ನೀಡಲಾಯಿತು.

ಅತ್ಯಂತ ದೊಡ್ಡ ಆಹಾರ ಧ್ವಜಗಳಲ್ಲಿ ಒಂದನ್ನು ಸೃಷ್ಟಿಸುವುದರ ಜೊತೆಗೆ ಕಂಪನಿಯು ಸ್ವಲ್ಪವೂ ಆಹಾರ ವ್ಯರ್ಥವಾಗದೇ ಅಗತ್ಯವಿರುವವರಿಗೆ ತಲುಪುವ ಖಾತ್ರಿ ಮಾಡಿಕೊಂಡಿದೆ. ಈ ಧ್ವಜ ನಿರ್ಮಿಸಲು 20 ಟನ್‌ಗಳಿಗಿಂತ ಹೆಚ್ಚು ಮತ್ತು ವಿವಿಧ ಬಗೆಯ ತಾಜಾ ಉತ್ಪನ್ನಗಳನ್ನು ಬಳಸಲಾಗಿತ್ತು. ಈ ಎಲ್ಲ ಉತ್ಪನ್ನಗಳನ್ನು ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ನೀಡಿರುವುದು ವಿಶೇಷ.

ಇದನ್ನೂ ಓದಿ : ತ್ರಿವರ್ಣದಲ್ಲಿ ಮದುವಣಗಿತ್ತಿಯಂತೆ ಸಿಂಗಾರಗೊಂಡ ಸುವರ್ಣಸೌಧ.. ಸಾರ್ವಜನಿಕ ಪ್ರವೇಶ ನಿಷೇಧಕ್ಕೆ ವಿರೋಧ

Last Updated : Aug 15, 2022, 2:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.