ETV Bharat / city

ಇಎಸ್​ಐ ಆಸ್ಪತ್ರೆಯಲ್ಲಿ ಮೃತದೇಹದ ಪಕ್ಕದಲ್ಲೇ ಸೋಂಕಿತರಿಗೆ ಚಿಕಿತ್ಸೆ: ವೈದ್ಯರು ಹೇಳಿದ್ದೇನು?

author img

By

Published : Apr 15, 2021, 3:48 PM IST

Updated : Apr 15, 2021, 9:47 PM IST

ಇದು ಸಿಬ್ಬಂದಿ ಅಥವಾ ವೈದ್ಯರ ನಿರ್ಲಕ್ಷ್ಯ ಖಂಡಿತಾ ಅಲ್ಲ. ಪಿಪಿಇ ಕಿಟ್ ಧರಿಸಿ ಎಂಟು ಗಂಟೆಗಳ ಕಾಲ ನೀರು ಕುಡಿಯದೇ, ಶೌಚಾಲಯ ಬಳಸದೆ ಉಸಿರುಗಟ್ಟಿ ಕೆಲಸ ಮಾಡಬೇಕಾಗುತ್ತದೆ. ಹೀಗಿರುವಾಗ ಕೋವಿಡ್ ಮೃತದೇಹವನ್ನು ತಕ್ಷಣ ಐಸಿಯುನಿಂದ ಹೊರಗೆ ಹಾಕಲು ಸಾಧ್ಯವಾಗುವುದಿಲ್ಲ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

ಚಿಕಿತ್ಸೆ
ಚಿಕಿತ್ಸೆ

ಬೆಂಗಳೂರು: ರಾಜಾಜಿನಗರದ ಇಎಸ್​ಐ ಆಸ್ಪತ್ರೆಯಲ್ಲಿ ಸೋಂಕಿತರ ಪಕ್ಕದಲ್ಲೇ ಕೋವಿಡ್​ನಿಂದ ಸಾವನ್ನಪ್ಪಿದವರ ಮೃತದೇಹವನ್ನು ಇಟ್ಟಿರುವ ಘಟನೆ ನಡೆದಿದೆ. ರೋಗಿಗಳ ಪಕ್ಕದಲ್ಲೇ ಡೆಡ್ ಬಾಡಿ ಇಟ್ಟು ಆಸ್ಪತ್ರೆ ಸಿಬ್ಬಂದಿ ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ. ಇದು ಸೋಂಕಿತರ ಮನಸ್ಥಿತಿ ಮೇಲೆ ಇನ್ನಷ್ಟು ಕೆಟ್ಟ ಪರಿಣಾಮ ಬೀರಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಇದು ಸಿಬ್ಬಂದಿ ಅಥವಾ ವೈದ್ಯರ ನಿರ್ಲಕ್ಷ್ಯ ಖಂಡಿತಾ ಅಲ್ಲ ಎಂದು ಆಸ್ಪತ್ರೆ ಸ್ಪಷ್ಟನೆ ನೀಡಿದೆ

ಕಳೆದ ನಾಲ್ಕು ದಿನಗಳ ಹಿಂದೆ ಶಂಕರಮಠ ವಾರ್ಡ್ ನಿವಾಸಿಯಾಗಿದ್ದ 73 ವರ್ಷದ ಮಹಿಳೆಗೆ ಕೊರೊನಾ ದೃಢವಾಗಿದ್ದು, ರಾಜಾಜಿನಗರ ಇಎಸ್​ಐ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೇ ವೇಳೆ, ಮಾಜಿ ಕಾರ್ಪೋರೇಟರ್ ಎಮ್.ಶಿವರಾಜು ಆಸ್ಪತ್ರೆಯ ಕೋವಿಡ್ ವಾರ್ಡ್​ಗೆ ಭೇಟಿ ನೀಡಿ ವೃದ್ಧೆ ಹಾಗೂ ಇತರ ಸೋಂಕಿತರ ಸಮಸ್ಯೆ ಆಲಿಸಿದ್ದರು.

ಈ ವೇಳೆ, ಇಎಸ್​ಐ ಆಸ್ಪತ್ರೆಯ ಕೋವಿಡ್ ಸೋಂಕಿತರು ಇರುವ ಆವರಣದಲ್ಲೇ ಮರಣ ಹೊಂದಿದವರ ಶವ ಇಟ್ಟಿದ್ದು, ಇದರಿಂದ ಸೋಂಕಿತರು ಮಾನಸಿಕವಾಗಿ ನರಳುವಂತಾಗಿದೆ ಎಂದು ಎಮ್.ಶಿವರಾಜು ಆತಂಕ ವ್ಯಕ್ತಪಡಿಸಿ, ಆಸ್ಪತ್ರೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಮೃತದೇಹದ ಪಕ್ಕದಲ್ಲೇ ಇಟ್ಟು ಸೋಂಕಿತರಿಗೆ ಚಿಕಿತ್ಸೆ

ವೈದ್ಯರಿಂದ ಸ್ಪಷ್ಟನೆ:

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ವೈದ್ಯರು, ಐಸಿಯುನಲ್ಲಿ ಕೋವಿಡ್ ರೋಗಿ ಮೃತಪಟ್ಟರೆ ಕೆಲ ಪ್ರಕ್ರಿಯೆ ಇರುತ್ತದೆ. ಐಸಿಯುನಿಂದ ಶವಾಗಾರಕ್ಕೆ ಹೆಣ ಸಾಗಿಸಬೇಕಂದ್ರೂ ಕೆಲವು ಹಂತಗಳು ಇರುತ್ತದೆ. ಇದು ಸಿಬ್ಬಂದಿ ಅಥವಾ ವೈದ್ಯರ ನಿರ್ಲಕ್ಷ್ಯ ಖಂಡಿತಾ ಅಲ್ಲ. ಪಿಪಿಇ ಕಿಟ್ ಧರಿಸಿ ಎಂಟು ಗಂಟೆಗಳ ಕಾಲ ನೀರು ಕುಡಿಯದೇ, ಶೌಚಾಲಯ ಬಳಸದೇ ಉಸಿರುಗಟ್ಟಿ ಕೆಲಸ ಮಾಡಬೇಕಾಗುತ್ತದೆ. ಹೀಗಿರುವಾಗ ಕೋವಿಡ್ ಮೃತದೇಹವನ್ನು ತಕ್ಷಣ ಐಸಿಯುನಿಂದ ಹೊರಗೆ ಹಾಕಲು ಸಾಧ್ಯವಾಗುವುದಿಲ್ಲ.

ಈ ವ್ಯವಸ್ಥೆಯಲ್ಲಿ ಕಡಿಮೆ ಅಂದ್ರೂ 4 ರಿಂದ 6 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಸ್ವಾಬ್ ತೆಗೆಯಬೇಕು, ಬಿಬಿಎಂಪಿಗೆ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ನಂತರವಷ್ಟೇ ಶಿಫ್ಟ್ ಮಾಡಲು ಸಾಧ್ಯ. ಹೀಗಿರುವಾಗ ಸಿಬ್ಬಂದಿ, ವೈದ್ಯರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ಎಂದು ಇಎಸ್​ಐ ಆಸ್ಪತ್ರೆ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ.. ಲೇ ಸಿದ್ದರಾಮಯ್ಯ ಸುಮ್ಮನಿರಲೇ ಎಂದು ಹೇಳುವುದಕ್ಕೆ ನನಗೆ ಬರೋದಿಲ್ವಾ: ಸಚಿವ ಈಶ್ವರಪ್ಪ

Last Updated : Apr 15, 2021, 9:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.