ETV Bharat / city

ಪೊಲೀಸ್ ಇಲಾಖೆಗೆ ಕಂಟಕವಾದ ಕೊರೊನಾ: ಬೆಂಗಳೂರಿನಲ್ಲಿ ಸಂಚಾರಿ ಎಎಸ್​ಐ ಬಲಿ

ಬೆಂಗಳೂರಿನಲ್ಲಿ ಕೊರೊನಾ ಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಸಂಚಾರಿ ಠಾಣೆಯೊಂದರ ಎಎಸ್​ಐ ಸೋಂಕಿಗೆ ಬಲಿಯಾಗಿದ್ದಾರೆ.

corona
ಕೊರೊನಾ
author img

By

Published : Jun 21, 2020, 10:43 AM IST

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ದಿನೇದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ ವಾರಿಯರ್​ಗಳೂ ಸೋಂಕಿಗೆ ಬಲಿಯಾಗುತ್ತಿದ್ದು ಆತಂಕ ಮೂಡಿಸಿದೆ. 59 ವರ್ಷದ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್​ ಠಾಣೆಯ ಎಎಸ್ಐ ಕೊರೊನಾ ಸೋಂಕಿನಿಂದ ಇಂದು ಮೃತಪಟ್ಟಿದ್ದಾರೆ.

ವಿಲ್ಸನ್ ಗಾರ್ಡನ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕಳೆದ‌ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಜೂನ್​ 18ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇದೇ ಬರುವ ಡಿಸೆಂಬರ್​ಗೆ ನಿವೃತ್ತಿಯಾಗಬೇಕಿದ್ದ ಇವರು ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದರಿಂದ ಎಎಸ್​ಐ ಜೊತೆ ಸಂಪರ್ಕ ಹೊಂದಿದವರನ್ನ ಕ್ವಾರಂಟೈನ್ ಮಾಡಿ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.